ಶಾಲೆಯಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ತರಗತಿಯಿಂದ ಹೊರಗೆ ನಿಲ್ಲಿಸುವುದು, ಹೆತ್ತವರನ್ನು ಕರೆತರುವುದು ಇತ್ಯಾದಿ ಇದ್ದೇ ಇದೆ. ಆದರೆ ಗುಜರಾತ್ ನ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿಗಳು ತಪ್ಪು ಮಾಡಿದರೆ ಗಿಡವನ್ನೂ ನೆಡಬೇಕು..!. ಈ ಕಡೆಗೆ ನಮ್ಮ ಫೋಕಸ್…
ಎಲ್ಲರಿಗೂ ಮಾದರಿ ಎನಿಸುವ ಪರಿಸರ ಸ್ನೇಹಿಯಾದ ಕ್ರಮವನ್ನು ತೆಗೆದುಕೊಂಡಿರುವ ಗುಜರಾತ್ ವಿಶ್ವವಿದ್ಯಾನಿಲಯದ ಅಧೀನದಲ್ಲಿರುವ ಶೈಕ್ಷಣಿಕ ಸಂಸ್ಥೆಯೊಂದು, ತನ್ನ ಆವರಣದಲ್ಲಿ ತಪ್ಪು ಮಾಡುವ ವಿದ್ಯಾರ್ಥಿಗಳಿಗೆ ಗಿಡ ನೆಡುವ ಶಿಕ್ಷೆಯನ್ನು ನೀಡುತ್ತಿದೆ.
ಶ್ರೀ ಗಿಜುಭಾಯ್ ಛಗನ್ಭಾಯ್ ಪಟೇಲ್ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್, ಇಂಟೀರಿಯರ್ ಡಿಸೈನ್ ಆ್ಯಂಡ್ ಫೈನ್ ಆರ್ಟ್ಸ್ನ ವಾಸ್ತುಶಿಲ್ಪ ವಿಭಾಗದ ವಿದ್ಯಾರ್ಥಿಗಳು ಗಿಡ ನೆಡುವ ಮೂಲಕ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವನ್ನು ಕಂಡುಕೊಳ್ಳಬೇಕಾಗಿದೆ. ಈ ಮೂಲಕ ಪ್ರಕೃತಿಯನ್ನು ಉಳಿಸಲು ಕೊಡುಗೆಯನ್ನು ನೀಡಬೇಕಾಗಿದೆ.
ತರಗತಿಗಳಿಗೆ ತಡವಾಗಿ ಬಂದಾಗ ಅಥವಾ ಅಸೈನ್ಮೆಂಟ್ ಅನ್ನು ಸಮಯಕ್ಕೆ ಸರಿಯಾಗಿ ಸಲ್ಲಿಕೆ ಮಾಡದಿದ್ದಾಗ ಶಿಕ್ಷೆಯ ಭಾಗವಾಗಿ ಗಿಡವನ್ನು ನೆಡುವುದು ಕಡ್ಡಾಯವಾಗಿದೆ.
“ಇದು ಪರಿಸರ ಸ್ನೇಹಿ ಶಿಕ್ಷೆಯಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷೆಯನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ಪ್ರತಿ ತಪ್ಪಿಗೂ ಅವರು ಸಸಿ ನೆಡಬೇಕು ಮತ್ತು ಅದನ್ನು ಕಾಲೇಜು ತೊರೆಯುವವರೆಗೂ ನೋಡಿಕೊಳ್ಳಬೇಕು. ತಪ್ಪುಗಳನ್ನು ಮಾಡಿದ ವಿದ್ಯಾರ್ಥಿಗಳಿಗೆ ಈ ಅನನ್ಯ ಶಿಕ್ಷೆಯನ್ನು ನೀಡುವುದು ನನ್ನ ಆಶಯವಾಗಿತ್ತು” ಎಂದು ವಾಸ್ತುಶಿಲ್ಪ ವಿಭಾಗದ ಪ್ರೊಫೆಸರ್ ಮಹೇಶ್ ಪಟೇಲ್ ಹೇಳಿದ್ದಾರೆ.
“ನಾನು ಏನಾದರೂ ತಪ್ಪು ಮಾಡಿದರೆ ನಾನೇ ಇಲ್ಲಿ ಸಸಿಗಳನ್ನು ನೆಡುತ್ತೇನೆ. ಈ ಶಿಕ್ಷೆಯು ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ವ್ಯಕ್ತಿಯಾಗಬಲ್ಲ ಕೆಲವು ಪಾಠಗಳನ್ನು ನೀಡುತ್ತದೆ ಎಂದು ನಾನು ನಂಬುತ್ತೇನೆ. ಈ ಕ್ರಮವು ಚಿಕ್ಕ ವಯಸ್ಸಿನಿಂದಲೂ ಗಿಡಗಳನ್ನು ನೆಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ” ಎಂದಿದ್ದಾರೆ.
ತಮ್ಮ ಕೋರ್ಸ್ ಪೂರ್ಣಗೊಂಡ ಬಳಿಕವೂ ಕೆಲವು ವಿದ್ಯಾರ್ಥಿಗಳು ಕ್ಯಾಂಪಸ್ಸಿಗೆ ಬಂದು ತಮ್ಮ ಸಸಿಗಳನ್ನು ನೋಡಿಕೊಂಡು ಹೋಗುತ್ತಾರೆ ಎಂದು ಅವರು ಹೇಳಿದ್ದಾರೆ.
“ಇದು ಶಿಕ್ಷೆಯಲ್ಲ ಒಂದು ಉತ್ತಮ ಕಾರ್ಯಕ್ರಮ. ನಾನು ನನ್ನ ಮೊಬೈಲ್ ಅನ್ನು ಸೈಲೆಂಟ್ ಮೋಡಿನಲ್ಲಿ ಇಡಲು ಮರೆತ ತಪ್ಪಿಗಾಗಿ ಸಸಿಯನ್ನು ನೆಟ್ಟಿದ್ದೇನೆ’ ಎಂದು ಸಂಸ್ಥೆಯ ವಿದ್ಯಾರ್ಥಿ ನಾಯಕ ಹೇಳಿಕೊಂಡಿದ್ದಾರೆ.
ಇದು ಅತ್ಯುತ್ತಮವಾದ ಶಿಕ್ಷೆಯ ವಿಧಾನವಾಗಿದೆ. ಕಾಲೇಜಿನ ಆವರಣದೊಳಗಿರುವ ಅನೇಕ ಸಸಿಗಳನ್ನು ವಿದ್ಯಾರ್ಥಿಗಳೇ ನೆಟ್ಟಿದ್ದಾರೆ ಎಂದು ಇಲ್ಲಿನ ಬೋಧಕರು ಹೇಳುತ್ತಾರೆ.
(ಕೃಪೆ – ನ್ಯೂಸ್13)
ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಅಧ್ಯಯನ ಮಾಡಲು ಶ್ರೀಲಂಕಾದಿಂದ 38 ಮಂದಿ “ಲಂಕಾ…
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …