ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಸೂರ್ಯಗ್ರಹಣದ ಮಾಹಿತಿ ಕಾರ್ಯಕ್ರಮ

December 14, 2019
9:05 AM

ಪುತ್ತೂರು: ಡಿ. 26 ರಂದು ನಡೆಯುವ ಸೂರ್ಯಗ್ರಹಣದ ಮಾಹಿತಿ ಕಾರ್ಯಕ್ರಮವು ವಿವೇಕಾನಂದ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

Advertisement

ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಉಡುಪಿಯ ಪೂರ್ಣಪ್ರಜ್ಞಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ| ಎ. ಪಿ. ಭಟ್, ಗ್ರಹಣವು ಒಂದು ಬಾಹ್ಯಕಾಶದ ವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಖಗೋಳಶಾಸ್ತ್ರೀಯ ಘಟನೆ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ , ಒಂದು ಬಗೆಯ ಸಂಯೋಗದ ರಚನೆಯಾಗುತ್ತದೆ. ಗ್ರಹಣ ಪದವನ್ನು ಹಲವು ವೇಳೆ ಸೂರ್ಯಗ್ರಹಣ ಅಥವಾ ಚಂದ್ರಗ್ರಹಣ ಎಂದು ವಿವರಿಸಲು ಬಳಸಲಾಗುತ್ತದೆ. ಇಂತಹ ಪ್ರಾಕೃತಿಕ ವಿದ್ಯಾಮಾನಗಳ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಯು ಕಲಿತುಕೊಳ್ಳಬೇಕು ಎಂದರು.

ಜೀವನಚಕ್ರದಲ್ಲಿ ಸಂಶೋಧನೆಯ ಕ್ಷಣಗಳು ಬಹಳ ಮುಖ್ಯ ಅದು ಮುಗಿಯದ ಕಲಿಕೆ. ಯುವಜನಾಂಗ ಸಂಶೋಧನೆಯಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳಬೇಕು. ಅನುಮಾನಗಳನ್ನು ಸ್ವ ಪ್ರಯೋಗಗಳ ಮೂಲಕ ಪರಿಹರಿಸಿಕೊಳ್ಳುವ ಪ್ರವೃತ್ತಿ ಯುವಜನಾಂಗದಲ್ಲಿ ಬೆಳೆಯಬೇಕು. ವಿಜ್ಞಾನ ಎಂಬುದು ಸಾಗರವಿದ್ದಂತೆ. ಓದಿದಷ್ಟು ಮುಗಿಯದ ಪುಸ್ತಕವಿದ್ದಂತೆ. ನಮ್ಮ ಜ್ಞಾನವನ್ನು ವಿಜ್ಞಾನವೆಂಬ ಮಹಾನ್ ಸಾಗರಕ್ಕೆ ವಿಸ್ತರಿಸಬೇಕು. ಹೊಸತನ್ನು ಅನ್ವೇಷಿಸುವುದು ನಮ್ಮ ಹವ್ಯಾಸವಾಗಬೇಕು ಎಂದರು. ಬಳಿಕ ಗ್ರಹಣ ನಡೆಯುವ ಬಗೆ ಮತ್ತು ಮುನ್ನೆಚ್ಚರಿಸಬೇಕಾದ ಕ್ರಮಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು.

ಉಪನ್ಯಾಸಕಿ ದಯಾಮಣಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಭಾಗವಹಿಸಿದ್ದರು.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 15-08-2025 | ಸದ್ಯ ಸಾಮಾನ್ಯ ಮಳೆ, ಆ.20 ರ ನಂತರ ಮಳೆ ಕಡಿಮೆ
August 15, 2025
2:23 PM
by: ಸಾಯಿಶೇಖರ್ ಕರಿಕಳ
ಶೀಘ್ರದಲ್ಲೇ ಜಿಲ್ಲಾ, ತಾಲೂಕು ಪಂಚಾಯತಿಗಳಿಗೆ ಚುನಾವಣೆ
August 15, 2025
6:54 AM
by: The Rural Mirror ಸುದ್ದಿಜಾಲ
ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ | ರಾಸಾಯನಿಕ ಬಳಸದೆ ಸಹಜ ಕೃಷಿ
August 15, 2025
6:43 AM
by: The Rural Mirror ಸುದ್ದಿಜಾಲ
ಆತ್ಮನಿರ್ಭರ ಯೋಜನೆಯಡಿಯಲ್ಲಿ ಉತ್ತಮ ಕಾರ್ಯ | ದೇಶದ ಗಮನ ಸೆಳೆದಿರುವ ಉಜಿರೆ ಗ್ರಾಮ | ದೆಹಲಿಯ ಸ್ವಾತಂತ್ರೋತ್ಸವ ಕಾರ್ಯಕ್ರಮ ಉಜಿರೆ ಪಂಚಾಯತ್‌ ಆಡಳಿತ |
August 15, 2025
6:34 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group