ಪೆರ್ನಾಜೆ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಳೆದ ಮೇ ತಿಂಗಳಲ್ಲಿ 2018 19 ನೇ ಸಾಲಿನಲ್ಲಿ ನಡೆಸಿದ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳಾದ ಕಿರಣ್ ಶ್ರೀ ಯನ್ (ನಂಜುಂಡಯ್ಯ ಮತ್ತು ಉಷಾ ಅವರ ಪುತ್ರಿ) ಪ್ರಿಯಾ ಪಲ್ಲವಿ ಎಸ್ ವಿ (ಸೋಮಪ್ಪ ಮತ್ತು ವಾರಿಜಾ ರವರ ಪುತ್ರಿ) ಯವರು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಪಲ್ಲವಿ ಉಬರ್ (ರಾಜಗೋಪಾಲ್ ಮತ್ತು ಗೀತಾ ಲಕ್ಷ್ಮಿ ಅವರ ಪುತ್ರಿ) ಅಕ್ಷಯ ಕೆಎಸ್ (ಶಿವಶಂಕರ್ ಮತ್ತು ಅರ್ಚನ ಅವರ ಪುತ್ರಿ) ಇವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು ಶೇಕಡಾ 100 ಫಲಿತಾಂಶ ಬಂದಿದೆ ಎಂದು ಸಂಗೀತ ಶಿಕ್ಷಕಿ ಸವಿತಾ ಕೊಡಂದೂರ್ ತಿಳಿಸಿದ್ದಾರೆ ಇಲ್ಲಿ ಶಾಸ್ತ್ರೀಯ ಸಂಗೀತದ ಜೊತೆ ಸುಗಮ ಹಾಡುಗಳಾದ ಭಕ್ತಿ, ಭಾವ, ಜನಪದ ಗೀತೆಗಳನ್ನು ನೀಡುವುದರ ಜೊತೆಗೆ ವೈವಿಧ್ಯಮಯ ಹಾಡುಗಾರಿಕೆಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ವಿಶೇಷವಾಗಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement