ಪುತ್ತೂರು: ಶಿಕ್ಷಣ ಸಂಸ್ಥೆಗಳು ಸಾಮಾಜಿಕ ಬದಲಾವಣೆಯ ಕೇಂದ್ರಗಳಾಗಬೇಕು. ಶ್ರೇಷ್ಠ ಗುರಿಯನ್ನು ಸಾಧಿಸುವುದಕ್ಕೆ ಶಿಕ್ಷಣ ಒಂದು ಮಾಧ್ಯಮ. ಆದರೆ ಶಿಕ್ಷಣ ಸಂಸ್ಥೆಗಳ ಆಡಳಿತ ಚುಕ್ಕಾಣಿ ಹಿಡಿದವರು ಸಂಸ್ಥೆಯ ಬಗೆಗೆ ಅಪಾರವಾದ ಕಾಳಜಿ, ಪ್ರೀತಿ ತೋರಿದಾಗ ಮಾತ್ರ ಸಂಸ್ಥೆ ಒಳ್ಳೆಯ ರೀತಿಯಲ್ಲಿ ಬೆಳವಣಿಗೆ ಕಾಣುವುದಕ್ಕೆ ಸಾಧ್ಯ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ವಿವಿಧ ವಿವೇಕಾನಂದ ಸಂಸ್ಥೆಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗಾಗಿ ಆಯೋಜಿಸಿದ ಒಂದು ದಿನದ ಚಿಂತನ ಬೈಠಕ್‍ನಲ್ಲಿ ಭಾಗವಹಿಸಿ ಮಂಗಳವಾರ ಮಾತನಾಡಿದರು. ಇಂದು ಪ್ರಪಂಚದಾದ್ಯಂತ ಬದಲಾವಣೆಗಳು ಸಾಧ್ಯವಾಗುತ್ತಿವೆ. ಅಂತಹ ಅನೇಕ ಬದಲಾವಣೆಗಳಿಗೆ ಭಾರತವೇ ಕಾರಣವಾಗುತ್ತಿರುವುದು ಮತ್ತು ನಮ್ಮ ದೇಶ ವಿಶ್ವಗುರು ಸ್ಥಾನಕ್ಕೇರುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಇಂತಹ ಸಂದರ್ಭದಲ್ಲಿ ನಾವೂ ಈ ದೇಶದೊಂದಿಗೆ ಹೆಜ್ಜೆ ಹಾಕಬೇಕು. ಮೆಕಾಲೆ ಶಿಕ್ಷಣದಿಂದ ಮಹರ್ಷಿ ಶಿಕ್ಷಣದೆಡೆಗೆ ನಮ್ಮ ಮಕ್ಕಳನ್ನು ಒಯ್ದಾಗ ಈ ದೇಶದ ಅಸ್ಮಿತೆ ಉಳಿದುಕೊಳ್ಳಲು ಸಾಧ್ಯ ಎಂದರು.
ಉಪಸ್ಥಿತರಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಅನೇಕರು ನಡೆಸಿಕೊಂಡು ಬಂದಿದ್ದಾರೆ. ಆಯಾ ಕಾಲಘಟ್ಟದಲ್ಲಿ ಸಂಸ್ಥೆಯ ಜವಾಬ್ಧಾರಿ ಹೊತ್ತವರು ಆಯಾ ಕಾಲದ ಸವಾಲುಗಳನ್ನೆದುರಿಸಿ ಮುಂದುವರಿಯುವುದಕ್ಕೆ ಪ್ರಯತ್ನ ಪಡಬೇಕು. ಸಮಾಜದ ಅನೇಕರು ವಿವೇಕಾನಂದ ಸಂಸ್ಥೆಗಳಿಗಾಗಿ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುವ ಎಲ್ಲಾ ವಿದ್ಯಾ ಸಂಸ್ಥೆಗಳ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಂಸ್ಥೆಗಳ ಬಗೆಗೆ ವೀಡಿಯೋ ಹಾಗೂ ಪಿಪಿಟಿ ಪ್ರದರ್ಶನ ನಡೆಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷ ಅಚ್ಯುತ ನಾಯಕ್ ಅವರು ವೈಯಕ್ತಿಕ ಗೀತೆ ಹಾಗೂ ಪ್ರೇರಣಾ ಗೀತೆಯನ್ನು ಪ್ರಸ್ತುತಪಡಿಸಿದರು.
ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…
ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಕದನ ವಿರಾಮ ಘೋಷಣೆ ಬಳಿಕ ಪಾಕಿಸ್ತಾನ ಗಡಿಗೆ ಹೊಂದಿಕೊಂಡಿರುವ ರಾಜ್ಯಗಳ ಪರಿಸ್ಧಿತಿ ಸಾಮಾನ್ಯ…
ಕೃಷಿಯಷ್ಟೇ ಅಲ್ಲ ಕೃಷಿ ವಸ್ತುಗಳ ಮಾರುಕಟ್ಟೆ ಹಾಗೂ ಕೃಷಿ ಬೆಳವಣಿಗೆಯ ಬಗ್ಗೆ ಪುತ್ತೂರಿನ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಾಭಕ್ತರದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490