ವಿದ್ಯುತ್ ಸಂಪರ್ಕ ಕಡಿತಕ್ಕೆ ವಿರೋಧ : ರೈತ ಬಳಗ, ಕಾಫಿ ಉತ್ಪಾದಕರ ಕೂಟದಿಂದ ಪ್ರತಿಭಟನೆ

September 18, 2019
1:00 PM

ಮಡಿಕೇರಿ :ಕೃಷಿ ಉತ್ಪಾದನೆಗೆ ತಾತ್ಕಾಲಿಕವಾಗಿ ಬಳಕೆಯಾದ ವಿದ್ಯುತ್ ಸಂಪರ್ಕದ ಶುಲ್ಕವನ್ನು ಬಲತ್ಕಾರವಾಗಿ ವಸೂಲಿ ಮಾಡಲು ಮುಂದಾಗಿರುವುದಲ್ಲದೆ ತುಂತುರು ನೀರಾವರಿ ಪಂಪ್‍ಸೆಟ್‍ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿರುವ ಚೆಸ್ಕಾಂ ಕ್ರಮವನ್ನು ವಿರೋಧಿಸಿ ರೈತ ಸಮುದಾಯಗಳ ಬಳಗ ಮತ್ತು ಕಾಫಿ ಕೃಷಿಕರ ಉತ್ಪಾದಕರ ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿದವು.

Advertisement
Advertisement
Advertisement
Advertisement

ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಜಿಲ್ಲೆಯ ವಿವಿಧೆಡೆಗಳ ರೈತರು ಹಾಗೂ ಬೆಳೆಗಾರರು ಚೆಸ್ಕಾಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  ಮಂಡ್ಯ, ಹಾಸನ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೃಷಿ ಉತ್ಪಾದನೆಗೆ ವಿದ್ಯುತ್ ಶುಲ್ಕವನ್ನು ಕೈಬಿಟ್ಟಿರುವ ಸರಕಾರ, ಕೊಡಗಿನ ಬಗ್ಗೆ ಮಲತಾಯಿ ಧೋರಣೆ ತಾಳಿದೆ. ಕಳೆದ 2 ವರ್ಷಗಳಿಂದ ಅತಿವೃಷ್ಟಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ, ಕರಿಮೆಣಸು ಫಸಲು ಕೈಕೊಟ್ಟಿದೆ, ಮತ್ತೊಂದೆಡೆ ದರ ಕುಸಿತದಿಂದ ರೈತರ ಬದುಕು ಅತಂತ್ರವಾಗಿದೆ. ಹೀಗಿದ್ದರೂ ಸರಕಾರ ಕೊಡಗಿನ ಕಾಫಿ ಬೆಳೆಗಾರರು ಕೇವಲ 3 ತಿಂಗಳ ಕಾಲ ಬಳಸುವ ಪಂಪ್‍ಸೆಟ್‍ನ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುವುದು ಸರಿಯಲ್ಲ ಎಂದು ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು.
ವಾರ್ಷಿಕ ಮೂರು ಬೆಳೆ ಬೆಳೆಯುವ ಹೊರ ಜಿಲ್ಲೆಯ ರೈತರಿಗೆ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವ ಸರ್ಕಾರ, ಕೊಡಗಿನ ಬೆಳೆಗಾರರಿಗೆ ಯಾಕೆ ಬರೆ ಹಾಕುತ್ತಿದೆ ಎಂದು ಪ್ರಶ್ನಿಸಿದರು.
ಕಳೆದ ವರ್ಷ ಕೂಡ ಚೆಸ್ಕಾಂ ಅಧಿಕಾರಿಗಳು ಇದೇ ರೀತಿ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ ಪ್ರತಿಭಟನಾಕಾರರು ಇದೀಗ ರೈತರು ಹಾಗೂ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ ವಿದ್ಯುತ್ ಸಂಪರ್ಕ ಕಡಿತ ಮತ್ತು ಬಲವಂತದ ಶುಲ್ಕ ವಸೂಲಾತಿಗೆ ಮುಂದಾಗಿರುವುದು ಖಂಡನೀಯವೆಂದರು.

Advertisement

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದ ಪ್ರಮುಖರು ಇತರ ಜಿಲ್ಲೆಗಳಲ್ಲಿ 10 ಹೆಚ್‍ಪಿ ಪಂಪ್‍ಸೆಟ್‍ಗೆ ನೀಡುತ್ತಿರುವ ವಿನಾಯಿತಿಯನ್ನು ಪ್ರವಾಹ ಪೀಡಿತ ಕೊಡಗಿನ ಕಾಫಿ ಬೆಳೆಗಾರರಿಗೂ ನೀಡಬೇಕು. ಈ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು. ಸಣ್ಣ ಬೆಳೆಗಾರರಿಗೂ ಲಕ್ಷಾಂತರ ರೂ. ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ, ಈ ಬೆಳವಣಿಗೆಯನ್ನು ತಡೆಯಬೇಕೆಂದು ಒತ್ತಾಯಿಸಿದರು.

