ಸುಳ್ಯ: ಸುಳ್ಯ ತಹಶೀಲ್ದಾರ್ ಕುಂಞಿ ಆಹಮ್ಮದ್ ಅವರಿಗೆ ವರ್ಗಾವಣೆಯಾಗಿರುವ ಹಿನ್ನಲೆಯಲ್ಲಿ ಸುಳ್ಯ ನ.ಪಂ. ಹಾಗೂ ಸ್ವಚ್ಛ ನಗರ ಸುಳ್ಯ ತಂಡದ ವತಿಯಿಂದ ಬೀಳ್ಕೊಡುಗೆ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಯಿತು.
ಜನರ ಕಷ್ಟಗಳಿಗೆ ಸಾಧ್ಯವಾದಷ್ಟು ಸ್ಪಂದಿಸಿದ್ದೇನೆ. ವರ್ಗಾವಣೆಯ ಬಳಿಕ ಜನರ ಪ್ರತಿಕ್ರಿಯೆ ಕಂಡು ವಿಸ್ಮಯಗೊಂಡಿದ್ದೇನೆ. ಸಾವಿರಾರು ಜನ ಫೋನ್ ಮಾಡಿದ್ದಾರೆ. ತಾಯಂದಿರು, ಸಹೋದರಿಯರು ಸಂದೇಶ ಕಳುಹಿಸಿದ್ದಾರೆ. ಸುಳ್ಯದಲ್ಲಿದ್ದಷ್ಟೂ ಸಮಯ ಸಮರ್ಪಣ ಭಾವದಿಂದ ಕೆಲಸ ಮಾಡಿದ ತೃಪ್ತಿ ನನಗಿದೆ. ಪ್ರತಿದಿನವೂ ಎಷ್ಟೇ ಜನ ಬಂದರೂ ಅವರೊಂದಿಗೆ ಮಾತನಾಡಿದ್ದೇನೆ. ನಾನಿರೋದೆ ಹೀಗೆ, ಇದೇ ನನ್ನ ಶೈಲಿ’ ಎಂದು ಕುಂಞಿ ಅಹಮ್ಮದ್ ಹೇಳಿದರು. ಸುಳ್ಯ ನಗರದ ಆಡಳಿತಾಧಿಕಾರಿಯಾಗಿ ಅನೇಕ ಯೋಜನೆಗಳಿಗೆ ಪ್ರಯತ್ನಿಸಿದ್ದೇನೆ. ಶಾಶ್ವತ ಕುಡಿಯುವ ನೀರಿನ ಯೋಜನೆ, ಕುಡಿಯುವ ನೀರಿನ ಘಟಕ, ಸುಸಜ್ಜಿತ ಮಾಂಸ ಮಾರುಕಟ್ಟೆ ಸಂಕೀರ್ಣ, ಅಂಬೇಡ್ಕರ್ ಪುತ್ಥಳಿ ಸೇರಿದಂತೆ ಯೋಜನೆಗಳು ಸಿದ್ಧವಾಗಿದೆ. ಮುಂದಿನ ಆಡಳಿತದವರು ಇದಕ್ಕೆ ಪ್ರಯತ್ನ ಪಡಬೇಕು. ಇನ್ನೂ ಸ್ವಲ್ಪ ಸಮಯ ಸುಳ್ಯದಲ್ಲಿದ್ದಿದ್ದರೆ ಸುಳ್ಯದ ಚಿತ್ರಣವನ್ನೆ ಬದಲಿಸಬಹುದಿತ್ತು ಎಂದು ಹೇಳಿದರು.
ಸುಳ್ಯ ನ.ಪಂ. ಮುಖ್ಯಾಧಿಕಾರಿ ಮತ್ತಡಿ, ನ.ಪಂ. ಸದಸ್ಯರಾದ ಎಂ. ವೆಂಕಪ್ಪ ಗೌಡ, ವಿನಯ ಕುಮಾರ್ ಕಂದಡ್ಕ, ಸರೋಜಿನಿ ಪೆಲತ್ತಡ್ಕ, ಸ್ವಚ್ಛ ನಗರ ತಂಡದ ಪಿ.ಬಿ. ಸುಧಾಕರ್ ರೈ, ವಿನೋದ್ ಲಸ್ರಾದೊ, ನ.ಪಂ. ಇಂಜಿನಿಯರ್ ಶಿವಕುಮಾರ್, ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ, ನ.ಪಂ. ಉದ್ಯೋಗಿ ಸುದೇವ್ ಜಯನಗರ ಮೊದಲಾದವರು ಮಾತನಾಡಿದರು.
ಆರೋಗ್ಯಾಧಿಕಾರಿ ರವಿಕೃಷ್ಣ ಸ್ವಾಗತಿಸಿ, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ತಿಮ್ಮಪ್ಪ ವಂದಿಸಿದರು.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.