ಚಿತ್ರ ಕೃಪೆ : ವಸಂತ ನಾಯಕ್,ಉಪ್ಪಿನಂಗಡಿ
ಮಳೆ….ಮಳೆ….. ಮಳೆ….. ಈಗ ಇದಿಷ್ಟೇ. ಈಗ ಗುಜರಾತ್ ಪ್ರದೇಶದಲ್ಲಿ ವಾಯುಭಾರ ಕುಸಿತದ ಲಕ್ಷಣ ಕಾಣುತ್ತಿದೆ.ಹೀಗಾಗಿ ಮತ್ತೆ 2 ದಿನ ಮಳೆ ಕಾಡಲಿದೆ. ಹೀಗಾಗಿ ಏನೇನಾಗುತ್ತೋ ಏನೋ ಆತಂಕ ಜನರದ್ದು. ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಮುಂಜಾಗ್ರತಾ ಕ್ರಮದಲ್ಲಿ ನಮ್ಮ ಪಾಲೂ ಇದೆ.
ಒಂದು ವಾರದಿಂದ ಮಳೆಯ ಅಬ್ಬರ ಹೆಚ್ಚುತ್ತಲೇ ಇದೆ.ಈ ಬಾರಿ ಅತೀ ಹೆಚ್ಚು ಎಂಬಂತೆ 170 ಮಿ ಮೀ ಗಿಂತಲೂ ಹೆಚ್ಚು ಮಳೆಯಾಗಿದೆ. ಹೀಗಾಗಿ ನೇತ್ರಾವತಿ, ಕುಮಾರಧಾರಾ ನದಿ ತುಂಬಿ ಹರಿದಿದೆ.
ಈಗ ಮತ್ತೆ ಮಳೆ ಹೆಚ್ಚಾಗುವ ಲಕ್ಷಣಗಳು ಕಂಡುಬಂದಿದೆ. ಗುಜರಾತ್ ಭಾಗದಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿ ತೀರದಲ್ಲಿ ಮಳೆ ಹೆಚ್ಚಾಗಲಿದೆ.ಮುಂದಿನ 48 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು ಮಳೆಯ ಕಾರಣದಿಂದ ಸಮುದ್ರ ಅಲೆಗಳು 3.2 ರಿಂದ 3.9 ಮೀಟರ್ ಎತ್ತರದಲ್ಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ನೇತ್ರಾವತಿ, ಕುಮಾರಧಾರಾ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮಕ್ಕೆ ಸೂಚಿಸಲಾಗಿದೆ. 13 ಜನರ ಎನ್ ಡಿ ಆರ್ ಎಫ್ ತಂಡವು ಸುಬ್ರಹ್ಮಣ್ಯ, ಮಂಗಳೂರಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇದೆ.
ಈಗಿನ ಮಳೆಯ ಬಗ್ಗೆ ಬಾಳಿಲದ ಪಿ ಜಿ ಎಸ್ ಎನ್ ಪ್ರಸಾದ್ ಹೀಗೆ ಬರೆಯುತ್ತಾರೆ,
ಪುರಿ ಪತುದು, ಕರಿ ಪತುದು ಮಾತಾ ನಾಶೊ।
ಬರ್ಸೊದ ರಭಸೊಗು ಗಿಡಕಂಟಿ ಸರ್ತ ಒರಿಯಂದ್ ।।
ಪುಷ್ಯದ ಬರ್ಸೊಗು ಕಂಡುತಿನ್ಪಿನ ಪುಚ್ಚೆಗ್ಲಾ ನುಪ್ಪು ತಿಕ್ಕಂದುಗೆ ।
ನನ ಬೆಂದು ತಿನ್ಪಿನ ನರಮಾನಿಗ್ ತಿಕ್ಕುವಾ ।।
ಮಳೆ ತನ್ನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ತುಳುನಾಡ ಹಿರಿಯರ ಈ ಮಾತು ತನಗೆ ಬೇಡವೆನ್ನುತ್ತಿದ್ದಾನೆ ಕಳೆದ ಐದು ವರ್ಷಗಳಿಂದ ಪುಷ್ಯ ! ಈಗ ತನಗಿರಲಿ ಎನ್ನುತ್ತಿದ್ದಾನೆ..!!
ಬಾಳಿಲದಲ್ಲಿ 149 ಮಿ.ಮೀ.ಮಳೆ ( ಕಳೆದ ವರ್ಷ 33 ಮಿ.ಮೀ)
ಅಡಿಕೆಯ ಆರೋಗ್ಯ ಪರಿಣಾಮ ಹಾಗೂ ಸುರಕ್ಷತೆ ಕುರಿತು ರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಂಯುಕ್ತ…
ಮುಳ್ಳಯ್ಯನಗಿರಿ ಮತ್ತು ಸೀತಾಳಯ್ಯಗಿರಿ ಪ್ರದೇಶಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಿ ಪ್ರವಾಸಿಗರಿಗೆ ಜಾಗೃತಿ ಮೂಡಿಸಲಾಯಿತು.…
ಯುಗಾದಿ ಹಿನ್ನೆಲೆ ಕೋಲಾರ ಜಿಲ್ಲೆಯಲ್ಲಿ ಹಾಲಿನ ದರ ಲೀಟರ್‌ಗೆ ₹2 ಹೆಚ್ಚಳ ಮಾಡಲಾಗಿದೆ.…
ಅಡಿಕೆ ಎಲೆಚುಕ್ಕಿ ರೋಗಕ್ಕೆ 100% ಪರಿಣಾಮಕಾರಿ ಎಂದು ಹೇಳಲಾಗುತ್ತಿರುವ ಬಯೋ ಔಷಧಿಗಳಿಗೆ ICAR…
ರಾಜ್ಯದ ಹಲವೆಡೆ ಗುಡುಗು-ಸಹಿತ ಮಳೆಯ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ…
ಭೂಮಿಯಲ್ಲೇ ಅತಿಹೆಚ್ಚು ಮಳೆಯಾಗುವ ಮೇಘಾಲಯ ಈಗ ನೀರಿನ ಕೊರತೆಯ ಆತಂಕ ಎದುರಿಸುತ್ತಿದೆ. ಹವಾಮಾನ…