ಪ್ರತಿಭಟನಾಕಾರರ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಚೆಸ್ಕಾಂ, ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬೆಳೆಗಾರರ ಹಾಗೂ ರೈತರ ಸಭೆ ನಡೆಸಿ ಚರ್ಚಿಸಿದರು.

Advertisement

ಈ ಸಂದರ್ಭ ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಹಾನಿಯಿಂದ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ರೈತರು ಹಾಗೂ ಬೆಳೆಗಾರರು ವಿವರಿಸಿದರು. ಕೇವಲ ಮೂರು ತಿಂಗಳು ಪಂಪ್ ಸೆಟ್‍ಗಳಿಗೆ ವಿದ್ಯುತ್ ಸಂಪರ್ಕ ಪಡೆಯುವ ನಮಗೆ ಇತರ ಜಿಲ್ಲೆಗಳಂತೆ ಯಾಕೆ ವಿನಾಯಿತಿ ನೀಡುತ್ತಿಲ್ಲವೆಂದು ಪ್ರಶ್ನಿಸಿದರು.

ಸರಕಾರದ ಮುಂದಿನ ಆದೇಶದವರೆಗೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗುವುದಿಲ್ಲವೆಂದು ಚೆಸ್ಕಾಂ ಅಧಿಕಾರಿಗಳು ಭರವಸೆ ನೀಡಿದರು.ವಿದ್ಯುತ್ ಶುಲ್ಕದ ವಿನಾಯಿತಿಯಿಂದ ಚೆಸ್ಕಾಂಗೆ ಆಗುವ ನಷ್ಟದ ಮೊತ್ತದ ವಿವರವನ್ನು ಕಾಫಿ ಮಂಡಳಿಗೆ ಸಲ್ಲಿಸಬೇಕು, ಚೆಸ್ಕಾಂ ನೀಡುವ ಪ್ರಸ್ತಾವನೆಗೆ ಅನುಗುಣವಾಗಿ ಅನುದಾನವನ್ನು ಸರಕಾರದ ಬಜೆಟ್ ಮೂಲಕ ಪಡೆದು ಚೆಸ್ಕಾಂಗೆ ಭರ್ತಿ ಮಾಡುವಂತೆ ಜಿಲ್ಲಾಧಿಕಾರಿ ಇದೇ ಸಂದರ್ಭ ಅಧಿಕಾರಿಗಳಿಗೆ ಸಲಹೆ ನೀಡಿದರು.

Advertisement

ಕೂಟದ ಪ್ರಮುಖರಾದ ಎನ್.ಸಿ.ಪೊನ್ನಪ್ಪ ಕ್ಲೈವಾ, ಎಂ.ಎ.ನಂದಾ ಬೆಳ್ಯಪ್ಪ, ಕೆಜಿಎಫ್ ಸಂಘದ ವಿಶ್ವನಾಥ್, ರಮೇಶ್ ದಾಸಂಡ, ಸತೀಶ್ ಜಿ.ಜಿ.ಗರಗಂದೂರು, ಅರ್ಪಿತ್ ಪೂವಣ್ಣ ಅಂದಗೋವೆ, ಚಂದ್ರಶೇಖರ್, ಗೌತಮ್ ಕಲ್ಲೂರು ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‌ಸಾರಡ್ಕ ಕೃಷಿ ಹಬ್ಬ | “ನಾ ಕಂಡಂತೆ ಸಾರಡ್ಕ ಕೃಷಿ ಹಬ್ಬ 2025” ಕೃಷಿಕ ಎ ಪಿ ಸದಾಶಿವ ಅವರ ಅಭಿಪ್ರಾಯ |
January 27, 2025
11:12 AM
by: ಎ ಪಿ ಸದಾಶಿವ ಮರಿಕೆ
ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು | ನೂರಾರು ಎಕರೆ ಅರಣ್ಯ ನಾಶ | ಬೆಂಕಿ ನಂದಿಸಲು ಅರಣ್ಯ ಇಲಾಖೆ ಪ್ರಯತ್ನ |
January 26, 2025
7:35 AM
by: The Rural Mirror ಸುದ್ದಿಜಾಲ
ವಿದೇಶದಿಂದ ಅಡಿಕೆ ಕಳ್ಳಸಾಗಾಣಿಕೆ ಪ್ರಕರಣ | ಡಿಎಂಕೆ ಕೌನ್ಸಿಲರ್ ವಶಕ್ಕೆ ಪಡೆದ ಡಿಆರ್‌ಐ
January 26, 2025
7:14 AM
by: The Rural Mirror ಸುದ್ದಿಜಾಲ
ಜ.26 | ಸಾರಡ್ಕದಲ್ಲಿ ಕೃಷಿ ಹಬ್ಬ | ವಿವಿಧ ಗೋಷ್ಠಿಗಳು |
January 25, 2025
5:01 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror