ವಿಶಿಷ್ಟ ಗುರುತಿನ ಚೀಟಿ ಪಡೆದುಕೊಳ್ಳಲು ವಿಶೇಷ ವಿಕಲಚೇತನರಲ್ಲಿ ಮನವಿ

June 28, 2019
12:00 PM

ಮಡಿಕೇರಿ : ಭಾರತ ಸರಕಾರದಿಂದ ವಿಕಲಚೇತನರಿಗೆ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ-ಯೂನಿಕ್ ಡಿಸೆಬಿಲಿಟಿ ಐಡಿ) ಯೋಜನೆಯಂತೆ ವಿಕಲಚೇತನರಿಗೆ ಸಮಗ್ರ ಮಾಹಿತಿ ಹೊಂದಿದ ಚೀಟಿ ಒದಗುತ್ತಿದೆ.

Advertisement
Advertisement

ಇದರಲ್ಲಿ ವಿಕಲಚೇತನ ವ್ಯಕ್ತಿಯ ವಿವರಗಳು ಹಾಗೂ ಅವರಲ್ಲಿರುವ ವಿಕಲತೆಯ ವಿವರ ಮತ್ತು ಪ್ರಮಾಣ ನಮೂದಿಸಲಾಗುತ್ತದೆ. ಯೋಜನೆಯು ದೇಶದ ವಿಕಲಚೇತನರ ಅಂಕಿ ಸಂಖ್ಯೆಗಳ ಮಾಹಿತಿ ನೀಡುತ್ತದೆ. ಸರಕಾರದ ಸೌಲಭ್ಯಗಳು ಪರಿಣಾಮಕಾರಿಯಾಗಿ ವಿಕಲಚೇತನರಿಗೆ ತಲುಪುವಂತೆ ಮಾಡುವುದು ಇದರ ಉದ್ದೇಶವಾಗಿದೆ. ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮಮಟ್ಟದಲ್ಲಿ ಅಂಗವಿಕಲರು ಸೌಲಭ್ಯಗಳನ್ನು ಪಡೆಯುವಲ್ಲಿ ಪಾರದರ್ಶಕತೆ ಕಾಪಾಡುವುದು ಹಾಗೂ ಅವರ ಸಾಮಾಜಿಕ ಹಾಗೂ ಆರ್ಥಿಕ ಚಿತ್ರಣವನ್ನು ನೀಡಲು ಸಹಕಾರಿಯಾಗಲಿದೆ. ಚೀಟಿಯು ಆಧಾರ್ ಕಾರ್ಡ್‍ನಷ್ಟೇ ಪ್ರಮುಖ ದಾಖಲೆಯಾಗಿದೆ. ಈ ಯೋಜನೆಯನ್ನು ಸರ್ಕಾರ 2019ರಿಂದ ಕಡ್ಡಾಯಗೊಳಿಸಿದೆ. ಪ್ರತಿಯೊಬ್ಬ ವಿಕಲಚೇತನ ವ್ಯಕ್ತಿಯು ಯೋಜನೆಯಡಿ ನೋಂದಣಿ ಮಾಡಿಕೊಂಡು ಚೀಟಿಯನ್ನು ಪಡೆದುಕೊಳ್ಳುವಂತೆ ತಿಳಿಸಿದೆ ಎಂದು ಜಿಲ್ಲಾ ವಿಕಲಚೇತನ ಸಬಲೀಕರಣ ಅಧಿಕಾರಿ ಆರ್.ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.

Advertisement

 


ಪ್ರಯೋಜನಗಳು:

