ಧರ್ಮಸ್ಥಳ: ಲಕ್ಷದೀಪೋತ್ಸವ ಸಂದರ್ಭದಲ್ಲಿ ಅರುವತ್ತು ವರ್ಷದ ಮಹಿಳೆಯೊಬ್ಬರು ಸುಲಲಿತ ವ್ಯವಹಾರ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.
ಜೀವನೋಪಾಯಕ್ಕಾಗಿ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂದರ್ಭ ವ್ಯಾಪಾರದ ಪುಟ್ಟ ಅಂಗಡಿಯನ್ನುತೆರೆದವರು ಲಿತಮ್ಮ. ನೆಲ್ಲಿಕಾಯಿ, ಮಾವಿನ ಮಿಡಿ, ಪೇರಳೆ ಮೊದಲಾದ ಸತ್ವಪೂರ್ಣ ಗ್ರಾಮೀಣ ಪೌಷ್ಠಿಕ ಆಹಾರಗಳು ಇವರಲ್ಲಿ ಮಿತದರದಲ್ಲಿ ಸಿಗುತ್ತವೆ. 25 ವರ್ಷಗಳ ಹಿಂದೆ ಇವರ ಗಂಡ ನಿಧನರಾದ ಬಳಿಕ “ಕಾಯಕವೇ ಕೈಲಾಸ” ಎಂದು ನಂಬಿ ಪುಟ್ಟ ಅಂಗಡಿ ಪ್ರಾರಂಭಿಸಿದ ಇವರು ಪ್ರಾಮಾಣಿಕ ವ್ಯವಹಾರ ನಡೆಸುತ್ತಾರೆ. ಅತಿಯಾದ ಲಾಭಗಳಿಸುವ ಹಂಬಲ ಈಕೆಗಿಲ್ಲ.
ಎಲ್ಲಾಖರ್ಚು, ವೆಚ್ಚ ಕಳೆದು ದಿನಕ್ಕೆ ಇನ್ನೂರು ರೂ.ನಿವ್ವಳ ಲಾಭಗಳಿಸುತ್ತೇನೆ. ಇದರಲ್ಲೆ ತನಗೆ ತೃಪ್ತಿ, ಸಂತೋಷವಿದೆ ಎಂದು ಲಲಿತಮ್ಮ ಮಂದಹಾಸ ಬೀರುತ್ತಾರೆ.
ವ್ಯವಹಾರದಲ್ಲಿ ಎದುರಾಗುವ ಸಣ್ಣಪುಟ್ಟ ಸವಾಲುಗಳನ್ನು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಲಲಿತಮ್ಮ.
ಸಾಮಾನ್ಯವಾಗಿ 60ರ ನಂತರ ಅರಳು ಮರಳು ಎನ್ನುತ್ತಾರೆ. ಆದರೆ ಲಲಿತಮ್ಮನ ಜೀವನದಲ್ಲಿ 60ರ ಹರೆಯ ಮರಳಿ ಅರಳುವ ಪ್ರಾಯ. ಏಕೆಂದರೆ ಅವರಲ್ಲಿ ಜೀವನ ಪ್ರೀತಿ ಹಾಗೂ ಲವಲವಿಕೆ ನಿತ್ಯನೂತನವಾಗಿದೆ.
ಹರಿಯಾಣ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಯಮುನಾ ನಗರದಲ್ಲಿ ಇಂದು ಧೀನಬಂಧು ಚೋಟು…
ಚಾಮರಾಜನಗರ ಜಿಲ್ಲೆಯ ಸಿದ್ದಾಪುರ ಗ್ರಾಮದ ಸಾವಿರಾರು ಎಕರೆ ಜಮೀನು ರಾಜವಂಶಸ್ಥರಿಗೆ ಸೇರಿದ್ದು, ಅದನ್ನು…
15.04.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ಸ್ಮಾರ್ಟ್ ಕೃಷಿಯು ಕೃಷಿ ವಲಯದಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದೆ. ತಂತ್ರಜ್ಞಾನ, ಯಾಂತ್ರೀಕರಣ ಮತ್ತು…
ಮಂಡ್ಯ ಮೈಷುಗರ್ ಕಾರ್ಖಾನೆಯಲ್ಲಿ ಪ್ರಸಕ್ತ ಸಾಲಿನ ಕಬ್ಬು ಅರೆಯುವ ಪ್ರಕ್ರಿಯೆ ಜೂನ್ 30ರಿಂದ…
ಇಂದು ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಂತಿಯಾಗುತ್ತಿದೆ. 8 ಲಕ್ಷಕ್ಕೂ ಅಧಿಕ ಸಹಕಾರಿ ಸಂಘಗಳು…