ವಿವೇಕಾನಂದ ವಿದ್ಯಾವರ್ಧಕ ಸಂಘದ ಯಶಸ್‍ನಿಂದ ರಾಜ್ಯಮಟ್ಟದ ಕಾರ್ಯಾಗಾರ

September 30, 2019
4:30 PM

ಪುತ್ತೂರು: ಕಳೆದ ಎಪ್ಪತ್ತು ವರ್ಷಗಳಲ್ಲಿ ಬಡತನದ ರೇಖೆಗಿಂತ ಕೆಳಗುಳಿದ ಸುಮಾರು 60 ಶೇಕಡಾದಷ್ಟು ಜನರನ್ನು ಮೇಲೆತ್ತಲು ಆಗಿರಲಿಲ್ಲ. ಹೀಗಿದ್ದಾಗ ಹೇಗೆ ತಾನೇ ದೇಶಕ್ಕೆ ಗೌರವ ದೊರಕುವುದಕ್ಕೆ ಸಾಧ್ಯ? ಆದರೆ ಇಂದು ದೇಶ ಅಭಿವೃದ್ಧಿ ಸಾಧಿಸುತ್ತಿದೆ. ಹಾಗಾಗಿಯೇ ದೇಶಕ್ಕೆ ಎಲ್ಲೆಡೆ, ವಿದೇಶದಲ್ಲೂ ಗೌರವ ಸಿಗುತ್ತಿದೆ. ಸರಕಾರ ಮತ್ತು ಆಡಳಿತ ವರ್ಗ ಸರಿಯಾಗಿ ಕಾರ್ಯನಿರ್ವಹಿಸಿದಾಗ ಸಾಧನೆ ಸಾಧ್ಯವಾಗುತ್ತದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಹಾಗೂ ಕಲ್ಲದ್ದಲು ಮತ್ತು ಗಣಿಗಾರಿಕೆ ಖಾತೆ ಸಚಿವ ಪ್ರಹ್ಲಾದ್ ಜೋಷಿ ಹೇಳಿದರು.

Advertisement

ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಶಸ್ ಅಧ್ಯಯನ ಕೇಂದ್ರದಿಂದ ಆಯೋಜಿಸಲಾದ ಐಎಎಸ್, ಕೆಎಎಸ್ ತರಬೇತಿ ಅಕಾಡೆಮಿ ಹಾಗೂ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ದೃಷ್ಟಿ ಕಾರ್ಯಾಗಾರವನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು. ಸಮಾಜದ ಕಟ್ಟಕಡೆಯ ಮನುಷ್ಯನ ಕಣ್ಣೀರನ್ನು ಒರೆಸುವ ದಿನ ಬಂದಾಗ ಇಪ್ಪತ್ತೊಂದನೆಯ ಶತಮಾನ ಭಾರತದ್ದಾಗುತ್ತದೆ. ಅದಕ್ಕಾಗಿ ಆ ತೆರನಾದ ಮನೋಭೂಮಿಕೆಯುಳ್ಳವರು ವಿವಿಧ ಆಡಳಿತ ಹಂತದಲ್ಲಿರಬೇಕಾಗುತ್ತದೆ. ಸರಿಯಾದ ಜವಾಬ್ಧಾರಿಯುಳ್ಳವರು, ಪ್ರಾಮಾಣೀಕರಾದವರು ನಾಗರಿಕ ಸೇವಾ ಪರೀಕ್ಷೆಯ ಮೂಲಕ ಸೇವಾ ಕ್ಷೇತ್ರಕ್ಕೆ ಬಂದರೆ ಸದೃಢ ಭಾರತ ನಿರ್ಮಾಣವಾಗುತ್ತದೆ ಎಂದು ನುಡಿದರು.

ಆತ್ಮವಿಶ್ವಾಸದ ಆಧಾರದ ಮೇಲೆ ನಮ್ಮ ಯಶಸ್ಸು ನಿರ್ಣಯಿಸಲ್ಪಡುತ್ತದೆ. ನಮ್ಮ ಮೇಲೆ ನಮಗೆ ಎಷ್ಟು ನಂಬಿಕೆಯಿದೆ ಎನ್ನುವುದು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಪ್ರಮುಖವೆನಿಸುತ್ತದೆ. ಜತೆಗೆ ಅತ್ಯಂತ ಕಠಿಣ ಪರಿಶ್ರಮ ಸಾಧನೆಗೆ ತಳಪಾಯ ಒದಗಿಸುತ್ತದೆ. ಐಎಎಸ್ ಮಾತ್ರವಲ್ಲದೆ ಯಾವುದೇ ಸವಾಲುಗಳನ್ನೂ ಎದುರಿಸುವಲ್ಲಿ ಈ ಸಂಗತಿಗಳು ನಮಗೆ ಸಹಾಯ ಮಾಡುತ್ತವೆ ಎಂದರಲ್ಲದೆ ಮನಸ್ಸಿನ ಸಮಾಧಾನ ಹಣದಿಂದ ಸಾಧ್ಯವಾಗುವುದಿಲ್ಲ. ಕೋಟಿ ಕೋಟಿ ಗಳಿಸಿದವರೂ ಹೇಗಿದ್ದಾರೆಂಬುದನ್ನು ಕಾಣುತ್ತಿದ್ದೇವೆ. ಹಾಗಾಗಿ ಐಎಎಸ್‍ನಂತಹ ಪರೀಕ್ಷೆಯನ್ನು ತೇರ್ಗಡೆಯಾಗಿ ಸೇವಾ ಮನೋಭಾವನೆಯಿಂದ ಕೆಲಸ ಮಾಡಿದರೆ ಅದು ನಮ್ಮನ್ನು ಅತ್ಯಂತ ಹೆಚ್ಚು ತೃಪ್ತರನ್ನಾಗಿ ಮಾಡಬಲ್ಲುದು ಎಂದು ನುಡಿದರು

ಮತ್ತೋರ್ವ ಅತಿಥಿ ಮಂಗಳೂರು ನಗರ ಪೋಲಿಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಮಾತನಾಡಿ ಯುವಜನರಿಗೆ ಇಂದು ಸಾಕಷ್ಟು ಅವಕಾಶಗಳಿವೆ. ಹಾಗಾಗಿ ಯಾಕೆ ನಾಗರಿಕ ಸೇವೆಯನ್ನೇ ಆಯ್ಕೆ ಮಾಡಬೇಕೆಂಬ ಪ್ರಶ್ನೆ ಬರುವುದು ಸಹಜ. ಆದರೆ ಐಎಎಸ್, ಐಪಿಎಸ್, ಕೆಎಎಸ್ ನಂತಹ ಪರೀಕ್ಷೆಗಳನ್ನು ತೇರ್ಗಡೆ ಮಾಡುವುದರಿಂದ ಉಳಿದೆಲ್ಲಾ ರಂಗದಲ್ಲಿ ದೊರಕಬಹುದಾದ ಅಷ್ಟೂ ಅವಕಾಶಗಳು ಒಂದೇ ಕಡೆ ದೊರೆಯುವುದಕ್ಕೆ ಸಾಧ್ಯ. ಸಮಾಜಸೇವೆಯ ಮೂಲಕ ಬದುಕನ್ನು ಸಾರ್ಥಕಗೊಳಿಸುವುದಕ್ಕೆ ಇಲ್ಲಿ ಸಾಧ್ಯ ಎಂದು ನುಡಿದರು.
ಪ್ರತಿಯೊಬ್ಬನಿಗೂ ನಾಗರಿಕ ಸೇವಾ ಪರೀಕ್ಷೆಗಳನ್ನು ಪಾಸ್ ಆಗುವುದಕ್ಕೆ ಸಾಧ್ಯವಿದೆ. ನಾನು ಗ್ರಾಮೀಣ ಭಾಗದವನು, ಇಂಗ್ಲಿಷ್ ಬರುವುದಿಲ್ಲ, ಆರ್ಥಿಕವಾಗಿ ಬಲಿಷ್ಟವಾಗಿಲ್ಲ ಎಂಬೆಲ್ಲಾ ಸಂಗತಿಗಳು ಪ್ರತಿಭೆಯ ಮುಂದೆ ಗೌಣವಾಗುತ್ತವೆ. ಹಾಗಾಗಿ ದೃಢ ನಿರ್ಧಾರವೊಂದೇ ನಮ್ಮನ್ನು ಇಲ್ಲಿ ಗೆಲ್ಲುವಂತೆ ಮಾಡುತ್ತದೆ ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ ಅದಾಗಲೇ ಬೇಕಾದಷ್ಟು ಐಎಎಸ್ ಕೋಚಿಂಗ್ ಸೆಂಟರ್ ಗಳಿವೆ. ಆದರೆ ಯಶಸ್ ಘಟಕ ಮತ್ತೊಂದು ಕೋಚಿಂಗ್ ಸೆಂಟರ್ ಅಲ್ಲ, ಬದಲಾಗಿ ರಾಷ್ಟ್ರೀಯ ದೃಷ್ಟಿಕೋನವನ್ನು ತುಂಬುವ ಮತ್ತು ತನ್ಮೂಲಕ ದೇಶದ ಕುರಿತಾಗಿ ಚಿಂತಿಸುವ ಅಧಿಕಾರಿ ವರ್ಗದ ಸೃಷ್ಟಿಯ ಹಿನ್ನೆಲೆಯಲ್ಲಿ ಇದು ಆರಂಭಗೊಂಡಿದೆ. ದೇಶದ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಮುಂದುವರೆಸುವ ಕಾರ್ಯವನ್ನು ಮಾಡುವ ಅಧಿಕಾರಿಗಳು ನಮಗೆ ಬೇಕಾಗಿದೆ ಎಂದರು.

