ಲೋಕಸಭಾ ಚುನಾವಣೆ ಮತ ಎಣಿಕೆ : ಮಂಗಳೂರಿಗೆ ತೆರಳಿದ ಪಕ್ಷದ ಏಜೆಂಟ್ ಗಳ ತಂಡ

May 22, 2019
9:17 PM

ಸುಳ್ಯ: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆ ಮತ ಎಣಿಕೆ ಸುರತ್ಕಲ್ ಎನ್ಐಟಿಕೆ ಮತಎಣಿಕೆ ಕೇಂದ್ರದಲ್ಲಿ ಮೆ.23ರಂದು ನಡೆಯಲಿದೆ. ಮತ ಎಣಿಕೆ ಕಾರ್ಯದಲ್ಲಿ ಭಾಗವಹಿಸುವ ವಿವಿಧ ಪಕ್ಷಗಳ ಮತ ಎಣಿಕೆ ಏಜೆಂಟ್ ಗಳ ತಂಡ ಬುಧವಾರ ಮಂಗಳೂರಿಗೆ ತೆರಳಿದ್ದಾರೆ.

ಸುಳ್ಯ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಒಬ್ಬ ಸಹಾಯಕ ಚುನಾವಣಾಧಿಕಾರಿಯ ಏಜೆಂಟ್‌ ಮತ್ತು ಪ್ರತಿ ಟೇಬಲ್ ಗೆ ಒಬ್ಬರಂತೆ 14 ಮಂದಿ ಮತ ಎಣಿಕೆ ಏಜೆಂಟ್ ಗಳು ಸೇರಿ 15 ಮಂದಿಯ ತಂಡ ತೆರಳಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆಗೆ ತಲಾ 14 ಟೇಬಲ್ ಗಳಲ್ಲಿ ನಡೆಯುತ್ತದೆ. 8 ವಿಧಾನ ಸಭಾ ಕ್ಷೇತ್ತದಲ್ಲಿ ತಲಾ 14 ರಂತೆ ಒಟ್ಟು 112 ಟೇಬಲ್ ಗಳಿರುತ್ತದೆ. 15 ರಿಂದ 18 ಸುತ್ತುಗಳಲ್ಲಿ ವಿವಿಧ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.

Advertisement

ಸುಳ್ಯ ಕ್ಷೇತ್ರದ ಮತ ಎಣಿಕೆ 17 ಸುತ್ತುಗಳಲ್ಲಿ ನಡೆಯಲಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯಲಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ 5 ಬೂತ್ ಗಳ ವಿವಿ ಪ್ಯಾಟ್ ಎಣಿಕೆ ಕೂಡ ನಡೆಯಲಿದೆ. ಮಧ್ಯಾಹ್ನದ ಬಳಿಕ ಪೂರ್ಣ ಫಲಿತಾಂಶ ಹೊರಬರುವ ನಿರೀಕ್ಷೆ ಇದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಧರ್ಮಸ್ಥಳದಲ್ಲಿ ವಿಜಯೇಂದ್ರ ಪ್ರಾರ್ಥನೆ: “ರೈತರಿಗೆ ಉತ್ತಮ ಬೆಲೆ, ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿ”
June 26, 2026
12:52 PM
by: ದ ರೂರಲ್ ಮಿರರ್.ಕಾಂ
ಧರ್ಮಸ್ಥಳದಲ್ಲಿ ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ…!
June 21, 2026
12:20 PM
by: ದ ರೂರಲ್ ಮಿರರ್.ಕಾಂ
Gen Z ಮತದಾರರತ್ತ ಬಿಜೆಪಿ ಕಣ್ಣು- 18-25 ವಯೋಮಾನದ ಯುವಕರಿಗಾಗಿ ‘ತರುಣ ಮೋರ್ಚಾ’ ರಚನೆಗೆ ಚಿಂತನೆ
June 17, 2026
8:21 PM
by: ದ ರೂರಲ್ ಮಿರರ್.ಕಾಂ
‘We the Leaders’ | ಬಿಜೆಪಿಗೆ ವಿದಾಯ ಹೇಳಿದ ಮಾಜಿ ಐಪಿಎಸ್ ಅಧಿಕಾರಿ, ‘ವಿ ದಿ ಲೀಡರ್ಸ್’ ಮೂಲಕ ಹೊಸ ಪಯಣ
June 5, 2026
3:46 PM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror