ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ, ಜೇಸಿರೆಟ್ ವಿಭಾಗ ಮತ್ತು ಯುವ ಜೇಸಿ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ‘ಚೈತನ್ಯ’ ರಾಷ್ಟ್ರೀಯ ಯುವ ದಿನಾಚರಣೆ ಮತ್ತು ಉಪನ್ಯಾಸ ಸುಳ್ಯ ಕೊಡಿಯಾಲಬೈಲು ಮಹಾತ್ಮ ಗಾಂಧಿ ಮಲ್ನಾಡು ಪ್ರೌಢಶಾಲೆಯಲ್ಲಿ ನಡೆಯಿತು. ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಹಾಗೂ ಶಾಲಾಭಿವೃದ್ಧಿ ಸಮಿತಿಯ ಸಂಚಾಲಕ ಪಿ.ಎಸ್. ಗಂಗಾಧರ ಉದ್ಘಾಟಿಸಿದರು.
ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಬಗ್ಗೆ ಡಿವೈನ್ ಪಾರ್ಕ್‍ನ ಸಮನ್ವಯಾಧಿಕಾರಿ ಯಶವಂತ ಡಿ.ಎಸ್ ಉಪನ್ಯಾಸ ನೀಡಿದರು. ಶಾಲಾ ಮುಖ್ಯ ಶಿಕ್ಷಕ ಚಿದಾನಂದ ಕೆ. ಉಪಸ್ಥಿತರಿದ್ದರು. ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಬಗ್ಗೆ ಶಾಲಾ ವಿದ್ಯಾರ್ಥಿಗಳಿಗಾಗಿ ಜೇಸಿ ವತಿಯಿಂದ ಪ್ರಬಂಧ, ರಸಪ್ರಶ್ನೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಯಿತು. ಪಯಸ್ವಿನಿ ಜೇಸಿಐ ಅಧ್ಯಕ್ಷ ದೇವರಾಜ್ ಕುದ್ಪಾಜೆ ಅಧ್ಯಕ್ಷತೆ ವಹಿಸಿದ್ದರು. ಜೇಸಿರೆಟ್ ಅಧ್ಯಕ್ಷೆ ಚೈತನ್ಯ ದೇವರಾಜ್ ಜೇಸಿವಾಣಿ ವಾಚಿಸಿದರು.
ಕಾರ್ಯಕ್ರಮ ಸಂಯೋಜಕ ಯೋಗೀಶ ಚೂಂತಾರು, ಕಾರ್ಯದರ್ಶಿ ಚೇತನ್ ಅಮೆಮನೆ, ಸುರೇಶ್ ಕಾಮತ್ ಸಹಕರಿಸಿದರು.