Advertisement

ವಿಕಲಚೇತನ ವ್ಯಕ್ತಿಯ ವಿಕಲತೆಗೆ ಸಂಬಂಧಿಸಿದ ಮುಖ್ಯ ದಾಖಲೆಯನ್ನು ಇದು ಹೊಂದಿರುವುದರಿಂದ ದೇಶವ್ಯಾಪ್ತಿ ಮಾನ್ಯತೆ ಇದೆ. ಈ ಕಾರ್ಡ್‍ನ್ನು ಭಾರತಾದ್ಯಂತ ವಿಕಲಚೇತನ ವ್ಯಕ್ತಿಗಳ ಅಂಗವೈಕಲ್ಯತೆಯ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ವಿಕಲಚೇತನ ವ್ಯಕ್ತಿಯ ಮಾಹಿತಿಯು ದುರ್ಬಳಕೆಯಾಗಿ ಬೇರೆ ವ್ಯಕ್ತಿ ಈ ವಿಕಲಚೇತನರಿಗಿರುವ ಸೌಲಭ್ಯವನ್ನು ಬಳಸಲು ಅವಕಾಶವಿರುವುದಿಲ್ಲ. ಅಂಗವಿಕಲ ಕಾಯ್ದೆ 2016ರ ಅನ್ವಯ ನಿರ್ದಿಷ್ಟ ಪ್ರಮಾಣದ ಅಂಗವಿಕಲ ವ್ಯಕ್ತಿಯು ಮಾತ್ರ ಗುರುತಿಸಿಕೊಂಡು ಸೌಲಭ್ಯಗಳು ಅವರಿಗೆ ಮಾತ್ರ ಮೀಸಲಿಡುವಲ್ಲಿ ಅನುವು ಮಾಡಿಕೊಡುವುದು. ಆನ್‍ಲೈನ್ ಮುಖಾಂತರ ಮಾಹಿತಿ ತುಂಬಿ ಕಾರ್ಡ್ ಪಡೆದುಕೊಳ್ಳುವುದರಿಂದ ಯಾವುದೇ ವ್ಯಕ್ತಿಯ ಮಾಹಿತಿಗಳನ್ನು ನಕಲಿ ದಾಖಲೆಗಳಾಗಿ ಪಡೆದುಕೊಳ್ಳಲು ಆಗುವುದಿಲ್ಲ. ಅರ್ಜಿಯನ್ನು ವೆಬ್‍ಸೈಟ್  www.swavlambancard.gov.in  ನಲ್ಲಿ ಪಡೆಯಬಹುದು. ಮಾಹಿತಿಯನ್ನು ತುಂಬಲು ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿ ಅಪ್‍ಲೋಡ್ ಮಾಡುವುದು.

ಬೇಕಾದ ದಾಖಲೆಗಳು:

Advertisement

ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ವಿಕಲಚೇತನ ವ್ಯಕ್ತಿಯ ಸಹಿ, ಹೆಬ್ಬೆರಳಿನ ಗುರುತು, ಹಿಂದುಳಿದ ಜಾತಿ, ವರ್ಗಕ್ಕೆ ಸೇರಿದವರಾಗಿದ್ದಲ್ಲಿ ಜಾತಿ ಪ್ರಮಾಣಪತ್ರ, ಅಂಗವಿಕಲತೆಯ ವೈದ್ಯಕೀಯ ಪ್ರಮಾಣಪತ್ರ, ಆಧಾರ್ ಕಾರ್ಡ್, ಯಾವುದಾದರೊಂದು ವಿಳಾಸದ ದಾಖಲೆ(ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ವೋಟರ್ ಐಡಿ ಇತ್ಯಾದಿ), ಈಗಾಗಲೇ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವವರು ಕೂಡ ಕಾರ್ಡ್ ಪಡೆಯಲು ನೋಂದಾಯಿಸಿಕೊಳ್ಳಬೇಕಾಗುತ್ತದೆ. ವಿಕಲಚೇತನ ವ್ಯಕ್ತಿಯ ವೈದ್ಯಕೀಯ ಗುರುತಿನ ಚೀಟಿಯನ್ನು ಇದುವರೆಗೆ ಮಾಡಿಸದಿದ್ದಲ್ಲಿ ಅಥವಾ ಹೊಸದಾಗಿ ಮಾಡಿಸುವುದಾದರೆ ಯುಡಿಐಟಿ ನಮೂನೆಯಲ್ಲಿ ವೈದ್ಯಕೀಯ ಗುರುತಿನ ಚೀಟಿ ಇಲ್ಲ ಎಂದು ನಮೂದಿಸಬೇಕು.
ಅಂತಿಮವಾಗಿ ಅಭ್ಯರ್ಥಿಗಳು ನೋಂದಣಿ ಮಾಡಿದ ನಮೂನೆಯಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬೇಕು. ಹಾಗೂ ನಮೂನೆಯಲ್ಲಿ ನೋಂದಾಯಿಸಿದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸಕ್ಕೆ ಸಂದೇಶವು ರವಾನೆಯಾಗುವುದು. ಆನ್‍ಲೈನ್ ಮುಖಾಂತರ ನಮೂನೆಯನ್ನು ತುಂಬುವುದರಿಂದ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಅಂಗವಿಕಲತೆಯ ವೈದ್ಯಕೀಯ ಪ್ರಮಾಣ ಪತ್ರ ನೀಡುವ ಸೌಲಭ್ಯವು ಪ್ರಸ್ತುತ ಲಭ್ಯವಿಲ್ಲ.

ಆನ್‍ಲೈನ್ ಮುಖಾಂತರ ಭರ್ತಿ ಮಾಡಿ ಕಳುಹಿಸಿದ ನಮೂನೆಯನ್ನು ಜಿಲ್ಲಾ ವೈದ್ಯಕೀಯ ಪ್ರಾಧಿಕಾರವು ಪರಿಶೀಲಿಸಿ ಅಗತ್ಯವಿದ್ದಲ್ಲಿ ಅಭ್ಯರ್ಥಿಯನ್ನು ಜಿಲ್ಲಾಸ್ಪತ್ರೆಗೆ ಪರಿಶೀಲನೆಗೆ ಬರಲು ತಿಳಿಸುವರು. ಅವರು ತಿಳಿಸಿದ ದಿನಾಂಕದಂದು ಅಭ್ಯರ್ಥಿಯು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕು. ಆನ್‍ಲೈನ್ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿದ ವಿಳಾಸಕ್ಕೆ ಅಂಚೆಯ ಮೂಲಕ ಕಾರ್ಡ್ ತಲುಪಿಸಲಾಗುವುದು. ಹೆಚ್ಚಿನ ಮಾಹಿತಿಗೆ 08272-222830 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್.ಸಂಪತ್ ಕುಮಾರ್ ಅವರು ತಿಳಿಸಿದ್ದಾರೆ.

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ | 17ನೇ ಕಂತಿನ ಹಣ ರೈತರ ಖಾತೆಗೆ ಯಾವಾಗ ಬರುತ್ತೆ..?
April 29, 2024
2:40 PM
by: The Rural Mirror ಸುದ್ದಿಜಾಲ
ಪ್ಯಾರೀಸ್‌ನಲ್ಲಿ ಕ್ರೀಡೆಗಳ ಮಹಾಸಂಗಮ ಒಲಿಂಪಿಕ್ಸ್‌ಗೆ ಕೆಲವೇ ದಿನ ಬಾಕಿ | ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌ | ಒಲಿಂಪಿಕ್ಸ್‌ನಲ್ಲಿರಲಿದೆ ನೂರಾರು ವಿಶೇಷ
April 24, 2024
9:02 PM
by: The Rural Mirror ಸುದ್ದಿಜಾಲ
ಪ್ಯಾಕೆಟ್ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದೆ ಅಥವಾ ಹಾನಿಕರವೇ? ಪ್ಯಾಕೆಟ್ ಹಿಟ್ಟು ಉಪಯೋಗಿಸಿದರೆ ಏನಾಗುತ್ತದೆ ತಿಳಿದುಕೊಳ್ಳಿ..
April 24, 2024
2:32 PM
by: The Rural Mirror ಸುದ್ದಿಜಾಲ
ಹಿಪ್ಪಲಿ ಗಿಡಕ್ಕೆ ಕರಿಮೆಣಸು ಕಸಿ ಎಷ್ಟು ಸೂಕ್ತ..? ಲಾಭ ಏನು..? | ಇದು ಕರಿಮೆಣಸು ಬಳ್ಳಿಗೆ ಬರುವ ರೋಗ ತಡೆಗಟ್ಟುತ್ತದೆಯೇ..?
April 23, 2024
1:41 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror