ಚೆಸ್ಟರ್-ಲೀ-ಸ್ಟ್ರೀಟ್: ಮಧ್ಯಮ ಕ್ರಮಾಂಕದ ದಾಂಡಿಗ ನಿಕೊಲಸ್ ಪೂರನ್ ಸಿಡಿಸಿದ ಚೊಚ್ಚಲ ಶತಕದ(118, 103 ಎಸೆತ, 11 ಬೌಂಡರಿ, 4 ಸಿಕ್ಸರ್) ಹೊರತಾಗಿಯೂ ವಿಶ್ವಕಪ್‌ನ 39ನೇ ಪಂದ್ಯದಲ್ಲಿ ಶ್ರೀಲಂಕಾ ತಂಡ ವೆಸ್ಟ್ ಇಂಡೀಸ್ ತಂಡವನ್ನು 23 ರನ್‌ಗಳಿಂದ ರೋಚಕವಾಗಿ ಮಣಿಸಿದೆ. ಗೆಲ್ಲಲು 339 ರನ್ ಗುರಿ ಪಡೆದ ವೆಸ್ಟ್‌ಇಂಡೀಸ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 315 ರನ್ ಗಳಿಸಿ ವೀರೋಚಿತ ಸೋಲುಂಡಿತು.
Advertisement
ವಿಂಡೀಸ್ ಪರ ಸಿನ್ನರ್ ಅಲ್ಲೆನ್ ಮಿಂಚಿನ ಅರ್ಧಶತಕ(51, 32 ಎಸೆತ, 7 ಬೌಂಡರಿ, 1 ಸಿಕ್ಸರ್)ಸಿಡಿಸಿ ಗಮನ ಸೆಳೆದರು. ಆರಂಭಿಕ ಆಟಗಾರ ಕ್ರಿಸ್ ಗೇಲ್(32),ಹೆಟ್ಮೆಯರ್ (29) ಹಾಗೂ ಹೋಲ್ಡರ್(26) ಎರಡಂಕೆಯ ಸ್ಕೋರ್ ಗಳಿಸಿದರು.
Advertisement
ಶ್ರೀಲಂಕಾದ ಪರ ಲಸಿತ್ ಮಾಲಿಂಗ(3-55) ಯಶಸ್ವಿ ಬೌಲರ್ ಎನಿಸಿಕೊಂಡರು.
ಇದಕ್ಕೂ ಮೊದಲು ಶ್ರೀಲಂಕಾ ಅಗ್ರ ಕ್ರಮಾಂಕದ ದಾಂಡಿಗ ಅವಿಷ್ಕಾ ಫೆರ್ನಾಂಡೊ ಚೊಚ್ಚಲ ಶತಕದ ನೆರವಿನಿಂದ ವೆಸ್ಟ್‌ಇಂಡೀಸ್ ವಿರುದ್ಧ ನಿಗದಿತ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 338 ರನ್ ಗಳಿಸಿತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement