ನವದೆಹಲಿ: ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ವಿಶ್ವದಲ್ಲಿ ಏರಿಕೆಯಾಗುತ್ತಿದೆ. ಈಗಾಗಲೇ ಸುಮಾರು 3,36 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ಇರುವುದು ಪತ್ತೆಯಾದರೆ ಸುಮಾರು 97,636 ಕ್ಕೂ ಹೆಚ್ಚು ಜನರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಆರೋಗ್ಯ ಸಂಸ್ಥೆಯಯ ವರದಿ ಹೇಳಿದೆ. ಕೊರೊನಾ ವೈರಸ್ ನಿಂದಾಗಿ ಮೃತಪಟ್ಟವರ ಸಂಖ್ಯೆಯು 14,611 ಆಗಿದೆ. ಇದರಲ್ಲಿ ಬಹುತೇಕ ಮಂದಿ 60 ವರ್ಷ ಮೇಲ್ಪಟ್ಟವರು ಆಗಿದ್ದಾರೆ ಎಂದು ವರದಿ ಹೇಳಿದೆ. ಹೀಗಾಗಿ ಜನರಿಗೆ ಭಯಕ್ಕಿಂತಲೂ ವೈರಸ್ ಹರಡಂತೆ ಮುನ್ನೆಚ್ಚರಿಕಾ ಕ್ರಮಗಳ ಕಡೆಗೇ ಹೆಚ್ಚು ಗಮನಹರಿಸಬೇಕಿದೆ. ಕೊರೊನಾಗೆ ಸೂಕ್ತವಾದ ಯಾವುದೇ ಔಷದಿ ಇಲ್ಲದ ಕಾರಣದಿಂದ ವೈರಸ್ ಹರಡುವುದು ತಡೆದರೆ ಕೊರೊನಾ ವೈರಸ್ ಭೀತಿಯಿಂದ ಪಾರಾದಂತೆಯೇ ಆಗಿದೆ. ಹೀಗಾಗಿ ವೈರಸ್ ಹರಡುವುದು ತಡೆಯುವುದೇ ಸದ್ಯದ ಪರಿಹಾರವಾಗಿದೆ ಎಂದು ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
ಈ ಕಾರಣದಿಂದಲೇ ದೇಶದ 75 ಜಿಲ್ಲೆಗಳು ಬಂದ್ ಆಗಲಿದೆ. ಅಗತ್ಯ ವಸ್ತುಗಳಾದ ಹಣ್ಣು-ತರಕಾರಿ, ಮೆಡಿಕಲ್ ಶಾಪ್, ಪೆಟ್ರೋಲ್-ಡೀಸೆಲ್, ಹೋಟೆಲ್ ಹಾಗೂ ಆಹಾರ ಸಾಮಗ್ರಿಗಳು ಲಭ್ಯವಿರುತ್ತದೆ. ಅಗತ್ಯ ಇದ್ದವರು ಮಾತ್ರವೇ ಪೇಟೆಗೆ ಬರುವಂತಾಗಬೇಕು.