ವಿಜಯದಶಮಿ….. ರಾಕ್ಷಸ ಸಂಹಾರ ಮಾತ್ರವಲ್ಲ… ಧರ್ಮದ ಜಯದ ಸಂಕೇತ…..

October 8, 2019
11:39 AM

ಸಮಸ್ತರಿಗೂ ವಿಜಯದಶಮಿಯ ಶುಭಾಶಯಗಳು. ಇದು ಕೇವಲ ಆಚರಣೆಯಲ್ಲಿ ಧರ್ಮದ ಜಯದ ಸಂಕೇತ. ನಮ್ಮೊಳಗಿನ ಅಸುರೀ ಶಕ್ತಿಯ ನಾಶದ ದಿನ. ಲೋಕದ ದುಷ್ಟರ ನಿಗ್ರಹದ ದಿನವಿದು. ಈ ಪ್ರಯುಕ್ತ ವಿಶೇಷ ಲೇಖನ

Advertisement
Advertisement
Advertisement

ದಸರಾ ಹಬ್ಬವನ್ನು  ಭಾರತದ ಅನೇಕ ಭಾಗಗಳಲ್ಲಿ ಭಿನ್ನವಾಗಿ ಅಚರಿಸುತ್ತಾರೆ. ಬಂಗಾಳದಲ್ಲಿ ಕಾಳಿ ಅಥವಾ ದುರ್ಗಿಯ ಪೂಜೆಯೊಂದಿಗೆ ಆಚರಿಸಿದರೆ, ತಮಿಳುನಾಡಲ್ಲಿ ಲಕ್ಷ್ಮಿ, ಸರಸ್ವತಿ ಮತ್ತು ಶಕ್ತಿಯರ ಸಾಮೂಹಿಕ ಆಚರಣೆಯಾಗಿರುತ್ತದೆ. ನವರಾತ್ರಿ ಎಂತಲೂ ಕರೆಯುವ ದಸರಾ ಹಬ್ಬವು ಜಗತ್ತಿನಾದ್ಯಂತ ಹಿಂದುಗಳು ಮತ್ತು ಅನ್ಯಧಮಿ೯ಯರು ಆಚರಿಸುವ ಅತ್ಯಂತ ಮನಮೋಹಕ ಹಬ್ಬ. 10 ದಿನಗಳ ವಿಜೃಂಭಣೆಯ ವಿಜಯದಶಮಿ ಆಚರಣೆಯೊಂದಿಗೆ ಅಂತ್ಯಗೊಳ್ಳುತ್ತದೆ. ಇದರ ಆಚರಣೆಯ ರೀತಿ ಪ್ರಾದೇಶಿಕವಾಗಿ ಭಿನ್ನವಾಗಿದೆ.ಉತ್ತರ ಭಾರತದಲ್ಲಿ ದಸರಾ, ಶ್ರೀರಾಮ ರಾಕ್ಷಸ ಅರಸು ರಾವಣನನ್ನು ವಧಿಸಿದರ ಸಂಕೇತವಾಗಿದೆ. ಅಧಮ೯ದ ವಿರುದ್ಧ ಧಮ೯ದ ಜಯದ ಸಂಕೇತವಾಗಿದೆ.

Advertisement

ವಿಜಯ ದಶಮಿಯು ನವರಾತ್ರಿಯ ಕೊನೆಯ ದಿನ. ದುರ್ಗಾ ದೇವಿಯ ಹಬ್ಬವನ್ನು ಭಾರತದಾದ್ಯಂತ ವಿವಿಧ ಹೆಸರುಗಳಲ್ಲಿ ಆಚರಿಸುತ್ತಾರೆ. ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ದುರ್ಗಾ ಪೂಜೆಯನ್ನು ಭಾರತದ ಪೂರ್ವ ಭಾಗದಲ್ಲಿ ಪ್ರಮುಖ ಉತ್ಸವವನ್ನಾಗಿ ಆಚರಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಈ ಹಬ್ಬದ ರೂಪದಲ್ಲಿ ಬಹಳ ಅದ್ದೂರಿಯಾಗಿ ಆಚರಿಸುತ್ತಾರೆ. ಮುಂಬೈ ಗಣೇಶ ಪೂಜೆಗೆ ಹೆಸರಾದಂತೆಯೇ ಕೋಲ್ಕತ್ತಾ ದುರ್ಗಾ ಪೂಜೆಗೆ ಪ್ರಸಿದ್ಧಿ ಪಡೆದಿದೆ. ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯನ್ನು ದಶಮಿ ತಿಥಿ ಅಥವಾ ಅಶ್ವಿನ್ ತಿಂಗಳ ಹತ್ತನೇ ದಿನದಲ್ಲಿ ಆಚರಿಸಲಾಗುತ್ತದೆ.

ಮಹಿಷಾಸುರನ ಸಂಹಾರ… ವಿಜಯ ದಶಮಿ ಆಚರಣೆಯ ಹಿಂದಿರುವ ಪ್ರಮುಖ ಕಥೆಯೆಂದರೆ ದುರ್ಗಾ ದೇವಿಯು ದುಷ್ಟನಾದ ಮಹಿಷಾಸುರ ಎನ್ನುವ ರಾಕ್ಷಸನನ್ನು ಸಂಹರಿಸಿರುವುದು. ಮಹಿಷಾಸುರನು ಕಾಡೆಮ್ಮೆಯ ರೂಪದಲ್ಲಿ ಕಾಣಿಸಿಕೊಂಡ ಎನ್ನಲಾಗುತ್ತದೆ. ಈ ರಾಕ್ಷಸನು ಯಾವುದೇ ಮನುಷ್ಯನಿಂದ, ದೇವರಿಂದ ಅಥವಾ ವಿಶಿಷ್ಟ ಶಕ್ತಿಯಿಂದ ತನ್ನನ್ನು ಸಂಹರಿಸಲು ಸಾಧ್ಯವಾಗಬಾರದು ಎನ್ನುವ ವರವನ್ನು ಪಡೆದಿದ್ದನು. ತನ್ನ ಅಮರತ್ವದ ವರವನ್ನು ಹೊಂದಿರುವ ರಾಕ್ಷಸ ಅಹಂಕಾರದಿಂದ ಮೂರು ಲೋಕದ ಜನರಿ ಹಾಗೂ ದೇವತೆಗಳಿಗೆ ತೊಂದರೆ ಕೊಡಲು ಪ್ರಾರಂಭಿಸಿದನು. ಆಗ ಎಲ್ಲರೂ ರಾಕ್ಷಸನ ಕಾಟ ತಪ್ಪಿಸಬೇಕೆಂದು ಬೇಡಿಕೊಳ್ಳುತ್ತಿದ್ದರು.

Advertisement

ಮೂರುಲೋಕದ ಜನರ ಪ್ರಾರ್ಥನೆ ಕೇಳಿದ ದೇವಿ ದುರ್ಗೆಯಾಗಿ ಅವತರಿಸಿದಳು. ಭವ್ಯವಾದ ಮತ್ತು ಭಯವನ್ನುಂಟುಮಾಡುವಂತಹ ಶಕ್ತಿ ರೂಪಳಾಗಿ, ಸಿಂಹದ ಮೇಲೆ ಕುಳಿತು, ಹತ್ತು ಕೈಗಳಲ್ಲಿ ಹತ್ತು ಬಗೆಯ ಆಯುಧಗಳನ್ನು ಹಿಡಿದು ಬಂದಳು. ರಾಕ್ಷಸನಾದ ಮಹಿಷಾಸುರನನ್ನು ವಿಜಯ ದಶಮಿಯ ದಿನ ಸಂಹಾರ ಮಾಡಿದಳು. ಅಂದಿನಿಂದ ವಿಜಯ ದಶಮಿಯನ್ನು ಭಕ್ತರು ಬಹಳ ಅದ್ದೂರಿಯಿಂದ ಹಬ್ಬವನ್ನಾಗಿ ಆಚರಿಸಿದರು ಎನ್ನುವ ಪ್ರತೀತಿ ಇದೆ.

ಮೈಸೂರು ದಸರಾ ರಾಜ್ಯದಲ್ಲಿ ಮಹತ್ವದ ಹಬ್ಬ. ದಸರಾ ಆಚರಣೆಯನ್ನು ಪುರಾತನ ಪದ್ಧತಿಯಲ್ಲೇ ಆಚರಿಸುತ್ತಾ ಬಂದಿದೆ. ಬಹುತೇಕ ಸೆಪ್ಟಂಬರ್/ಅಕ್ಟೋಬರ್ ತಿಂಗಳಲ್ಲಿ ಮೈಸೂರಿನ ಬೀದಿಗಳು, ಮನೆಗಳು ಸುಣ್ಣ ಬಣ್ಣಗೊಂಡು ಹೊಸ ವಿಶಿಷ್ಟವಾದ ಖುತುವಿನ ಆಚರಣೆಗೆ ಕಣ್ಣ್-ಮನ ತಣಿಸುವಂತೆ ಕಂಗೊಳಿಸುತ್ತದೆ. ದಸರಾ ಹಬ್ಬವೂ ರಾಜಪ್ರಭುತ್ವದ ಪ್ರತೀಕವಾಗಿದೆ. ದಸರಾ ಕಾಲಘಟ್ಟದಲ್ಲಿ ಬದಲಾವಣೆಯಾಗುತ್ತಾ ಬಂದು ನಾಡಜನರ ಹಬ್ಬವಾಗಿದೆ. ಸಾಮಾನ್ಯವಾಗಿ ಮೈಸೂರು ದಸರಾವನ್ನು 10 ದಿನಗಳ ಸುಧೀಘ೯ ಹಬ್ಬವೆಂದೇ ಕರೆಯಲಾಗುತ್ತೆ. 9 ದಿನಗಳ ನವರಾತ್ರಿ ಕೊನೆಯಲ್ಲಿ ಬರುವ ಹತ್ತನೆಯ ದಿನವೇ ವಿಜಯದಶಮಿಯಾಗಿದೆ. ಮೈಸೂರಿನಲ್ಲಿ ಈ ಹಬ್ಬವನ್ನು ಮೈಸೂರನ್ನು ರಕ್ಷಿಸುತ್ತಿರುವ ತಾಯಿ ಚಾಮುಂಡಿಯು ಮಹಿಷಾಸುರನೆಂಬ ಅಸುರನನ್ನು ಸಂಹರಿಸಿ ವಿಜಯ ಸಾಧಿಸಿದ್ದರ ಸಂಕೇತವಾಗಿ ಆಚರಿಸಲಾಗುತ್ತದೆ.

