ವರ್ಕ್ ಫ್ರಮ್ ಹೋಮ್…..!!!!!!!

April 29, 2020
9:53 AM

ನಿರಂತರವಾದ ಕೆಲಸಗಳ ನಡುವೆ ಎಲ್ಲರೂ ಬಯಸುವುದು ವಿಶ್ರಾಂತಿ. ಸದಾಕಾಲವೂ ಓಡುತ್ತಲೇ ಸಾಗುವ ಬದುಕಿಗೊಂದು ಬದಲಾವಣೆ.  ಮುಂಜಾನೆಯೇ ಎದ್ದು ದಡಬಡನೆ ಕೆಲಸಗಳನ್ನು ಮುಗಿಸಿ ,  ಹೊಟ್ಟಗೇನು ಸಿಗುತ್ತದೋ , ಅದನ್ನೇ ತಿಂದು  ಓಡುವುದನ್ನು ಅಭ್ಯಾಸ ಮಾಡಿಕೊಂಡಾಗಿದೆ.  ಹಾಳುಮೂಳು ತಿಂದು ಹೊಟ್ಟೆ ಹಾಳು ಮಾಡಿಕೊಂಡಾಗಿದೆ.  ಗಡಿಬಿಡಿಯಲ್ಲಿ ಏನೋ ಒಂದು  ತಿಂದು ಓಡುವುದೇ ಆಯಿತು.ಎಷ್ಟೋ ಮನೆಗಳಲ್ಲಿ ರೆಡಿ ಟು ಈಟ್  ಪ್ಯಾಕೇಟ್ ಗಳದ್ದೇ ಕಾರುಬಾರೆಂದರೆ ಸುಳ್ಳಲ್ಲವೆಂದು ಕೊಳ್ಳುತ್ತೇನೆ.

