ವಿವೇಕಾನಂದ ಕಾಲೇಜು: 50ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಬದುಕನ್ನು ಧೈರ್ಯಗೆಡದೆ ಅನುಭವಿಸಬೇಕು: ಪ್ರೊ. ಆರ್. ವೇದವ್ಯಾಸ

September 27, 2019
4:07 PM

ಪುತ್ತೂರು: ಜೀವನ ಎಣಿಸಿದಂತಲ್ಲ, ಏರು-ಪೇರು, ಕಷ್ಟ-ಸುಖ ಇದ್ದೇ ಇರುತ್ತದೆ. ದೊರಕಿರುವ ಬದುಕನ್ನು ಧೈರ್ಯಗೆಡದೆ ಅನುಭವಿಸಬೇಕು ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಆರ್. ವೇದವ್ಯಾಸ ಹೇಳಿದರು.

ಅವರು ವಿವೇಕಾನಂದ ಕಾಲೇಜಿನ ಐಕ್ಯುಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ನಡೆದ 50ನೇ ವರ್ಷದ ರಾಷ್ಟ್ರೀಯ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಬುಧವಾರ ಮಾತನಾಡಿದರು.

ಸಮಾಜದಲ್ಲಿ ಆರ್ಥಿಕ, ನೈತಿಕ, ಸಾಮಾಜಿಕ ಧ್ವಂದ್ವಗಳಿರುತ್ತದೆ. ಎನ್‍ಎಸ್‍ಎಸ್ ತನ್ನೊಳಗಿರುವ ಮೌಲ್ಯ, ನೈತಿಕತೆಯನ್ನು ತಿಳಿಸುವುದರ ಮೂಲಕ ಯಾವುದೇ ಸಮಯದಲ್ಲಿ ಪರೋಪಕಾರವನ್ನು ಗ್ರಹಿಸಿಕೊಳ್ಳುತ್ತದೆ. ಅದಲ್ಲದೇ ಉತ್ತಮ ರೀತಿಯಿಂದ ಉನ್ನತ ಮಟ್ಟಕ್ಕೆ ತಲುಪಲು ಎನ್‍ಎಸ್‍ಎಸ್ ಸಹಕಾರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಒಂದು ಕಾರ್ಯವನ್ನು ಸತತ ಪ್ರಯತ್ನಗಳಿಂದ ಸದೃಢವಾಗಿ ಯಶಸ್ವಿಗೊಳಿಸಬಹುದು. ನಾವು ಹಣ ಗಳಿಸಿದರೆ ಮಾತ್ರ ದೊಡ್ಡ ವ್ಯಕ್ತಿಗಳಲ್ಲ. ಒಂದು ಸಣ್ಣ ಸಹಕಾರ, ಕರುಣೆ, ಪ್ರೀತಿ ತೋರಿಸದರೆ ಅದು ವ್ಯಕ್ತಿಯ ಪಡೆದುಕೊಳ್ಳುವ ಉತ್ತಮ ಮೌಲ್ಯ. ಪರರಿಗೆ ಸಹಾಯ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಆ ಉಪಕಾರವು ದೊಡ್ಡ ರೀತಿಯದ್ದಾಗಿರಬೇಕಾಗಿಲ್ಲ. ಆದರೆ ಅದು ಮನಸ್ಸಿನಿಂದ ಬಂದಿರಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಎನ್‍ಎಸ್‍ಎಸ್ ಸಂಯೋಜಕಿ ವಿದ್ಯಾ ಕೆ.ಎಸ್. ಉಪಸ್ಥಿತರಿದ್ದರು. ಸ್ವಯಂ ಸೇವಕಿ ಚೈತ್ರಾ, ಹರ್ಷಿತಾ, ವಿಶಾಖ ಭಾವೈಕ್ಯ ಗೀತೆ ಹಾಡಿದರು. ರಾಷ್ಟ್ರೀಯ ಸೇವಾ ಯೋಜನಾ ಸಂಯೋಜಕ ಶ್ರೀನಾಥ್ ಸ್ವಾಗತಿಸಿದರು. ಸಂಘದ ನಾಯಕ ಆಕಾಶ್ ಎನ್. ಶೆಟ್ಟಿ ವಂದಿಸಿ, ಚರಣ್ ಕಾರ್ಯಕ್ರಮ ನಿರೂಪಿಸಿದರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಭಯದಲ್ಲಿ ಕೇರಳದ ರಬ್ಬರ್ ರೈತರು – ತೋಟಗಾರಿಕೆಗೆ ಮುಂದೆ ಏನು?
September 30, 2026
7:21 AM
by: ದ ರೂರಲ್ ಮಿರರ್.ಕಾಂ
ಫ್ಲೈಓವರ್ ಬಳಿಕ ಕಲ್ಲಡ್ಕದಲ್ಲಿ ಏನು ಬದಲಾವಣೆಯಾಗಿದೆ..?
September 29, 2026
11:09 PM
by: ದ ರೂರಲ್ ಮಿರರ್.ಕಾಂ
ಹಲಸಿನಂತೆಯೇ ಕಾಣುವ ಈ ಹಣ್ಣು ನಿಮಗೆ ಗೊತ್ತೇ?
September 29, 2026
10:23 PM
by: ದ ರೂರಲ್ ಮಿರರ್.ಕಾಂ
ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಹಿಳೆಯರ ಓಟಕ್ಕೆ ಚಿನ್ನದ ಹೊಳಪು – 4×400 ಮೀ. ರಿಲೇಯಲ್ಲಿ ಭರ್ಜರಿ ಗೆಲುವು
September 29, 2026
9:48 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror