ಪುತ್ತೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಡಲ ತಾಲೂಕಿನ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನ.11ರಿಂದ 14ರ ತನಕ ನಡೆದ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ 14ರ ವಯೋಮಾನದ ಬಾಲಕಿಯರ ವಿಭಾಗದ 4×100ಮೀ ರಿಲೇನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿಯರಾದ ಪೂರ್ಣಲಕ್ಷ್ಮೀ(ಸಂಪ್ಯ ಬೈಲಾಡಿ ನಿವಾಸಿ ರವಿ ಮತ್ತು ಶೀಲಾವತಿ ದಂಪತಿಗಳ ಪುತ್ರಿ), ನಿಶಾ ಬಿ.ಎಮ್(ಸಂಪ್ಯ ಬೈಲಾಡಿ ನಿವಾಸಿ ಮಂಜಪ್ಪಗೌಡ ಮತ್ತುರೂಪ ದಂಪತಿಗಳ ಪುತ್ರಿ), ಯಶಸ್ವಿನಿ (ಸಂಪ್ಯ ಬೈಲಾಡಿ ನಿವಾಸಿ ಶೀನಪ್ಪ ಗೌಡ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ), ಮನ್ವಿತಾ (ಇಡ್ಕಿದು ನಿವಾಸಿ ದೇವಪ್ಪಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ) ಇವರ ತಂಡ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆಆಯ್ಕೆಯಾಗಿದೆ.
ವಿದ್ಯಾಭಾರತಿ ಕರ್ನಾಟಕ ವತಿಯಿಂದ ನಡೆದ ಅಖಿಲಾ ಭಾರತೀಯ ಮಟ್ಟದ ಕ್ರೀಡಾಕೂಟದಲ್ಲಿ ಮಹಮ್ಮದ್ ಆದಿಲ್( ಕಬಕ ನಿವಾಸಿ ಮಹಮ್ಮದ್‍ಆರೀಫ್ ಮತ್ತುಖುಶಾನ್ವಿ ದಂಪತಿಗಳ ಪುತ್ರ) ಹರ್ಡಲ್ಸ್, ಉದ್ಧಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಇವರು ಡಿಸೆಂಬರ್ 4ರಿಂದ 8ರವರೆಗೆ ಪಂಜಾಬ್‍ನ ಸಂಗರೂರಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ಅಥ್ಲೆಟಿಕ್ ತರಬೇತುದಾರರಾದ ಶ್ರೀ ಪ್ರೇಮನಾಥ್ ಶೆಟ್ಟಿ ಎಡಪದವು, ಕಾವು ಇವರ ಮಾರ್ಗದರ್ಶನದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ದಾಮೋದರ ಮತ್ತು ಶ್ರೀಮತಿ ಹರಿಣಾಕ್ಷಿ ಬಲ್ನಾಡು ತರಬೇತಿ ನೀಡುತ್ತಿದ್ದಾರೆ.