ಸುಳ್ಯ: ವಿಪರೀತ ಬಿಸಿಲು ಹಾಗೂ ಹವಾಮಾನದ ಏರಿಳಿತದ ಕಾರಣದಿಂದ ನಳ್ಳಿ ಮಾತ್ರವಲ್ಲ ಎಳೆ ಅಡಿಕೆ ಬೀಳ್ತಾ ಇದೆ. ನೋಡ ನೋಡುತ್ತಿದ್ದಂತೆ ಏನೂ ಮಾಡಲಾಗದ ಸ್ಥಿತಿ ಇದೆ. ಮಳೆಗಾಲ ಕೊಳೆರೋಗವಾಯ್ತು, ಬೇಸಗೆ ಕಾಲ ಬಿಸಿಲಾಗಿ ನಳ್ಳಿ ಬೀಳುವುದಾಯ್ತು. ಏನೇ ಆದರೂ ಅಡಿಕೆ ಮಾತ್ರಾ ಕೆಳಗೆ…!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗ ಹವಾಮಾನದ ಏರಿಳಿತ ವಿಪರೀತವಾಗಿದೆ. ಒಂದೇ ದಿನದಲ್ಲಿ ಬಿಸಿಲು, ಮಳೆ ಹಾಗೂ ಶಾಖ ಗಿಡಗಳ ಮೇಲೆ ಪರಿಣಾಮ ಬೀರ್ತಾ ಇದೆ. ಒಮ್ಮೆಲೇ 38 ಡಿಗ್ರಿಯಿಂದ 40 ಡಿಗ್ರಿಯವರೆಗೆ ತಾಪಮಾನ ಏರುತ್ತದೆ, ಅದೇ ರೀತಿ ಸಂಜೆಯಾಗುತ್ತಿದ್ದಂತೆಯೇ 27 ರಿಂದ 30 ಡಿಗ್ರಿಗೆ ಇಳಿಯುತ್ತದೆ. ಇಂತಹದ್ದೊಂದು ಏರಿಳಿತ ಇತ್ತೀಚೆಗಿನ ವರ್ಷದಲ್ಲಿ ಹೆಚ್ಚಾಗುತ್ತಿದೆ. ಈ ಕಾರಣದಿಂದ ಎಳೆಯ ಅಡಿಕೆ ನಳ್ಳಿ ಬೀಳಲು ಶುರುವಾಗಿದೆ. ಇದಕ್ಕೇನು ಪರಿಹಾರ ಎಂಬ ಚಿಂತೆ ಬೆಳೆಗಾರರನ್ನು ಕಾಡ್ತಾ ಇದೆ.
ಮಳೆಗಾಲ ಮಳೆಯ ಕಾರಣದಿಂದ ಕೊಳೆರೋಗ ಬಾಧಿಸಿದರೆ, ಬೇಸಗೆಯಲ್ಲಿ ವಾತಾವರಣದ ಕಾರಣದಿಂದ ಎಳೆ ನಳ್ಳಿ ಬೀಳುತ್ತಿದೆ. ಹೀಗಾಗಿ ಅಡಿಕೆ ಬೆಳೆಗಾರಿನಿಗೆ ಸಂಕಷ್ಟದ ಮೇಲೆ ಸಂಕಷ್ಟ ಬರಲಾರಂಭಿಸಿದೆ. ಈ ಬಾರಿ ಕೊಳೆರೋಗದ ಕಾರಣದಿಂದ ಸಾಕಷ್ಟು ಫಸಲು ನಾಶ ಹೊಂದಿದ ಬೆಳೆಗಾರಿನಿಗೆ ಇದೀಗ ಅರಿವಿಲ್ಲದೆ ಅಡಿಕೆ ಫಸಲು ನಾಶವಾಗುತ್ತಿದೆ. ಇದರ ಫಲಿತಾಂಶ ಸಿಗುವುದು ಮಳೆಗಾಲದ ನಂತರವೇ.
ಜೂನ್ 6 ರ ನಂತರ ಮನಳೆಗಾಲ ಆರಂಭವಾಗುತ್ತದೆ ಎಂದು ಹವಾಮಾನ ಇಲಾಖೆ ಹೇಳಿದೆ. ಅದುವರೆಗೆ ಈ ಏರಿಳಿತ ಇರುವ ಕಾರಣದಿಂದ ಸಹಿಸಿಕೊಳ್ಳಬೇಕಷ್ಟೇ.