Advertisement
Advertisement
ಒಂದು ವಿಷಯ ಯಾವಾಗಲೂ ನನ್ನ ತಲೆ ತಿನ್ನುತ್ತಿದೆ.  ಅದೂ ಇತ್ತೀಚಿನ ಪತ್ರಿಕೆಯಲ್ಲಿ  ಪ್ರಕಟವಾದ ಸುದ್ದಿ . ಮನೆಯಲ್ಲಿ   ಗೃಹಿಣಿಯಾಗಿದ್ದವಳು  ಯಾವುದೇ ಕೆಲಸ ಮಾಡದೆ ಆರಾಮವಾಗಿರುತ್ತಾಳೆ.  ಅಡಿಗೆ ಮನೆಯಲ್ಲೇ 24 ಗಂಟೆ ಕಳೆಯುವ ಆಕೆ ಮತ್ತೇನು ತಾನೆ ಮಾಡ ಬಲ್ಲಳು.  ಅದೇ ಅಕ್ಕಿ, ಅದೇ ತೆಂಗಿನಕಾಯಿ , ಅದೇ ಮೆಣಸು, ಅದೇ ಉಪ್ಪು, ಹುಳಿ ‌, ಅದೇ ಸ್ಟೌ, ಅದೇ ಬೆಂಕಿ.  ಅಲ್ಲೇ ಕೊಂಚ ಹೆಚ್ಚು  ಕಮ್ಮಿ ಅಷ್ಟೇ. ಮತ್ತೇನಿದೆ? ??.
ಯಾವ ಯೋಚನೆಯೂ ಇಲ್ಲ. ತಂದು ಹಾಕಿದ್ದನ್ನು ಬೇಯಿಸಿದರಾಯಿತು.  ಇಂತಹ ಲಘು ಯೋಚನೆಗಳಿಗೆ  ಬ್ರೇಕ್ ಹಾಕಲು‌
ಸದ್ಯ ‌ಎಲ್ಲರಿಗೂ ಅವರದ್ದೇ ಸಮಯ‌ ಸಿಕ್ಕಿದೆ. ಉದ್ಯೋಗಿಗಳಿಗೇ ಮನೆಯಿಂದಲೇ ಕೆಲಸ ಮಾಡುವ ಅವಕಾಶ. ಇದು ಬಹುಜನರ ಕನಸೂ ಆಗಿತ್ತು.  ಸಮಯದೊಂದಿಗೆ ಓಡಲಾಗುತ್ತಿಲ್ಲ ಮನೆಯಿಂದಲೇ ಕೆಲಸ ಮಾಡುವಂತಾಗಿದ್ದರೇ?  ತುಂಬಿದ ಬಸ್ ನಲ್ಲಿ ನೇತಾಡಿಕೊಂಡು ಹೋಗ ಬೇಕಾದ್ದಿಲ್ಲ,  ದ್ವಿ ಚಕ್ರ ವಾಹನ, ನಾಲ್ಕು ಚಕ್ರದ ವಾಹನಗಳಲ್ಲಿ ‌ ಟ್ರಾಫಿಕ್ ನಲ್ಲಿ ಸಿಕ್ಕಿ ಒದ್ದಾಡ ಬೇಕಾದ್ದಿಲ್ಲ.  ಶಾಲೆಗೆ ಹೋಗುವ ಮಕ್ಕಳು ಮನೆ ತಲುಪಿದರಾ , ತಿಂಡಿ ತಿಂದರಾ , ಆಟಕ್ಕೆ ಹೋಗುವಾಗ ಬಾಗಿಲು ಹಾಕಿ ಕೊಂಡರಾ  ? ಮನೆಯಲ್ಲಿರುವ ಅತ್ತೆ ಮಾವ ಹೊತ್ತಿಗೆ ಸರಿಯಾಗಿ ಊಟ , ಮಾತ್ರೆ ತಗೊಂಡರಾ, ಕಾಫಿ ಮಾಡಿ ಗ್ಯಾಸ್ ಆಫ್ ಮಾಡಿದ್ದರಾ ಇಲ್ಲವಾ? ಓಹ್ ದಿನ ನಿತ್ಯದ ಜಂಜಾಟಗಳನ್ನು ಯಾರಿಗೆ ಹೇಳೋಣ? ಈ ಎಲ್ಲಾ ಸಂದರ್ಭಗಳಲ್ಲಿ  ಮನಸಿಗೆ ಬರುತ್ತಿದ್ದುದು ಅದೇ ಯೋಚನೆಗಳು ಮನೆಯಿಂದಲೇ ಕೆಲಸ ಮಾಡುವಂತಿದ್ದರೇ.
  ಬಹುಶಃ ಯಾರೂ ಹೀಗಾಗ ಬಹುದೆಂದು ಕನಸಿನಲ್ಲೂ ಊಹಿಸಿರಲಾರರು. ಫೆಬ್ರವರಿ ಯಲ್ಲೂ ಕೂಡ ಚೈನಾ ದಲ್ಲಿ ಲಾಕ್ಡೌನ್ ಮಾಡಿದ್ದಾರಂತೆ ಎನ್ನುತ್ತಿದ್ದೆವೇ ಹೊರತು ನಮ್ಮಲ್ಲೂ ಲಾಕ್ಡೌನ್ ಮಾಡ ಬೇಕಾದೀತು ಎಂದು  ಅಂದುಕೊಂಡಿರಲಿಲ್ಲ.  ಬಹುತೇಕ ಎಲ್ಲಾ  ಸ್ಥಳಗಳಲ್ಲಿ  ಜನರು ಮನೆಯಲ್ಲಿಯೇ ಸಮಯ ಕಳೆಯುತ್ತಿದ್ದಾರೆ.  ಸದ್ಯದ ಪರಿಸ್ಥಿತಿಯಲ್ಲಿ  ಮಕ್ಕಳಿಗೆ  ಆನ್ ಲೈನ್ ನಲ್ಲಿ ಪಾಠಗಳೂ ಆರಂಭವಾಗಿವೆ. ಕೆಲಸಗಳೂ ಮನೆಯಿಂದಲೇ  ಜನರು ಮಾಡುತ್ತಿದ್ದಾರೆ. ಅನಗತ್ಯ ತಿರುಗಾಟಗಳು  ಕಮ್ಮಿಯಾಗಿವೆ.
