ಪುತ್ತೂರು: ವಿದ್ಯಾರ್ಥಿಗಳಾಗಿದ್ದಾಗ ಸ್ನೇಹಿತರ ಸಂಘ ಹೆಚ್ಚಾಗಿರುತ್ತದೆ. ಅದರಂತೆ ಶಿಕ್ಷಕರೊಂದಿಗಿನ ಸಂಬಂಧ ದಿನ ಕಳೆದಂತೆ ದೂರವಾಗುತ್ತದೆ. ಇಂತಹ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಏರ್ಪಡಿಸಿದ ಸ್ನೇಹ ಸಮ್ಮಿಲನದಂತಹ ಕಾರ್ಯಕ್ರಮಗಳು ಬಾಲ್ಯದ ನೆನಪಿನ ಬುತ್ತಿಯನ್ನು ತೆರೆದಿಡುತ್ತದೆ. ಆ ಮೂಲಕ ಸ್ನೇಹಿತರನ್ನು, ಶಿಕ್ಷಕರನ್ನು ಪುನಃ ಭೇಟಿ ಮಾಡುವ ಭಾಗ್ಯ ದೊರಕುವಂತೆ ಮಾಡಿದೆ ಎಂದು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಶ್ರೀಧರ್ ಭಟ್ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನ 2007 ಸಾಲಿನ ಹಿರಿಯ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಮಾಧವ ಭಟ್ ಮಾತನಾಡಿ, ಮನಸ್ಸಿನಲ್ಲಿ ಹಚ್ಚ ಹಸಿರಾಗಿರುವ ಅನೇಕ ನೆನಪಿನ ಕಥೆಗಳಲ್ಲಿ ಕಾಲೇಜು ಜೀವನವೂ ಒಂದು. ಇಂದು ವೃತ್ತಿ ನಿರ್ವಹಿಸುತ್ತಿರುವ ಅನೇಕ ಮಂದಿ ತಮ್ಮ ಸ್ನೇಹಿತರನ್ನು ಮತ್ತು ಶಿಕ್ಷಕರನ್ನು ಒಂದೆಡೆ ಸೇರಿ ಹಿಂದಿನ ಕಾಲೇಜಿನ ಕಥೆಯನ್ನು ನೆನಪಿಸಿಕೊಳ್ಳು ವೇದಿಕೆ ನಮ್ಮ ಈ ಸಮ್ಮಿಲನ ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಜೀವನದಾಸ್, ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ವೇದವ್ಯಾಸ, ಐಕ್ಯುಎಸಿ ಸಂಯೋಜಕ ಡಾ. ಶ್ರೀಧರ್ ಹೆಚ್.ಜಿ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹಿರಿಯ ವಿದ್ಯಾರ್ಥಿಗಳು ತಾವು ವಿದ್ಯಾರ್ಥಿಗಳಾಗಿದ್ದಾಗಿನ ಕಾಲೇಜಿನ ನೆನಪು ಹಾಗೂ ಅನುಭವವನ್ನು ಹಂಚಿಕೊಂಡರು.
ಕಾರ್ಯಕ್ರಮದ ಸಂಯೋಜಕ, ಹಿರಿಯ ವಿದ್ಯಾರ್ಥಿ ವಿಕ್ರಮ್ ಸ್ವಾಗತಿಸಿದರು. ಲಕ್ಷ್ಮೀ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.