ಲೋಕಸಭೆಯಲ್ಲಿ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆಯ ಸದ್ದು

July 17, 2019
9:00 PM

ಸುಳ್ಯ: ಹಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಇಂದು ಲೋಕಸಭೆಯಲ್ಲೂ ಸದ್ದು ಮಾಡಿತು. ಈ ಯೋಜನೆಯ ಬಗ್ಗೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ರೈಲ್ವೇ ಸಚಿವಾಲಯದಲ್ಲಿ ಪ್ರಶ್ನೆ ಕೇಳಿದ್ದಾರೆ.

Advertisement
Advertisement

ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆಯ ಸಮಗ್ರ ವಿವಿರ ನೀಡುವಂತೆ ಹಾಗೂ ಯೋಜನೆ ಯಾವ ಹಂತದಲ್ಲಿದೆ ಸೇರಿದಂತೆ ವಿವರನ್ನು ಲಿಖಿತ ಪ್ರಶ್ನೆ ಮೂಲಕ ರಾಜಮೋಹನ್ ಉಣ್ಣಿತ್ತಾನ್ ಕೇಳಿದ್ದಾರೆ. ಪ್ರಶ್ನೆಯಲ್ಲಿ ಈ  ರೈಲ್ವೇ ಯೋಜನೆ ಯಾವ ಹಂತದಲ್ಲಿದೆ , ಬಜೆಟ್ ನಲ್ಲಿ ಸರ್ವೆಗೆ ಅನುದಾನ ಲಭ್ಯವಾಗಿದೆಯೇ, ತೆಗೆದುಕೊಂಡಿರು ಕ್ರಮಗಳ ಬಗ್ಗೆ ಕೇಳಿದ್ದರು.

ಇದಕ್ಕೆ ಉತ್ತರ ನೀಡಿರುವ ರೈಲ್ವೇ ಸಚಿವ ಪಿಯೂಶ್ ಗೋಯಲ್, ಕಾಂಞಗಾಡ್-ಪಾಣತ್ತುರು-ಕಾಣಿಯೂರು ರೈಲ್ವೇ ಯೋಜನೆಗೆ 90.5 ಕಿಮೀ ಉದ್ದದ ಹಳಿ ಸರ್ವೆ ಕಾರ್ಯಕ್ಕೆ 2014-15 ರ ಬಜೆಟ್ ನಲ್ಲಿ ಹಣ ನೀಡಲಾಗಿದೆ.  ಇದರಲ್ಲಿ ಕೇರಳದ ಪ್ರದೇಶದ 40.5 ಕಿಮೀ ಸರ್ವೆ ಕಾರ್ಯ ಮುಗಿದಿದೆ. ಉಳಿದ ಕರ್ನಾಟಕದ ಭಾಗ 50 ಕಿಮೀ ಬಾಕಿ ಇದೆ. ಮುಂದೆ ಎಲ್ಲಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು  ಎಂದು ಲಿಖಿತವಾಗಿ ಹೇಳಿದ್ದಾರೆ.

 

Advertisement

 

ಏನಿದು  ಯೋಜನೆ ?

ಕಾಞಂಗಾಡು-ಕಾಣಿಯೂರು ರೈಲ್ಚೇ ಯೋಜನೆಯ ಪ್ರಾಥಮಿಕ ಸರ್ವೆ 2015 ರಲ್ಲಿ ಪೂರ್ತಿಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬ ನಿಲುವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಭೂಸ್ವಾಧೀನ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗಾಗಿ ಬೇಕಾಗುವ ತನ್ನ ಪಾಲನ್ನು ನೀಡಲು ಸಿದ್ದ ಎಂದು ಕೇರಳ ಸರಕಾರ ಕಳೆದ ವರ್ಷ ಘೋಷಿಸಿ ರೈಲ್ವೇ ಸಚಿವಾಲಯಕ್ಕೆ ಪತ್ರ ನೀಡಿತ್ತು.

ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ 40.5 ಕಿ.ಮಿ. ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 50 ಕಿ.ಮಿ. ಒಟ್ಟು 90.5 ಕಿ.ಮಿ. ಉದ್ದದ ಹಳಿ ನಿರ್ಮಿಸಿ ಮಲೆನಾಡ ತಪ್ಪಲ ಮೂಲಕ ರೈಲ್ವೇ ಸಂಪರ್ಕ ಸಾಧಿಸುವುದು ಯೋಜನೆಯ ಉದ್ದೇಶ. ಕಾಞಂಗಾಡ್‍ನಿಂದ  ಕೊಟ್ಟೋಡಿ, ಬಳಾಂತೋಡ್, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ ಮೂಲಕ ಕಾಣಿಯೂರಿನಲ್ಲಿ ಮಂಗಳೂರು-ಬೆಂಗಳೂರು ಹಳಿಯನ್ನು ಸಂಧಿಸಿ ರೈಲ್ವೇ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿದೆ. ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ ಹೆದ್ದಾರಿಗೆ ಸಮಾನಾಂತರವಾಗಿ ಬರುವ ಹಳಿಯು ಪಾಣತ್ತೂರಿನಿಂದ ಬೆಟ್ಟ ಗುಡ್ಡಗಳ ಮೂಲಕ ಹಾದು ಸುಳ್ಯಕ್ಕೆ ಬರಲಿದೆ.

ಈ ಯೋಜನೆಯ ವಿವರವಾದ ವರದಿ ಸುಳ್ಯನ್ಯೂಸ್.ಕಾಂ ನಲ್ಲಿ  ಈ ಹಿಂದೆ ಪ್ರಕಟವಾಗಿತ್ತು, ಅದರ ಲಿಂಕ್ ಇಲ್ಲಿದೆ

Advertisement

https://theruralmirror.com/?p=4541

 

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸೋಮವಾರ ಬಿಲ್ವಪತ್ರೆ ಎಲೆ ದೀಪ ಹಚ್ಚಿಟ್ಟರೆ ಕೆಲವು ರಾಶಿಯವರಿಗೆ ಉತ್ತಮ
May 29, 2025
6:40 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28-05-2025 | ಮೇ. 31ರಿಂದ ಕಡಿಮೆಯಾಗಿ ಜೂನ್ 3 ರ ತನಕ ಸಾಮಾನ್ಯ ಮಳೆ |
May 28, 2025
2:27 PM
by: ಸಾಯಿಶೇಖರ್ ಕರಿಕಳ
ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!
May 28, 2025
11:04 AM
by: ದ ರೂರಲ್ ಮಿರರ್.ಕಾಂ
ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ
May 27, 2025
10:57 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror

Join Our Group