ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ ಬಿ ಎಸ್ ವೈ | ಅಟೋ ಚಾಲಕರಿಗೆ /ಕ್ಷೌರಿಕ/ಕಟ್ಟಡ ಕಾರ್ಮಿಕರಿಗೆ ನೆರವು ಯೋಜನೆ | 1610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ |

May 6, 2020
2:49 PM

ಬೆಂಗಳೂರು: ರಾಜ್ಯದಲ್ಲಿ  ಕಳೆದ ಒಂದೂವರೆ ತಿಂಗಳಿನಿಂದ ಲಾಕ್ಡೌನ್ ಇರುವುದರಿಂದ ಅನೇಕ ಜನರಿಗೆ ಸಮಸ್ಯೆಯಾಗಿದೆ.  ಕೃಷಿ ಸೇರಿದಂತೆ ಸಣ್ಣ ಉದ್ಯಮ ವಿಶೇಷವಾಗಿ ದುಡಿಮೆ ಇಲ್ಲದೆ ಕಾರ್ಮಿಕ ವಲಯ ಸಂಕಷ್ಟಕ್ಕೆ ಸಿಲುಕಿದೆ. ಈ ಎಲ್ಲಾ ವರ್ಗವನ್ನು ತಕ್ಷಣಕ್ಕೆ ಆರ್ಥಿಕವಾಗಿ ನೆರವಾಗುವ ನಿಟ್ಟಿನಲ್ಲಿ 1610 ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್‌ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಬಿಡುಗಡೆ ಮಾಡಿದ್ದಾರೆ.

Advertisement

ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ  ಮಾತನಾಡಿದ  ಸಿಎಂ ಬಿ.ಎಸ್.‌ ಯಡಿಯೂರಪ್ಪ ಸ್ಥಗಿತವಾಗಿರುವ ರಾಜ್ಯದ ಆರ್ಥಿಕತೆಗೆ ಮತ್ತೆ ಉತ್ತೇಜನ ನೀಡುವ ಮತ್ತು ಸಂಕಷ್ಟಕ್ಕೆ ಒಳಗಾಗಿರುವ ಎಲ್ಲಾ ವರ್ಗದ ಜನರಿಗೆ ಪರಿಹಾರ ನೀಡುವ ಉದ್ದೇಶದಿಂದ 1610 ಕೋಟಿ ಮೊತ್ತದ ವಿಶೇಷ ಪ್ಯಾಕೇಜ್ ಘೋಷಿಸಿದ್ದಾರೆ.

ವಿಶೇಷ ಪ್ಯಾಕೇಜ್‌ನಲ್ಲಿ ರಾಜ್ಯದಲ್ಲಿರುವ ಸುಮಾರು 2,30,000 ಜನ ಕ್ಷೌರಿಕ ವರ್ಗಕ್ಕೆ ತಲಾ 5,000 ಹಣ ಆರ್ಥಿಕ ನೆರವು, 60,000 ಅಗಸರಿಗೆ ಹಾಗೂ 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ತಲಾ 5,000 ಹಣವನ್ನು ಬ್ಯಾಂಕ್‌ ಖಾತೆಗೆ ಜಮಾ,  ರಾಜ್ಯದಲ್ಲಿರುವ ನೋಂದಾಯಿತ 18 ಲಕ್ಷ ಕಟ್ಟಡ ಕಾರ್ಮಿಕರ ಖಾತೆಗೆ ಈಗಾಗಲೇ 2,000 ರೂ ಜಮಾ ಮಾಡಲಾಗಿದೆ ಜೊತೆ ಹೆಚ್ಚುವರಿಯಾಗಿ 3 ಸಾವಿರ ಘೋಷಿಸಿದ್ದಾರೆ.

