ಮಂಗಳೂರು: ಮೂಡಬಿದರೆಯ ವರ್ಧಮಾನ ಪೀಠ ನೀಡುವ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಪುರಸ್ಕಾರಕ್ಕೆ ಡಾ. ದೀಪಾ ಫಡ್ಕೆ ಆಯ್ಕೆಯಾಗಿದ್ದಾರೆ ಹಾಗೂ ವರ್ಧಮಾನ ಪುರಸ್ಕಾರಕ್ಕೆ ಡಾ.ಬಸವರಾಜ ಕಲ್ಗುಡಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಕಳೆದ 39 ವರ್ಷಗಳಿಂದ ಮೂಡುಬಿದಿರೆಯ ವರ್ಧಮಾನ ಪ್ರಶಸ್ತಿ ಪೀಠದ ವತಿಯಿಂದ ಈ ಪ್ರಶಸ್ತಿ ನೀಡಲಾಗುತ್ತಿದೆ. ಜೀವಮಾನದ ಸಾಧನೆಗೆ ಹಿರಿಯ ಸಾಹಿತಿಗಳ ಕೃತಿಗೆ ವರ್ಧಮಾನ ಪುರಸ್ಕಾರ ಹಾಗೂ ಉದಯೋನ್ಮುಖ ಬರಹಗಾರರು ಅಥವಾ ಸಾಹಿತಿಗಳಿಗೆ ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಿದೆ.
ಡಾ.ದೀಪಾ ಫಡ್ಕೆ :
ದೀಪಾ ಫಡ್ಕೆ ಬೆಂಗಳೂರು, ಮೂಲತ: ದಕ್ಷಿಣ ಕನ್ನಡದ ಬೆಳ್ತಂಗಡಿಯವರು. ಇವರ ಇದುವರೆಗಿನ ಪ್ರಕಟಿತ ಕೃತಿಗಳು ಸಂಸ್ಕೃತಿ ಕುರಿತ ಬರಹಗಳ ಗುಚ್ಛವಾದ `ಋತ’, ಇವರ ಮೊದಲ ಕೃತಿ. `ಹರಪನಹಳ್ಳಿ ಭೀಮವ್ವ’ ಸೇರಿದಂತೆ ಒಟ್ಟು 7 ಕೃತಿಗಳು ಪ್ರಕಟವಾಗಿವೆ. ನಾಡಿನ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ, ವಿಜಯವಾಣಿ, ಉದಯವಾಣಿ, ವಿಜಯ ಕರ್ನಾಟಕ, ಹೊಸದಿಗಂತ, ಅಡ್ವೈಸರ್, ಕೊಳಲು, ತಿಲ್ಲಾನಗಳಿಗೆ ಅನೇಕ ಲೇಖನಗಳನ್ನು ಬರೆದಿದ್ದಾರೆ. ದೀಪಾ ಅವರ ಸಣ್ಣ ಕಥೆಗಳು ಮಯೂರ ಹಾಗೂ ಉದಯವಾಣಿಯಲ್ಲಿ ಪ್ರಕಟವಾಗಿದ್ದೂ ಅವರ `ತಾಯಾಗೋದು ಅಂದ್ರೆ’ ಕಥೆಗೆ ಬೆಂಗಳೂರಿನ ಕನ್ನಡ ಸಂಘರ್ಷ ಸಮಿತಿಯ ಅನುಪಮಾ ನಿರಂಜನ ಕಥಾಸ್ಪರ್ಧೆಯಲ್ಲಿ ಬಹುಮಾನ ಲಭಿಸಿದೆ.
ಡಾ.ಬಸವರಾಜ ಕಲ್ಗುಡಿ:
ಬೆಳಗಾವಿಯಯಲ್ಲಿ ಜನಿಸಿದ ಬಸವರಾಜ ಕಲ್ಗುಡಿಯವರು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಕಾಲೇಜು ವ್ಯಾಸಂಗವು ಬೆಂಗಳೂರಿನಲ್ಲಿ ನಡೆಸಿದರು. ಎಂ.ಎ. (1975) ಪದವಿ. ‘ಅನುಭಾವ ಮತ್ತು ಸಾಂಸ್ಕೃತಿಕ ಸಮಸ್ಯೆಗಳು’ ಸಂಶೋಧನಾ ಪ್ರಬಂಧಕ್ಕೆ (1983) ಪಿಎಚ್.ಡಿ. ಪದವಿ ಪಡೆದರು. ಕರ್ನಾಟಕದಲ್ಲಿನ ಮಾಸ್ತಿಕಲ್ಲು ಕುರಿತಾಗಿ ಕ್ಷೇತ್ರಕಾರ್ಯ ಮಾಡಿ ಮಂಡಿಸಿದ ಮತ್ತೊಂದು ಸಂಶೋಧನೆ `ಮಹಾಸತಿ ಆಚರಣೆ’. ಅವರ ಅಧ್ಯಯನ ಶಾಸನವನ್ನು ಕುರಿತಾಗಿದ್ತುದರೂ ಶಾಸನದ ಪಠ್ಯವನ್ನು ಕನ್ನಡ ಸಂಸ್ಕೃತಿಯ ಶೋಧನೆಗೆ ಪ್ರಮುಖ ಆಕರವಾಗಿ ಬಳಸಿದ್ದಾರೆ. ಸಂಸ್ಕೃತಿಯನ್ನು ಕುರಿತಂತೆ ವ್ಯಾಖ್ಯಾನಿಸುವಲ್ಲಿ ಕಲ್ಗುಡಿಯವರು ಸಂಸ್ಕೃತಿಯಲ್ಲಿನ ಚಲನೆಯ ಪಲ್ಲಟವನ್ನು ಸಮಗ್ರವಾಗಿ ವಿವಿಧ ನೆಲೆಗಳಿಂದ ಶೋಧಿಸುತ್ತಾರೆ. ಕಲ್ಗುಡಿಯವರು ವಚನ ಸಾಹಿತ್ಯ ಕುರಿತ ಸಂಶೋಧನಾತ್ಮಕ ಅಧ್ಯಯನದಲ್ಲಿ ವಿವಿಧ ಜ್ಞಾನಶಿಸ್ತುಗಳನ್ನು ಒಳಗೊಂಡಿದೆ. ಅವರು ವರ್ತಮಾನದ ಹಿನ್ನೆಲೆಯಿಂದ ವಚನ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ್ದು ಕನ್ನಡ ವಿಮರ್ಶೆಯ ಲೋಕದಲ್ಲಿಯೇ ವಿಶಿಷ್ಟ ಎಂದು ಪರಿಗಣಿಸಲಾಗುತ್ತದೆ.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…