Advertisement

ದಸರಾ ದಿನಗಳಂದು ಮಹಾರಾಜರ ದಬಾ೯ರ್ ಹಾಲಿನಲ್ಲಿ ಸಾಂಸ್ಕ್ರತಿಕ ತಂಡಗಳ ಪ್ರದಶ೯ನದೊಂದಿಗೆ ಅತ್ಯುತ್ತಮ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಜಯದಶಮಿಯಂದು ತಾಯಿ ಚಾಮುಂಡಿಯ ಮೂತಿ೯ಯನ್ನು ಹೊತ್ತ ಶೃಂಗಾರಗೊಂಡ ಆನೆ ಸಾಲುಗಳ ಮೆರವಣಿಗೆ, ವಿವಿಧ ಕಲಾ ತಂಡಗಳು, ಸ್ಥಬ್ಧ ಚಿತ್ರಗಳು, ವಾದ್ಯವೃಂದಗಳು, ಪೋಲಿಸ್‌ ಹಾಗೂ ಸೈನಿಕ ದಳಗಳೊಂದಿಗೆ ನಗರದ ರಾಜ ಬೀದಿಯಲ್ಲಿ ಹಾದುಹೋಗುತ್ತದೆ. ಚಾಮುಂಡೇಶ್ವರಿಯು ಮೈಸೂರು ಮಹಾರಾಜರ ಕುಲದೈವವಾಗಿದ್ದು ಆ ತಾಯಿಯ ಮೂತಿ೯ ಮೆರವಣಿಗೆಯ ಪ್ರಧಾನವಾಗಿರುತ್ತದೆ.

ದಸರಾ, ನವರಾತ್ರಿಯ ಕೊನೆಯ ಆಚರಣೆ. ದಸರಾದ ಒಂಭತ್ತು ದಿನಗಳ ದುಗಾ೯ದೇವಿಯ ಮೂತಿ೯ ಪೂಜೆ ಸಲ್ಲಿಕೆಯ ನಂತರ ಕೊನೆಗಾಣುವ ಹಬ್ಬ. ಗುಜರಾತಿನಲ್ಲಿ ನವರಾತ್ರಿಯಂದು ಆಚರಿಸುತ್ತಾರೆ. ಇದೇ ದಸೇರಾದ ಶುಭದಿನದಂದು ಎಷ್ಟೋ ಕುಟುಂಬಗಳು ತಮ್ಮ ಮಕ್ಕಳಿಗೆ ಅಕ್ಷರ ಅಭ್ಯಾಸದ ಶುಭ ಆರಂಭ ಮಾಡಿಸುತ್ತಾರೆ. ಈ ಪುರಾತನ ಪದ್ಧತಿಯನ್ನು ಕೇರಳದಲ್ಲಿ ಸಹ ಅನ್ಯ ಧಮ೯ದ ಅನೇಕ ಕುಟುಂಬಗಳೂ ಕೂಡ ಆಚರಿಸುತ್ತಾರೆ. ನೇಪಾಳದಲ್ಲಿ ದಸರೆಯನ್ನು ದಸಿನ್ ಎಂಬುದಾಗಿ ಆಚರಿಸಲಾಗುತ್ತೆ. ಮೈಸೂರು ದಸರಾ ಅತ್ಯಂತ ವೈಭವಯುತವಾಗಿ ಆಚರಿಸುವ ಹಿನ್ನೆಲೆಯಲ್ಲಿ ಜಗತ್ತಿನುದ್ದಗಲಕ್ಕೂ ಪ್ರವಾಸಿಗರನ್ನು ಆಕಷಿ೯ಸುವ ಹಬ್ಬವಾಗಿದೆ.

Advertisement

 

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮೊಗ್ರದಲ್ಲಿ ಕನ್ನಡ ದೇವತೆ ನೇಮ | ತುಳುನಾಡಿನಲ್ಲಿ ಈಗ ನೇಮ-ನಡಾವಳಿ ದಿನಗಳು |
January 21, 2025
3:50 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ರಾಜ್ಯದಿಂದ 3.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಖರೀದಿಗೆ ಕೇಂದ್ರ ಸರ್ಕಾರ ಸಮ್ಮತಿ
January 15, 2025
6:47 AM
by: The Rural Mirror ಸುದ್ದಿಜಾಲ
ಕಾಡಾನೆಗಳ ಹಾವಳಿ ತಪ್ಪಿಸಲು ರೈಲ್ವೆ ಬ್ಯಾರಿಕೇಡ್
January 12, 2025
9:04 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror