ಪುತ್ತೂರು: ಊಟದ ವಿರಾಮ ವೇಳೆ ಕಾಲೇಜು ವಿದ್ಯಾರ್ಥಿಗಳು ಕ್ಯಾಂಪಸ್ ನಿಂದ ಹೊರಹೋಗಬಾರದು ಎಂಬ ಕಾಲೇಜು ಆಡಳಿತದ ನಿಯಮ ಖಂಡಿಸಿ ಪುತ್ತೂರು ವಿವೇಕಾನಂದ ಕಾಲೇಜು ವಿದ್ಯಾರ್ಥಿಗಳು ಕಾಲೇಜು ಗೇಟು ಬಳಿ ಪ್ರತಿಭಟನೆ ನಡೆಸಿದ್ದರು, ಈ ಕಾರಣದಿಂದ ಎಲ್ಲಾ ವಿದ್ಯಾರ್ಥಿಗಳು ಸಸ್ಪೆಂಡ್..!. ಹೀಗಾಗಿ ಈಗ ವಿದ್ಯಾರ್ಥಿಗಳ ವ್ಯಾಟ್ಸಪ್ ಸ್ಟೇಟಸ್ ಈಗ ಪರ ಹಾಗೂ ವಿರೋಧದ ಮೂಲಕ ಮತ್ತೆ ಚರ್ಚೆಗೆ ಕಾರಣವಾಗಿದೆ.
ಇತ್ತೀಚೆಗೆ ಕಾಲೇಜಿನ ಹೊರಗೆ ನಡೆದ ಘಟನೆ ಹಾಗೂ ಆ ಬಳಿಕ ವಿದ್ಯಮಾನದಿಂದ ಎಚ್ಚೆತ್ತ ಆಡಳಿತವು ವಿದ್ಯಾರ್ಥಿಗಳು ಕಾಲೇಜು ಶುರುವಾದ ಬಳಿಕ ಕ್ಯಾಂಪಸ್‌ನಿಂದ ಹೊರಗಡೆ ಹೋಗದಂತೆ ಕಾಲೇಜಿನ ಪ್ರಧಾನ ಗೇಟ್‌ಗೆ ಬೀಗ ಹಾಕಿ ಕಟ್ಟು ನಿಟ್ಟಿನ ಕ್ರಮ ಜಾರಿಗೊಳಿಸಿತ್ತು. ಹೀಗಾಗಿ ಸಂಜೆಯವರೆಗೂ ವಿದ್ಯಾರ್ಥಿಗಳು ಕಾಲೇಜಿನಲ್ಲಿಯೇ ಇರಬೇಕಾಗಿತ್ತು. ಈ ನಿಯಮದಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಗೇಟ್‌ನ ಬಳಿ ಪ್ರತಿಭಟನೆ ನಡೆಸಿದರು. ಈ ನಿರ್ಧಾರ ಏಕಪಕ್ಷೀಯ ಹಾಗೂ ವಿದ್ಯಾರ್ಥಿಗಳೆಲ್ಲರನ್ನೂ ಸಂಶಯದಿಂದ ಕಾಣುವುದು ಸರಿಯಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನಿನ್ನೆ ನಡೆದ ಪ್ರತಿಭಟನೆಯ ವಿಡಿಯೋ ಸಹಿತ ಸ್ಟೇಟಸ್ ಹಾಕಿದ್ದಾರೆ. ನಾವೂ ಸಸ್ಪೆಂಡ್ ಆಗಿದ್ದೇವೆ ಎಂದು ಕೆಲವರು ಹಾಕಿದ್ದರೆ ಇನ್ನೂ ಕೆಲವರು ಇಂತಹ ಪ್ರತಿಭಟನೆ ಸರಿಯಲ್ಲ ಎಂದು ಸ್ಟೇಟಸ್ ಹಾಕಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…