ನೇಕಾರರ ಯೋಗಕ್ಷೇಮಕ್ಕಾಗಿ ಖಾತೆಗೆ ತಲಾ 2,000 ಜಮಾ. ನೇಕಾರಿಗೆ ಉದ್ಯಮದ ಬೆಳವಣಿಗೆಗಾಗಿ ನೇಕಾರ ಸಮ್ಮಾನ್ ಯೋಜನೆ ಮೂಲಕ 80 ಕೋಟಿ ರೂ ಬಿಡುಗಡೆ. ಕಳೆದ ವರ್ಷ ನೇಕಾರರು ಪಾವತಿಸಿದ್ದ 1 ಲಕ್ಷ ವರೆಗಿನ ಸಾಲ ವಾಪಸ್‌.  ರಾಜ್ಯದಲ್ಲಿ ಈ ವರ್ಷ 11,675 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಹೂವಿನ ಬೆಳೆ ನಾಶವಾಗಿದೆ. ಹೀಗಾಗು ಹೂ ಬೆಳೆಗಾರರಿಗೆ ಆರ್ಥಿಕ ನೆರವು ಘೋಷಣೆ. ಒಂದು ಎಕರೆಗೆ ತಲಾ 25,000 ರೂ ಪರಿಹಾರ. ಸಣ್ಣ ಮತ್ತು ಮದ್ಯಮ ಕೈಗಾರಿಗೆಗಳ 2 ತಿಂಗಳ ವಿದ್ಯುತ್‌ ಬಿಲ್ ಮನ್ನಾ ಮಾಡಲಾಗುವುದು  ಎಂದು ಘೋಷಣೆ ಮಾಡಿದ್ದಾರೆ.  ಗ್ರಾಹಕರ ವಿದ್ಯುತ್‌ ಬಿಲ್ ಮೇಲೆ ಶೇ.1 ರಷ್ಟು ಕಡಿತ ಮಾಡಲಾಗುವುದು  ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.  ತರಕಾರಿ ಮತ್ತು ಹಣ್ಣು ಬೆಳೆಗಾರರಿಗೂ ನೆರವು ನೀಡುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ. ಬೃಹತ್ ಕೈಗಾರಿಕೆಗಳ 2 ತಿಂಗಳು ವಿದ್ಯುತ್ ಪಾವತಿಯಾಗದಿದ್ದರೂ ದಂಡ ವಸೂಲಿ ಮಾಡುವುದಿಲ್ಲ ಎಂದು ಇದೇ ಸಂದರ್ಭ ಸ್ಪಷ್ಟಪಡಿಸಿದರು.

 

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕದನ ವಿರಾಮ ಬಳಿಕ ಪರಿಸ್ಧಿತಿ ಸಾಮಾನ್ಯ ಸ್ಧಿತಿಗೆ | ಶಾಂತಿ ಸ್ಧಾಪನೆಯ ಉದ್ದೇಶಕ್ಕೆ ಪೂರಕ ವಾತಾವರಣ
May 11, 2025
10:11 PM
by: The Rural Mirror ಸುದ್ದಿಜಾಲ
ಮುಳಿಯ ಕೃಷಿಗೋಷ್ಟಿ | ಕೃಷಿಕರೇ ಕೃಷಿ ಮಾರುಕಟ್ಟೆ ಸೃಷ್ಟಿಸಿಕೊಳ್ಳುವುದು ಹೇಗೆ..?
May 11, 2025
9:54 PM
by: The Rural Mirror ಸುದ್ದಿಜಾಲ
ಈ ರಾಶಿಯವರಿಗೆ ಒಂಟಿಯಾಗಿರುವುದೇ ಇಷ್ಟ, ಫ್ರೆಂಡ್ಸೂ ಬೇಡ, ಫ್ಯಾಮಿಲಿಯವ್ರೂ ಬೇಡ…!
May 11, 2025
7:21 AM
by: ದ ರೂರಲ್ ಮಿರರ್.ಕಾಂ
ಕದನ ವಿರಾಮ ಘೋಷಣೆ | ಭಾರತ ಮತ್ತು ಪಾಕಿಸ್ತಾನ ಗಡಿಯಾಚೆಗಿನ ದಾಳಿಯನ್ನು ಕೊನೆಗೊಳಿಸಲು ಒಪ್ಪಿಕೊಂಡಿವೆ
May 10, 2025
7:42 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group