ಸುಬ್ರಹ್ಮಣ್ಯ :ಆಧುನಿಕತೆಗೆ ತಕ್ಕಂತೆ ವಿದ್ಯಾರ್ಥಿಗಳ ಕಾರ್ಯಶೈಲಿ ಬದಲಾಗಬೇಕು. ಇಂದು ಸಂಶೋಧನಾ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ವಿನೂತನವಾದ ಸಂಶೋಧನೆ ಕುರಿತು ಆಸಕ್ತಿ ವಹಿಸಬೇಕು ಎಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಉದಯಕುಮಾರ್ ಕೆ ಹೇಳಿದರು.
ಕೆ ಎಸ್ ಎಸ್ ಕಾಲೇಜ್ ಸುಬ್ರಮಣ್ಯ ಸಮಾಜಶಾಸ್ತ್ರ ವಿಭಾಗ ದಿ. ತನುಜ ಮೇಡಂ ಅವರ ಸ್ಮರಣಾರ್ಥ ಕೆಎಸ್‍ಎಸ್ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ನಡೆದ ಸಾಮಾಜಿಕ ಸಮಸ್ಯೆಗಳ ಕುರಿತಾದ ಪ್ರಬಂಧ ಮಂಡನೆ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಮನೋಹರ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗದ ವಿಧ್ಯಾರ್ಥಿನಿ ಆಶಾ ವಂದಿಸಿದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಪ್ರೊಫೆಸರ್ ಆರತಿ ಕೆ ತೀರ್ಥೇಶ್ ಫೈನಲ್ ಬಿಎ ಉಪಸ್ಥಿತರಿದ್ದರು. ಪ್ರಬಂಧ ಮಂಡನೆ ಸ್ಪರ್ಧೆಯ ತೀರ್ಪುಗಾರರಾಗಿ ಡಾಕ್ಟರ್ ಪ್ರಸಾದ್, ಪ್ರೊ. ಉದಯಕುಮಾರ್ ಪ್ರೊ. ಅಶ್ವಿನಿ ಭಾಗವಹಿಸಿದರು.