ವಾಯುಭಾರ ಕುಸಿತ…. ಮತ್ತೆ ಮಳೆಯ ಆತಂಕ

August 10, 2019
11:01 AM

ಮಳೆ….‌ಮಳೆ….. ಮಳೆ….. ಈಗ ಇದಿಷ್ಟೇ.  ಈಗ ಗುಜರಾತ್ ಪ್ರದೇಶದಲ್ಲಿ ವಾಯುಭಾರ ಕುಸಿತದ ಲಕ್ಷಣ ಕಾಣುತ್ತಿದೆ.‌ಹೀಗಾಗಿ ಮತ್ತೆ 2 ದಿನ ಮಳೆ ಕಾಡಲಿದೆ. ಹೀಗಾಗಿ ಏನೇನಾಗುತ್ತೋ  ಏನೋ ಆತಂಕ ಜನರದ್ದು. ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮುಂಜಾಗ್ರತಾ ಕ್ರಮದಲ್ಲಿ ನಮ್ಮ ಪಾಲೂ ಇದೆ.

Advertisement
Advertisement
Advertisement

ಒಂದು ವಾರದಿಂದ ಮಳೆಯ ಅಬ್ಬರ ಹೆಚ್ಚುತ್ತಲೇ ಇದೆ.‌ಈ ಬಾರಿ ಅತೀ ಹೆಚ್ಚು ಎಂಬಂತೆ 170 ಮಿ ಮೀ ಗಿಂತಲೂ ಹೆಚ್ಚು ಮಳೆಯಾಗಿದೆ. ಹೀಗಾಗಿ ನೇತ್ರಾವತಿ, ಕುಮಾರಧಾರಾ ನದಿ ತುಂಬಿ ಹರಿದಿದೆ. ‌

Advertisement

ಉಪ್ಪಿನಂಗಡಿಯಲ್ಲಿ ಎರಡೂ ನದಿಗಳು ಸಂಗಮವಾಗಿ ಅಪಾಯಮಟ್ಟ ಮೀರಿ ಹರಿದಿದೆ. ರಾತ್ರೋ ರಾತ್ರಿ‌ ಜನರ ಸ್ಥಳಾಂತರ ಕಾರ್ಯವೂ ನಡೆದಿದೆ. ಬೆಳಗ್ಗೆ ಕೊಂಚ ನೀರಿನ‌ ಮಟ್ಟ ಇಳಿಕೆಯಾಗಿದೆ.

Advertisement

ಈಗ ಮತ್ತೆ ಮಳೆ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿದೆ. ಗುಜರಾತ್ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ‌ ಕರಾವಳಿ ತೀರದಲ್ಲಿ ಮಳೆ ಹೆಚ್ಚಾಗಲಿದೆ.ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ‌‌ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಮಳೆಯ ಕಾರಣದಿಂದ ಸಮುದ್ರ ಅಲೆಗಳು 3.2 ರಿಂದ 3.9 ಮೀಟರ್  ಎತ್ತರದಲ್ಲಿದೆ.‌ ಮೀನುಗಾರರು ಸಮುದ್ರಕ್ಕೆ‌ ಇಳಿಯದಂತೆ ಸೂಚಿಸಲಾಗಿದೆ.

Advertisement

ನೇತ್ರಾವತಿ, ಕುಮಾರಧಾರಾ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ. 13 ಜನರ ಎನ್ ಡಿ ಆರ್ ಎಫ್ ತಂಡವು  ಸುಬ್ರಹ್ಮಣ್ಯ, ಮಂಗಳೂರಿನಲ್ಲಿ‌ ಸನ್ನದ್ಧ  ಸ್ಥಿತಿಯಲ್ಲಿ ಇದೆ.

ಈಗಿನ ಮಳೆಯ ಬಗ್ಗೆ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಹೀಗೆ ಬರೆಯುತ್ತಾರೆ,

Advertisement

ಪುರಿ ಪತುದು, ಕರಿ ಪತುದು ಮಾತಾ ನಾಶೊ।
ಬರ್ಸೊದ ರಭಸೊಗು ಗಿಡಕಂಟಿ ಸರ್ತ ಒರಿಯಂದ್ ।।
ಪುಷ್ಯದ ಬರ್ಸೊಗು ಕಂಡುತಿನ್ಪಿನ ಪುಚ್ಚೆಗ್ಲಾ ನುಪ್ಪು ತಿಕ್ಕಂದುಗೆ ।
ನನ ಬೆಂದು ತಿನ್ಪಿನ ನರಮಾನಿಗ್ ತಿಕ್ಕುವಾ ।।

ಮಳೆ  ತನ್ನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ತುಳುನಾಡ ಹಿರಿಯರ ಈ ಮಾತು ತನಗೆ ಬೇಡವೆನ್ನುತ್ತಿದ್ದಾನೆ ಕಳೆದ ಐದು ವರ್ಷಗಳಿಂದ ಪುಷ್ಯ ! ಈಗ ತನಗಿರಲಿ ಎನ್ನುತ್ತಿದ್ದಾನೆ..!!

Advertisement

ಬಾಳಿಲದಲ್ಲಿ 149 ಮಿ.ಮೀ.ಮಳೆ ( ಕಳೆದ ವರ್ಷ 33 ಮಿ.ಮೀ)

ಚಿತ್ರ ಕೃಪೆ : ವಸಂತ ನಾಯಕ್,‌ಉಪ್ಪಿನಂಗಡಿ

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ | 34.81 ಲಕ್ಷ ಮೆಟ್ರಿಕ್ ಟನ್ ಡಿಎಪಿ, 55 ಲಕ್ಷ ಮೆಟ್ರಿಕ್ ಟನ್ ಎನ್‌ಪಿಕೆ ಪೂರೈಕೆ |
November 28, 2024
7:03 AM
by: The Rural Mirror ಸುದ್ದಿಜಾಲ
ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನಕಾಯಿಲೆ ಭೀತಿ | ರೋಗ ನಿರೋಧಕ ಚುಚ್ಚುಮದ್ದು ನೀಡುವ ಬಗ್ಗೆ ಚಿಂತನೆ |
November 28, 2024
6:46 AM
by: The Rural Mirror ಸುದ್ದಿಜಾಲ
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ | ತಮಿಳುನಾಡಿನಲ್ಲಿ ಭಾರೀ ಮಳೆ ಸಾಧ್ಯತೆ | ರಾಜ್ಯದಲ್ಲಿ ನ.30 ರಿಂದ ಮಳೆ ನಿರೀಕ್ಷೆ |
November 27, 2024
11:39 PM
by: ಸಾಯಿಶೇಖರ್ ಕರಿಕಳ
ಅಡಿಕೆಗೆ ಎಲೆಚುಕ್ಕಿ-ಹಳದಿ ಎಲೆರೋಗ | ಸಂಕಷ್ಟದಲ್ಲಿರುವ ಅಡಿಕೆ ಕೃಷಿಕರ ನೆರವಿಗೆ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮನವಿ |
November 27, 2024
9:13 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror