Advertisement
ಸುದ್ದಿಗಳು

ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಟಿದ ಪರ್ವ

Share

ಸವಣೂರು: ತುಳುನಾಡಿನಲ್ಲಿ ಬಹಳಷ್ಟು ಹಬ್ಬಗಳು ಆಚರಣೆಯಲ್ಲಿದ್ದು ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಸೇರಿ ಆಚರಿಸುವ ಹಬ್ಬಗಳಾಗಿವೆ. ಈ ಎಲ್ಲಾ ಹಬ್ಬಗಳು ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದ್ದು ಭೂತಾರಾಧನೆ, ನಾಗಾರಾಧನೆ ಅವುಗಳಲ್ಲಿ ಪ್ರಮುಖವಾದವುಗಳಾಗಿವೆ.ಹೀಗೆ ಆಟಿ ತಿಂಗಳಿಗೂ ತನ್ನದೇ ಆದ ಮಹತ್ವವಿದೆ.ಆಟಿ ತಿಂಗಳ ಒಂದೊಂದು ಆಹಾರ ಸೇವನೆಯ ಹಿಂದೆ ವೈಜ್ಞಾನಿಕ ಮಹತ್ವ ಇದೆ ಎಂದು ನಿಂತಿಕಲ್ಲು ಕೆ.ಎಸ್.ಗೌಡ ವಿದ್ಯಾಸಂಸ್ಥೆ ಯ ಶಿಕ್ಷಕ ಅಜಿತ್ ಗೌಡ ಐವರ್ನಾಡು ಹೇಳಿದರು.

Advertisement
Advertisement

ಅವರು  ಸವಣೂರು ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಆಟಿದ ಪರ್ವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ. ಸೀತಾರಾಮ ರೈ ಸವಣೂರು , ಆಟಿ ತಿಂಗಳು ಎಂದರೆ ಹಿಂದಿನ ದಿನಗಳಲ್ಲಿ ಬಹಳ ಕಷ್ಟದ ದಿನಗಳು, ಆ ದಿನಗಳಲ್ಲಿ ಹೊಟ್ಟೆಗಿಲ್ಲದೆ ಸೇವಿಸಿದ ಆಹಾರವು ಇಂದಿನ ದಿನಗಳಲ್ಲಿ ಔಷಧೀಯ ಗುಣವಿರುವ ಆಹಾರವಾಗಿದ್ದು, ಆಟಿಯ ಎಲ್ಲ ಆಚಾರಗಳಲ್ಲೂ ವೈಜ್ಞಾನಿಕ ಸತ್ಯ ಅಡಗಿದೆ ಎಂದರು.

Advertisement

ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಮಾತನಾಡಿ,ಆಟಿ ಎನ್ನುವಂತದ್ದು ಉತ್ಸವವಲ್ಲ, ಅದೊಂದು ಆಚರಣೆ. ಆಟಿ ತಿಂಗಳು ಕಷ್ಟದ ಸಮಯವಾಗಿದ್ದು ಅದು ನಮ್ಮನ್ನು ಮಾನಸಿಕವಾಗಿ,ದೈಹಿಕವಾಗಿ ಗಟ್ಟಿಗೊಳಿಸುವ ವಿಚಾರವನ್ನು ಹೊಂದಿದೆ. ಇತಿಹಾಸವನ್ನು ಮರೆತವರು ಇತಿಹಾಸವನ್ನು ನಿರ್ಮಿಸಲಾರರು ಎಂದರು.

ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಮಾತನಾಡಿ, ತುಳುನಾಡಿಗೆ ಅದರದೇ ಆದ ಇತಿಹಾಸವಿದ್ದು ಇಲ್ಲಿನ ಆಚರಣೆ, ಸಂಸ್ಕೃತಿಗಳನ್ನು ಅರ್ಥೈಸಿಕೊಂಡು ತಮ್ಮದಾಗಿಸಿಕೊಂಡಲ್ಲಿ ನಮ್ಮ ಜೀವನವು ಸುಖಕರವಾಗಿರುತ್ತದೆ ಎಂದರು.

Advertisement

ವೇದಿಕೆಯಲ್ಲಿ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ರಾಜಲಕ್ಷ್ಮಿ ಎಸ್.ರೈ, ವಿದ್ಯಾರ್ಥಿ ಸಂಘದ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀನಿ„ರೈ,ಜತೆಕಾರ್ಯದರ್ಶಿ ಕು. ಮಲ್ಲಿಕಾ ಕೆ. ಎಸ್ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮನೋಜ್ ಸ್ವಾಗತಿಸಿ, ಧನ್ಯಶ್ರೀ ವಂದಿಸಿದರು. ಧನುಶ್ರೀ ಅವರು ಡೆನ್ನನ ಡೆನ್ನಾನ ಹಾಡು ಹಾಡಿದರು.ಶ್ರಾವ್ಯ ಕಾರ್ಯಕ್ರಮ ನಿರ್ವಹಿಸಿದರು.

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಯೋಚಿಸಿ… ಚಿಂತನೆ ನಡೆಸಿ… ಮತದಾನ ಮಾಡಬೇಕು… | ಏಕೆ ಗೊತ್ತಾ….?

ಮತದಾನ ಏಕೆ ಮಾಡಬೇಕು, ಯೋಚಿಸಿ ಏಕೆ ಮತದಾನ ಮಾಡಲೇಬೇಕು..? ಈ ಬಗ್ಗೆ ಅಭಿಪ್ರಾಯ…

3 hours ago

ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ವಿಚಾರ : ತಜ್ಞರ ವರದಿ ಸಲ್ಲಿಸಲು ಕೇಂದ್ರಕ್ಕೆ ಸುಪ್ರೀಂ ಸೂಚನೆ

ರಾಜ್ಯಕ್ಕೆ ಕೇಂದ್ರದಿಂದ(Central Govt) ಬರಬೇಕಾದ ಬರ ಪರಿಹಾರ ಕುರಿತಂತೆ ರಾಜ್ಯ ಹಾಗೂ ಕೇಂದ್ರ…

3 hours ago

ನಿಮಗಿದು ಗೊತ್ತೇ? : ಆರೋಗ್ಯಕ್ಕಾಗಿ ಭೂ ವಿದ್ಯುತ್ ಆಯಸ್ಕಾಂತದ ಮಹತ್ವ… : ಅರ್ಥಿಂಗ್/ಗ್ರೌಂಡಿಂಗ್ ಹಾಗೂ ಆರೋಗ್ಯ!

ಪರಿಸರ ಔಷಧ ಶಾಸ್ತ್ರವು(Environmental Medicine) ಸಾಮಾನ್ಯವಾಗಿ ಮಾನವನ ಆರೋಗ್ಯದ(Human health) ಮೇಲೆ ನಕಾರಾತ್ಮಕ…

6 hours ago

ಎರಡನೇ ಹಂತದ ಮತದಾನಕ್ಕೆ ರಾಜ್ಯದಲ್ಲಿ ಭರ್ಜರಿ ತಯಾರಿ : ಭಾರತ ವಿಶ್ವದ ಟಾಪ್ 3 ಸ್ಥಾನಕ್ಕೇರಿಸುವ ಶಕ್ತಿ ನಿಮ್ಮ ಮತಕ್ಕಿದೆ : ಮೋದಿ

ಕರ್ನಾಟಕದಲ್ಲಿ(Karnakta) ಮೊದಲ ಹಂತದ ಚುನಾವಣೆ(Election) ಮುಗಿದಿದ್ದು, ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ(Campaign)…

6 hours ago

ರೈತರ ಪಾಲಿಗೆ ನೆರವಾದ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ : 17ನೇ ಕಂತಿನ ಹಣ ರೈತರ ಖಾತೆಗೆ ಯಾವಗ ಬರುತ್ತೆ..?

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌(PM Kisan) ಯೋಜನೆ ಆರಂಭವಾದಗಿಂದಲೂ ರೈತರ(Farmer) ಖಾತೆಗೆ ನೇರವಾಗಿ…

7 hours ago