ನವದೆಹಲಿ: ಭಾರತದಲ್ಲಿ ಲಾಕ್ಡೌನ್ 4.0 ಪಕ್ಕಾ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಆದರೆ, ಹೊಸ ರೂಪು ರೇಷೆಗಳಿಂದ ಸುಧಾರಿತವಾಗಿರಲಿದೆ ಎಂದು ತಿಳಿಸಿದ್ದಾರೆ. ಮೇ.18 ಕ್ಕೂ ಮೊದಲು ಹೊಸ ಮಾರ್ಗಸೂಚಿಗಳನ್ನು ಘೋಷಿಸುವುದಾಗಿ ಘೋಷಣೆ ಮಾಡಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಕೊರೊನಾ ವಿರುದ್ಧ ಸಕಾರಾತ್ಮಕವಾಗಿ ಹೋರಾಡಿದಲ್ಲಿ ಮಾತ್ರ ಕೊರೊನಾ ವೈರಸ್ ವಿರುದ್ಧ ಜಯ ಗಳಿಸಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್ ವಿರುದ್ಧ ಹೋರಾಡಲು ಹಲವು ರಾಷ್ಟ್ರಗಳು ವಿಫಲವಾಗಿದೆ, ಭಾರತವು ಎಲ್ಲರ ಸಹಕಾರದಿಂದ ಇದುವರೆಗೆ ಯಶಸ್ಸು ಕಂಡಿದೆ ಎಂದ ಪ್ರಧಾನಿಗಳು ದೇಶದ ಶ್ರಮಿಕರು, ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಜನರಿಗಾಗಿ 20 ಲಕ್ಷ ಕೋಟಿ ರೂಪಾಯಿಯ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ದೇಶದ ಜಿಡಿಪಿಯ ಶೇ.10ರಷ್ಟು ಅನುದಾನ ಇದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಭಾರತದಲ್ಲಿ ಘೋಷಣೆಯಾಗಿರುವ ಆರ್ಥಿಕ ಪ್ಯಾಕೇಜ್ ಮುಂದಿನ ದಿನಗಳಲ್ಲಿ ಎಲ್ಲ ವಲಯಗಳಿಗೆ ಪೂರಕವಾಗಲಿದ್ದು , ಜನ್ ಧನ್, ಆಧಾರ್ ಹಾಗೂ ಮೊಬೈಲ್ ಮೂಲಕ ನೇರವಾಗಿ ಜನರ ಖಾತೆಗೆ ಹಣ ಬೀಳಲಿದೆ ಎಂದರು. ಸ್ವದೇಶಿ ವಸ್ತುಗಳ ಉತ್ಪಾದನೆ ಪೂರೈಕೆಗೆ ಆರ್ಥಿಕ ಪ್ಯಾಕೇಜ್ ನಲ್ಲಿ ಒತ್ತು ನೀಡಲಿದೆ ಎಂದರು.
ಕೊರೊನಾ ವೈರಸ್ ಬಹಳ ಸಮಯದವರೆಗೆ ಇರುತ್ತದೆ, ಅದು ನಮ್ಮ ಜೀವನದ ಭಾಗವಾಗಲಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ನಮ್ಮ ಜೀವನವು ಕೊರೊನಾ ಸುತ್ತಲೂ ಸೀಮಿತವಾಗಿರಲು ಸಾಧ್ಯವಿಲ್ಲ. ನಾವು, ಮಾಸ್ಕ್ ಧರಿಸಿ ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಂಡರೆ ನಮ್ಮ ಮೇಲೆ ಪರಿಣಾಮ ಬೀರುವುದು ದೂರ ಮಾಡಬಹುದು. ಆದ್ದರಿಂದ ಲಾಕ್ಡೌನ್ 4 ಹೊಸ ನಿಯಮಗಳೊಂದಿಗೆ ಹೊಸ ರೂಪದಲ್ಲಿರುತ್ತದೆ ಎಂದರು.
ಸ್ಥಳೀಯ ವ್ಯವಹಾರ ಉತ್ತೇಜಿಸಲು ಕರೆ :
Advertisementಭಾರತೀಯರು ಸ್ಥಳೀಯ ವ್ಯವಹಾರಗಳಿಗೆ ಉತ್ತೇಜನ ನೀಡಬೇಕು ಎಂದು ಪ್ರಧಾನಿಗಳು ಕರೆ ನೀಡಿದ್ದಾರೆ.
“Indians must be vocal for local ” ಎಂಬುದು ಮಂತ್ರವಾಗಿರಲಿ ಎಂಬುದನ್ನು ಒತ್ತಿ ಹೇಳಿದ್ದಾರೆ. ನಾವು ನಮ್ಮ ಜೀವನದ ಮಂತ್ರವನ್ನು ‘ಸ್ಥಳೀಯ’ವನ್ನಾಗಿ ಮಾಡಬೇಕು ಎಂದು ಸಮಯವು ನಮಗೆ ಕಲಿಸಿದೆ. ಇಂದು ಇರುವ ಜಾಗತಿಕ ಬ್ರ್ಯಾಂಡ್‌ಗಳು ಒಂದು ಕಾಲದಲ್ಲಿ ಸ್ಥಳೀಯವಾಗಿದ್ದವು ಆದರೆ ಅಲ್ಲಿನ ಜನರು ಅವರನ್ನು ಬೆಂಬಲಿಸಲು ಪ್ರಾರಂಭಿಸಿದಾಗ ಅವರು ಜಾಗತಿಕರಾದರು. ಅದಕ್ಕಾಗಿಯೇ ಇಂದಿನಿಂದಲೇ ಪ್ರತಿಯೊಬ್ಬ ಭಾರತೀಯರು ನಮ್ಮ ಸ್ಥಳೀಯರಿಗೆ ಧ್ವನಿಯಾಗಬೇಕು ಎಂದರು.
26.11.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು ಸೇರಿದಂತೆ…
ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಲಕ್ಕುಂಡಿ ಪಾರಂಪರಿಕ…
ಬೆಂಗಳೂರಿನ ಬಸವನ ಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಸೊಬಗು ಕಳೆಗಟ್ಟಿದೆ. ಇಂದು ಕಡಲೆಕಾಯಿ…
ಚಿಕ್ಕಮಗಳೂರು ಜಿಲ್ಲೆಯಲ್ಲಿ ಆನೆಗಳ ಹಾವಳಿ ತಡೆಯಲು ಸರ್ಕಾರದ ಸಚಿವರು ಹಾಗೂ ಅರಣ್ಯ ಇಲಾಖೆ…
ಅಡಿಕೆ ಹಳದಿ ಎಲೆರೋಗ ಬಾಧಿಸಿದ ತೋಟದ ಕೃಷಿಕ ಶಂಕರಪ್ರಸಾದ್ ರೈ ಅವರು ಕೃಷಿ…
ಅಡಿಕೆ ಕೃಷಿಯ ಜೊತೆಗೆ ಮಿಶ್ರ ಕೃಷಿಯನ್ನು ಏಕೆ ಮಾಡಬೇಕು..? ಯಾವ ಕೃಷಿಯನ್ನು ಮಾಡಬಹುದು..?…