ಭುವನೇಶ್ವರ: ಚಂದ್ರನ ಮೇಲೆ ಇಳಿಯುವ ವೇಳೆ ಸಂಪರ್ಕ ಕಡಿದುಕೊಂಡಿದ್ದ ವಿಕ್ರಂ ಲ್ಯಾಂಡರ್ ಜತೆ ಇದುವರೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ವಿಕ್ರಂ ಲ್ಯಾಂಡರ್ನ 14 ದಿನಗಳ ಜೀವಿತಾವಧಿ ಶನಿವಾರ ಮುಕ್ತಾಯಗೊಂಡಿದೆ. ಹಾಗಾಗಿ ಇಸ್ರೋ ಗಗನಯಾನ ಯೋಜನೆ ಮೇಲೆ ಹೆಚ್ಚಿನ ಒತ್ತು ನೀಡಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಐಐಟಿ ಭುವನೇಶ್ವರದ 8 ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಶಿವನ್, ಚಂದ್ರಯಾನ 2 ಆರ್ಬಿಟರ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರಲ್ಲಿರುವ 8 ಉಪಕರಣಗಳು ತಮ್ಮ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿವೆ. ಚಂದ್ರಯಾನ 2 ಯೋಜನೆ ಶೇ. 98 ರಷ್ಟು ಯಶಸ್ವಿಯಾಗಿದೆ. ಚಂದ್ರಯಾನ 2 ಯೋಜನೆ ಯಶಸ್ವಿಯಾಗಿರುವುದಕ್ಕೆ 2 ಕಾರಣಗಳಿವೆ. ಅದರಲ್ಲಿ ಮೊದಲನೆಯದು ವಿಜ್ಞಾನ ಮತ್ತು ಎರಡನೆಯದು ತಂತ್ರಜ್ಞಾನಗಳ ಪ್ರದರ್ಶನ. ತಂತ್ರಜ್ಞಾನದ ಬಳಕೆಯಲ್ಲಿ ಯಶಸ್ಸಿನ ಪ್ರಮಾಣ ಪೂರ್ಣವಾಗಿದೆ ಎಂದು ತಿಳಿಸಿದರು.
ಇಸ್ರೋದ ಭವಿಷ್ಯದ ಯೋಜನೆಯನ್ನು ಇನ್ನೂ ಅಂತಿಮಗೊಳಿಸಿಲ್ಲ. ಮುಂದಿನ ವರ್ಷ ಗಗನಯಾನ ಯೋಜನೆಯನ್ನು ಯಶಸ್ವಿಗೊಳಿಸುವುದು ನಮ್ಮ ಮುಂದಿನ ಗುರಿ. ಹಾಗಾಗಿ ಮೊದಲಿಗೆ ಲ್ಯಾಂಡರ್ಗೆ ಏನಾಗಿದೆ? ಅದು ಸಂಪರ್ಕ ಕಡಿದುಕೊಂಡಿದ್ದು ಏಕೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ. ರಾಷ್ಟ್ರಮಟ್ಟದ ಸಮಿತಿ ಮತ್ತು ಇಸ್ರೋದ ತಜ್ಞರು ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿದುಕೊಳ್ಳಲು ಕಾರಣ ಏನು ಎಂಬುದನ್ನು ಹುಡುಕುತ್ತಿದ್ದಾರೆ ಎಂದು ತಿಳಿಸಿದರು.
ಶನಿವಾರ ಬೆಳಗ್ಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಲೂನಾರ್ ನೈಟ್ ಪ್ರಾರಂಭವಾಗಿದೆ. ಇದೇ ಪ್ರದೇಶದಲ್ಲಿ ವಿಕ್ರಂ ಲ್ಯಾಂಡರ್ ಸೆ. 7 ರಂದು ಇಳಿದಿತ್ತು. ಲೂನಾರ್ ನೈಟ್ ಆರಂಭವಾಗಿರುವುದರಿಂದ ಇಲ್ಲಿ ಸೂರ್ಯನ ಬೆಳಕು ತಲುಪುವುದಿಲ್ಲ. ಈ ಹಿನ್ನೆಲೆಯಲ್ಲಿ ವಿಕ್ರಂ ಲ್ಯಾಂಡರ್ ವಿದ್ಯುತ್ ಉತ್ಪಾದಿಸಲು ಸಾಧ್ಯವಿಲ್ಲ. ಜತೆಗೆ ಲೂನಾರ್ ನೈಟ್ ಸಂದರ್ಭದಲ್ಲಿ ದಕ್ಷಿಣ ಧ್ರುವದಲ್ಲಿ ತಾಪಮಾನ ಮೈನಸ್ 200 ಡಿಗ್ರಿಗಿಂತ ಕಡಿಮೆಯಾಗುತ್ತದೆ. ಇಷ್ಟು ಕಡಿಮೆ ತಾಪಮಾನದಲ್ಲಿ ಲ್ಯಾಂಡರ್ನಲ್ಲಿರುವ ಉಪಕರಣಗಳು ಚಳಿಯಿಂದ ನಿಷ್ಕ್ರಿಯಗೊಳ್ಳಲಿವೆ ಎಂದು ಕೆ. ಶಿವನ್ ಈ ಮೊದಲೇ ತಿಳಿಸಿದ್ದರು.
ಕೃಷಿಗಾಗಿ, ಕೃಷಿ ಉಳಿಸುವುದಕ್ಕಾಗಿ ಸುರಂಗ ಕೊರೆದು ನೀರು ಹರಿಸಿದ ವಿಶೇಷ ಸಾಧನೆಯನ್ನು ಮಾಡಿದ್ದಾರೆ…
ದೇಶಾದ್ಯಂತ ಅಳಿವಿನಂಚಿಗೆ ತಲುಪಿರುವ ಗುಬ್ಬಚ್ಚಿ ಸಂಕುಲದ ರಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು…
ಸ್ವಾವಲಂಬನೆಯ ಜೀವನ ಕಟ್ಟಿಕೊಳ್ಳುತ್ತಿರುವ ಅನೇಕ ಮಹಿಳಾ ಉದ್ಯಮಿದಾರರಿಗೆ ಎನ್‍ಆರ್ ಎಲ್‍ಎಮ್ ಯೋಜನೆಯು ಸ್ಪೂರ್ತಿಯ…
ಕೊಡಗು ಜಿಲ್ಲೆಯಲ್ಲಿ ಅಕ್ರಮ ಲಾಟರಿ, ಇತರೆ ರಾಜ್ಯದ ಲಾಟರಿಗಳು, ಮಟ್ಕಾಗೆ ಪೂರ್ಣ ಪ್ರಮಾಣದಲ್ಲಿ…
ಹಾನಿಯಾದ ಮನೆ ಮತ್ತು ಬೆಳೆಗಳಿಗೆ ತ್ವರಿತವಾಗಿ ಪರಿಹಾರ ನೀಡಿ, ಯಾವುದೇ ಪ್ರಕರಣಗಳು ಬಾಕಿ…
ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.…