Advertisement

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್,ಯಶಸ್ ಅಧ್ಯಯನ ಕೇಂದ್ರದ ಸಂಯೋಜಕ ಗೋವಿಂದರಾಜ ಶರ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅನಘ, ಆಸ್ವಿನಿ ಹಾಗೂ ಸಾಯಿಕೃಷ ಪ್ರಾರ್ಥಿಸಿದರು. ಯಶಸ್ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಮುರಳಿಕೃಷ್ಣ ಕೆ.ಎನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೇಂದ್ರದ ಅಧ್ಯಕ್ಷ ಕೃಷ್ಣನಾರಾಯಣ ಮುಳಿಯ ವಂದಿಸಿದರು. ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ.ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳಿಂದ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 11-07-2025 | ಮುಂದಿನ 10 ದಿನಗಳವರೆಗೂ ಕರಾವಳಿ-ಮಲೆನಾಡು ಭಾಗದಲ್ಲಿ ಸಾಮಾನ್ಯ ಮಳೆ | ಜುಲೈ 16ರಿಂದ ಎಲ್ಲೆಲ್ಲಾ ಮಳೆ ಹೆಚ್ಚಾಗಬಹುದು ?
July 11, 2025
4:50 PM
by: ಸಾಯಿಶೇಖರ್ ಕರಿಕಳ
ಕೇತುವಿನ ಕಾಟ: ಈ ರಾಶಿಗಳಿಗೆ ಆರೋಗ್ಯದಲ್ಲಿ ಎಚ್ಚರಿಕೆ ಬೇಕು..!
July 11, 2025
7:33 AM
by: ದ ರೂರಲ್ ಮಿರರ್.ಕಾಂ
ಕೋಲಾರದಲ್ಲಿ ಸಾರ್ವಜನಿಕರು ಎಲ್ಲೆಂದರಲ್ಲಿ ಕಸ ಎಸೆದರೆ ಕ್ರಿಮಿನಲ್‌ ಕೇಸು – ಎಚ್ಚರಿಕೆ
July 11, 2025
7:22 AM
by: The Rural Mirror ಸುದ್ದಿಜಾಲ
ಹಾವೇರಿ ಜಿಲ್ಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ವರದಾ, ತುಂಗಭದ್ರಾ ನದಿ
July 11, 2025
7:14 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group