( ಅಪವಾದಗಳಿವೆ). ಪೋಲಿಸ್ ರ ಕಣ್ಣು ತಪ್ಪಿಸಿ ಸಂಚರಿಸುವವರಿಗೇನು ಕಮ್ಮಿಯಿಲ್ಲ.  ಸಾಮಾನ್ಯವಾಗಿ   ನಗರಗಳಲ್ಲಿ ‌ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆ. ಮಾಮೂಲು ದಿನಗಳಲ್ಲಿ ಹೇಗೋ ಮನೆಕೆಲಸ ಮುಗಿಸಿ ಕೆಲಸಕ್ಕೆ ತೆರಳುವುದು ಅಭ್ಯಾಸ ವಾಗಿತ್ತು. ಈಗ ಮನೆಯಿಂದಲೇ ಕೆಲಸ ಮಾಡಲು  ಆರಂಭ ಮಾಡಿದ ಮೇಲೆ ಮಹಿಳೆಯರಿಗೆ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಾಗುವುದಿಲ್ಲ , ಮನೆಯವರ ಇಷ್ಟಾನುಸಾರವಾಗಿ  ನಮೂನೆವಾರು ತಿಂಡಿ ಪೂರೈಸುವುದರಲ್ಲೇ ಸಮಯ ಕಳೆಯುತ್ತಿದೆ ಎಂಬ ದೂರುಗಳು ಪೋಲಿಸ್ ಠಾಣೆಗಳಲ್ಲಿ ದಾಖಲೆಯಾಗಿವೆಯಂತೆ!!!!!!!.
ಹೋಟೆಲ್ ಗಳು ಬಂದ್ ಆಗಿ ಎಲ್ಲೂ ಹೊರಗಡೆ ಆಹಾರ ಸೇವಿಸುವಂತಿಲ್ಲ.‌  ಹೆಂಗಸರು  ಮನೆಯಲ್ಲೇ ಇದ್ದಾರಲ್ಲಾ ,ಮಾಡಲಿ  ಎಂಬ  ಧೋರಣೆ. ಇದೆಷ್ಟು ಸರಿ , ತಪ್ಪು ಎಂದು ಹೇಳುವಷ್ಟು ಅರಿತವಳು ನಾನಲ್ಲ. ಆದರೆ   ಅವರಿಗೂ ಅವರದ್ದೇ ಆದ ವ್ಯಕ್ತಿತ್ವ, ಜವಾಬ್ದಾರಿಗಳಿವೆ. ಕನಸುಗಳಿವೆ . ಮನೆಯಲ್ಲಿ ಇದ್ದಾರೆ ಎಂದ ಮಾತ್ರಕ್ಕೆ ಹೇಳಿದ್ದೆಲ್ಲಾ ಮಾಡಲೇ ಬೇಕಾದ ಅನಿವಾರ್ಯತೆ ಇಲ್ಲವೆಂದು ನನ್ನ ಅಭಿಪ್ರಾಯ.  ಸಮಯ , ಸಂಧರ್ಭಗಳಿಗೆ ಹೊಂದಿಕೊಳ್ಳುವ ಹೃದಯ ವೈಶಾಲ್ಯ ಬೆಳೆಸಿಕೊಳ್ಳೋಣ ಅಲ್ಲವೇ?
* ಅಶ್ವಿನಿಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

ಇದನ್ನೂ ಓದಿ

ಹೊಸ ಬೆಳೆ | ರೈತರು ಚಿಂತನೆ ಮಾಡಬೇಕಾದ್ದೇನು…? ಕರಾವಳಿ, ಮಲೆನಾಡಿನಲ್ಲಿ ಉತ್ಪತ್ತಿ ನೀಡುವ “ಪರ್ಯಾಯ ಬೆಳೆಯ ಅಗತ್ಯವಿದೆ” |
April 24, 2024
2:57 PM
by: ಪ್ರಬಂಧ ಅಂಬುತೀರ್ಥ
ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ

You cannot copy content of this page - Copyright -The Rural Mirror