ಲೇಖನಗಳ ಸತ್ಯಾಂಶವನ್ನು ವಿಮರ್ಶಿಸಿ – ನಾ. ಕಾರಂತ ಪೆರಾಜೆ

August 23, 2019
12:00 PM

ಪುತ್ತೂರು: ಉತ್ತಮ ಓದುಗಾರ ಒಳ್ಳೆಯ ಬರಹಗಾರನಾಗಬಹುದು ಎಂಬ ಮಾತಿನಂತೆ ಪತ್ರಕರ್ತ ಸಮಾಜದಲ್ಲಿ ಆಗುವ ವಿಚಾರಗಳನ್ನು ಲೇಖನದ ರೂಪದಲ್ಲಿ ಜನರಿಗೆ ತಲುಪಿಸಬೇಕು. ಆದರೆ ಆ ಲೇಖನದಲ್ಲಿ ತಪ್ಪು ಮಾಹಿತಿ ಇರದಂತೆ ಎಚ್ಚರವಹಿಸಬೇಕು. ಆದ್ದರಿಂದ ಸತ್ಯಾಂಶಗಳನ್ನು ವಿಮರ್ಶಿಸಿ ಲೇಖನ ಬರೆಯಬೇಕು ಎಂದು ಪುತ್ತೂರಿನ ಅಡಿಕೆ ಪತ್ರಿಕೆಯ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ‘ಬರವಣಿಗೆ ಏನು ಮತ್ತು ಹೇಗೆ‘ ಎಂಬ ವಿಷಯದ ಕುರಿತು  ಮಾತನಾಡಿದರು.
ಪ್ರತಿಯೊಂದು ಲೇಖನವು ಯಾಕಾಗಿ, ಯಾರಿಗಾಗಿ, ಏನನ್ನು ಮತ್ತು ಯಾವಾಗ ಎಂಬ ನಾಲ್ಕು ಅಡಿಗಟ್ಟಿನ ಮೇಲೆ ನಿಂತಿದೆ. ಹಾಗಾಗಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹುಡಿಕಿ ಅದನ್ನು ಬರವಣಿಗೆ ಮೂಲಕ ರೂಪ ನೀಡುವುದೇ ಲೇಖನ ಎಂದು ತಿಳಿಸಿದರು.
ಸಮಯಪಾಲನೆಯೊಂದಿಗೆ ಸದಾ ವಿಷಯಗಳನ್ನು ಹುಡುಕುವ ಕಾರ್ಯದಲ್ಲಿ ನಿರತರಾಗಿರುವವರು ಪತ್ರಕರ್ತರು. ಹಾಗಾಗಿ ಆಯಾಯ ಋತುವಿಗೆ ಆಧಾರಿತ ಲೇಖನವನ್ನು ಬರೆಯಲು ಸಾಧ್ಯವಾಗುತ್ತದೆ. ಇದರಿಂದ ಆತನ ಬರವಣಿಗೆ ವೃದ್ಧಿಸುತ್ತದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‍ಕುಮಾರ್ ಕಮ್ಮಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ವಂದಿಸಿದರು.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಶರಧಿ.ಡಿ.ಎಸ್
July 13, 2025
8:14 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕೃತಿಕಾ
July 13, 2025
8:01 AM
by: ದ ರೂರಲ್ ಮಿರರ್.ಕಾಂ
ರಾಜ್ಯಾದ್ಯಂತ ಲಕ್ಷ ವೃಕ್ಷ ಗಿಡಗಳ ನಾಟಿ ಕಾರ್ಯಕ್ರಮ | ಹೆಬ್ರಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ
July 13, 2025
7:50 AM
by: The Rural Mirror ಸುದ್ದಿಜಾಲ
ಶತ್ರುಗಳಿಂದ ಈ ರಾಶಿಯವರಿಗೆ ಜೀವಕ್ಕೆ ಅಪಾಯವಿದೆ..?
July 13, 2025
7:40 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group