ಸವಣೂರು: ತುಳುನಾಡಿನಲ್ಲಿ ಬಹಳಷ್ಟು ಹಬ್ಬಗಳು ಆಚರಣೆಯಲ್ಲಿದ್ದು ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಆಚರಿಸುವ ಹಬ್ಬಗಳಾಗಿವೆ. ಈ ಎಲ್ಲಾ ಹಬ್ಬಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದ್ದು ಭೂತಾರಾಧನೆ, ನಾಗಾರಾಧನೆ ಅವುಗಳಲ್ಲಿ ಪ್ರಮುಖವಾದವುಗಳಾಗಿವೆ.ಹೀಗೆ ಆಟಿ ತಿಂಗಳಿಗೂ ತನ್ನದೇ ಆದ ಮಹತ್ವವಿದೆ.ಆಟಿ ತಿಂಗಳ ಒಂದೊಂದು ಆಹಾರ ಸೇವನೆಯ ಹಿಂದೆ ವೈಜ್ಞಾನಿಕ ಮಹತ್ವ ಇದೆ ಎಂದು ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆ ಯ ಶಿಕ್ಷಕ ಅಜಿತ್ ಗೌಡ ಐವರ್ನಾಡು ಹೇಳಿದರು.
ಅವರು ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆಟಿದ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು , ಆಟಿ ತಿಂಗಳು ಎಂದರೆ ಹಿಂದಿನ ದಿನಗಳಲ್ಲಿ ಬಹಳ ಕಷ್ಟದ ದಿನಗಳು, ಆ ದಿನಗಳಲ್ಲಿ ಹೊಟ್ಟೆಗಿಲ್ಲದೆ ಸೇವಿಸಿದ ಆಹಾರವು ಇಂದಿನ ದಿನಗಳಲ್ಲಿ ಔಷಧೀಯ ಗುಣವಿರುವ ಆಹಾರವಾಗಿದ್ದು, ಆಟಿಯ ಎಲ್ಲ ಆಚಾರಗಳಲ್ಲೂ ವೈಜ್ಞಾನಿಕ ಸತ್ಯ ಅಡಗಿದೆ ಎಂದರು.
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ,ಆಟಿ ಎನ್ನುವಂತದ್ದು ಉತ್ಸವವಲ್ಲ, ಅದೊಂದು ಆಚರಣೆ. ಆಟಿ ತಿಂಗಳು ಕಷ್ಟದ ಸಮಯವಾಗಿದ್ದು ಅದು ನಮ್ಮನ್ನು ಮಾನಸಿಕವಾಗಿ,ದೈಹಿಕವಾಗಿ ಗಟ್ಟಿಗೊಳಿಸುವ ವಿಚಾರವನ್ನು ಹೊಂದಿದೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು ಎಂದರು.
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ, ತುಳುನಾಡಿಗೆ ಅದರದೇ ಆದ ಇತಿಹಾಸವಿದ್ದು ಇಲ್ಲಿನ ಆಚರಣೆ, ಸಂಸ್ಕೃತಿಗಳನ್ನು ಅರ್ಥೈಸಿಕೊಂಡು ತಮ್ಮದಾಗಿಸಿಕೊಂಡಲ್ಲಿ ನಮ್ಮ ಜೀವನವು ಸುಖಕರವಾಗಿರುತ್ತದೆ ಎಂದರು.
ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್.ರೈ, ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿ„ರೈ,ಜತೆಕಾರ್ಯದರ್ಶಿ ಕು. ಮಲ್ಲಿಕಾ ಕೆ. ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಮನೋಜ್ ಸ್ವಾಗತಿಸಿ, ಧನ್ಯಶ್ರೀ ವಂದಿಸಿದರು. ಧನುಶ್ರೀ ಅವರು ಡೆನ್ನನ ಡೆನ್ನಾನ ಹಾಡು ಹಾಡಿದರು.ಶ್ರಾವ್ಯ ಕಾರ್ಯಕ್ರಮ ನಿರ್ವಹಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…