ಆದರೆ ವೈಜ್ಞಾನಿಕವಾಗಿ ಇನ್ನೊಂದು ಮಾಹಿತಿ ಸಿಗುತ್ತದೆ, ಅಡಿಕೆ ಮರ 25 ಲೀಟರ್ ನಷ್ಟು ನೀರನ್ನು ಭೂಮಿಯಿಂದ ಹೀರಿಕೊಳ್ಳುತ್ತದೆ. ನೀರಿನ ಕೊರತೆ ಉಂಟಾದಾಗ ಸಹಜವಾಗಿಯೇ ಮರವೂ ಅದಕ್ಕೆ ಹೊಂದಿಕೊಳ್ಳುತ್ತದೆ. ವಿಪರೀತ ಬಿಸಿಲಾಗಾದ ಎಳೆ ಅಡಿಕೆಗೆ ಶಕ್ತಿ ಕುಂದಿ ಬೀಳುವುದು ಒಂದು ಭಾಗವಾದರೆ, ವಿಪರೀತ ಬಿಸಿಲು ಇದ್ದು ಒಂದು ಮಳೆ ಬಂದರೆ ಇದ್ದಕ್ಕಿದ್ದಂತೆ ಮರ ಒಮ್ಮೆಲೇ ಹೆಚ್ಚು ನೀರು ಹೀರಿಕೊಂಡು ಅಡಿಕೆ ನಳ್ಳಿ ಮೇಲೆ ಪ್ರಭಾವ ಬೀರುತ್ತದೆ. ಹೀಗಾಗಿಯೂ ಕೆಲವೊಮ್ಮೆ ನಳ್ಳಿ ಉದುರುತ್ತದೆ ಎಂಬ ಮಾಹಿತಿ ಲಭ್ಯವಾಗುತ್ತದೆ. ಅದಕ್ಕಾಗಿ ಅಡಿಕೆ ಮರಕ್ಕೆ ಒಮ್ಮೆಲೇ ಹೆಚ್ಚು ನೀರುಣಿಸುವುದು ಹಾಗೂ ಒಮ್ಮೆಲೇ ನೀರು ಕಡಿಮೆ ಮಾಡುವುದು ಅಷ್ಟೊಂದು ಒಳ್ಳೆಯದಲ್ಲ, ಈ ಕಾರಣದಿಂದಲೂ ಅಡಿಕೆ ನಳ್ಳಿ ಉದುರುತ್ತದೆ. ವಾತಾವರಣದ ಕಾರಣದಿಂದಾದರೆ ಏನೂ ಮಾಡಲಾಗದು, ಆದರೆ ನೀರುಣಿಸುವುದರಲ್ಲೂ ಎಚ್ಚರಿಕೆ ವಹಿಸಬೇಕಾಗುತ್ತದೆ.
ಮೊಬೈಲ್ ಎಷ್ಟು ಅಪಾಯಕಾರಿ ಸ್ಥಿತಿಗೆ ಮಕ್ಕಳನ್ನು ದೂಡುತ್ತದೆ ಎಂದರೆ, ಕಣ್ಣು ಮಾತ್ರವಲ್ಲ ಮನಸ್ಸುಗಳನ್ನೂ…
ಶರಧಿ.ಡಿ.ಎಸ್, 3 ನೇ ತರಗತಿ, ಶ್ರೀ ಭಾರತೀ ವಿದ್ಯಾ ಪೀಠ, ಮುಜುಂಗಾವು ಎಡನಾಡು,…
ಕೃತಿಕಾ, 9 ನೇ ತರಗತಿ, ಸೈಂಟ್ ಆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಡಬ…
ಧರ್ಮಸ್ಥಳ ಮತ್ತು ಕುಂದಾಪುರ ಪ್ರಾದೇಶಿಕ ಅರಣ್ಯ ವಿಭಾಗ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ…
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಸ್ಥಾನ, ರಾಶಿಗಳ ಸಂಯೋಜನೆ, ಮತ್ತು ಜನ್ಮಕುಂಡಲಿಯ ಭಾವಗಳು…
ಅಸಹಜ ಚಲನೆಯ ಕಾರಣದಿಂದ ಕರಾವಳಿ ಭಾಗಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ.