ಸುಳ್ಯ: ಹಲವು ವರ್ಷಗಳಿಂದ ಸದ್ದು ಮಾಡುತ್ತಿರುವ ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆ ಇಂದು ಲೋಕಸಭೆಯಲ್ಲೂ ಸದ್ದು ಮಾಡಿತು. ಈ ಯೋಜನೆಯ ಬಗ್ಗೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ರೈಲ್ವೇ ಸಚಿವಾಲಯದಲ್ಲಿ ಪ್ರಶ್ನೆ ಕೇಳಿದ್ದಾರೆ.
ಕಾಞಂಗಾಡ್-ಕಾಣಿಯೂರು ರೈಲ್ವೇ ಯೋಜನೆಯ ಸಮಗ್ರ ವಿವಿರ ನೀಡುವಂತೆ ಹಾಗೂ ಯೋಜನೆ ಯಾವ ಹಂತದಲ್ಲಿದೆ ಸೇರಿದಂತೆ ವಿವರನ್ನು ಲಿಖಿತ ಪ್ರಶ್ನೆ ಮೂಲಕ ರಾಜಮೋಹನ್ ಉಣ್ಣಿತ್ತಾನ್ ಕೇಳಿದ್ದಾರೆ. ಪ್ರಶ್ನೆಯಲ್ಲಿ ಈ ರೈಲ್ವೇ ಯೋಜನೆ ಯಾವ ಹಂತದಲ್ಲಿದೆ , ಬಜೆಟ್ ನಲ್ಲಿ ಸರ್ವೆಗೆ ಅನುದಾನ ಲಭ್ಯವಾಗಿದೆಯೇ, ತೆಗೆದುಕೊಂಡಿರು ಕ್ರಮಗಳ ಬಗ್ಗೆ ಕೇಳಿದ್ದರು.
ಇದಕ್ಕೆ ಉತ್ತರ ನೀಡಿರುವ ರೈಲ್ವೇ ಸಚಿವ ಪಿಯೂಶ್ ಗೋಯಲ್, ಕಾಂಞಗಾಡ್-ಪಾಣತ್ತುರು-ಕಾಣಿಯೂರು ರೈಲ್ವೇ ಯೋಜನೆಗೆ 90.5 ಕಿಮೀ ಉದ್ದದ ಹಳಿ ಸರ್ವೆ ಕಾರ್ಯಕ್ಕೆ 2014-15 ರ ಬಜೆಟ್ ನಲ್ಲಿ ಹಣ ನೀಡಲಾಗಿದೆ. ಇದರಲ್ಲಿ ಕೇರಳದ ಪ್ರದೇಶದ 40.5 ಕಿಮೀ ಸರ್ವೆ ಕಾರ್ಯ ಮುಗಿದಿದೆ. ಉಳಿದ ಕರ್ನಾಟಕದ ಭಾಗ 50 ಕಿಮೀ ಬಾಕಿ ಇದೆ. ಮುಂದೆ ಎಲ್ಲಾ ವರದಿ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಲಿಖಿತವಾಗಿ ಹೇಳಿದ್ದಾರೆ.
ಏನಿದು ಯೋಜನೆ ?
ಕಾಞಂಗಾಡು-ಕಾಣಿಯೂರು ರೈಲ್ಚೇ ಯೋಜನೆಯ ಪ್ರಾಥಮಿಕ ಸರ್ವೆ 2015 ರಲ್ಲಿ ಪೂರ್ತಿಗೊಂಡಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಾಲುದಾರಿಕೆಯಲ್ಲಿ ಯೋಜನೆ ಅನುಷ್ಠಾನ ಮಾಡಬಹುದು ಎಂಬ ನಿಲುವನ್ನು ಕೇಂದ್ರ ಸರಕಾರ ವ್ಯಕ್ತಪಡಿಸಿತ್ತು. ಈ ಹಿನ್ನಲೆಯಲ್ಲಿ ಭೂಸ್ವಾಧೀನ ಮತ್ತು ಇತರ ನಿರ್ಮಾಣ ಕಾಮಗಾರಿಗಳಿಗಾಗಿ ಬೇಕಾಗುವ ತನ್ನ ಪಾಲನ್ನು ನೀಡಲು ಸಿದ್ದ ಎಂದು ಕೇರಳ ಸರಕಾರ ಕಳೆದ ವರ್ಷ ಘೋಷಿಸಿ ರೈಲ್ವೇ ಸಚಿವಾಲಯಕ್ಕೆ ಪತ್ರ ನೀಡಿತ್ತು.
ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ 40.5 ಕಿ.ಮಿ. ಮತ್ತು ಪಾಣತ್ತೂರಿನಿಂದ ಕಾಣಿಯೂರಿಗೆ 50 ಕಿ.ಮಿ. ಒಟ್ಟು 90.5 ಕಿ.ಮಿ. ಉದ್ದದ ಹಳಿ ನಿರ್ಮಿಸಿ ಮಲೆನಾಡ ತಪ್ಪಲ ಮೂಲಕ ರೈಲ್ವೇ ಸಂಪರ್ಕ ಸಾಧಿಸುವುದು ಯೋಜನೆಯ ಉದ್ದೇಶ. ಕಾಞಂಗಾಡ್‍ನಿಂದ ಕೊಟ್ಟೋಡಿ, ಬಳಾಂತೋಡ್, ಪಾಣತ್ತೂರು, ಕಲ್ಲಪಳ್ಳಿ, ಆಲೆಟ್ಟಿ, ಸುಳ್ಯ ಮೂಲಕ ಕಾಣಿಯೂರಿನಲ್ಲಿ ಮಂಗಳೂರು-ಬೆಂಗಳೂರು ಹಳಿಯನ್ನು ಸಂಧಿಸಿ ರೈಲ್ವೇ ಸಂಪರ್ಕ ಸಾಧಿಸಲು ಯೋಜನೆ ರೂಪಿಸಲಾಗಿದೆ. ಕಾಞಂಗಾಡ್‍ನಿಂದ ಪಾಣತ್ತೂರುವರೆಗೆ ಹೆದ್ದಾರಿಗೆ ಸಮಾನಾಂತರವಾಗಿ ಬರುವ ಹಳಿಯು ಪಾಣತ್ತೂರಿನಿಂದ ಬೆಟ್ಟ ಗುಡ್ಡಗಳ ಮೂಲಕ ಹಾದು ಸುಳ್ಯಕ್ಕೆ ಬರಲಿದೆ.
ಈ ಯೋಜನೆಯ ವಿವರವಾದ ವರದಿ ಸುಳ್ಯನ್ಯೂಸ್.ಕಾಂ ನಲ್ಲಿ ಈ ಹಿಂದೆ ಪ್ರಕಟವಾಗಿತ್ತು, ಅದರ ಲಿಂಕ್ ಇಲ್ಲಿದೆ
https://theruralmirror.com/?p=4541
ಬೆಂಗಳೂರಿನ ಟಿ.ವಿ.ಎಸ್. ಕಂಪೆನಿ ಉದ್ಯಮಿ ಗೋಪಾಲರಾವ್ ಮತ್ತು ಆನಂದಮೂರ್ತಿ ಬಳಗದವರು ಹೊಸವರ್ಷ ಆಚರಣೆ…
31.12.2024ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕಾಸರಗೋಡು, ದಕ್ಷಿಣ…
ಹೊಸ ವರ್ಷದ ದಿನದಂದು ಸುಮಾರು ಒಂದು ಲಕ್ಷ ಹೂಗುಚ್ಛಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ. ಪರಿಸರ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್ ಜಲಾಶಯ ಡಿಸೆಂಬರ್ನಲ್ಲೂ ಭರ್ತಿಯಾಗಿದ್ದು, ಗರಿಷ್ಠ ನೀರಿನ…
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತದಲ್ಲಿ 2015-2023 ರ ನಡುವೆ ಮಲೇರಿಯಾ ರೋಗ…
ಹೊಸ ವರ್ಷಾಚರಣೆಗೆ ಬೆಂಗಳೂರು ನಗರ ಸಜ್ಜಾಗುತ್ತಿದ್ದು ಇದಕ್ಕಾಗಿ ಗೃಹ ಇಲಾಖೆ ಮಾರ್ಗಸೂಚಿ ಬಿಡುಗಡೆ…