ಬೆಂಗಳೂರು: ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ವಿಶ್ವಾಸ ಮತಯಾಚನೆ ಮಧ್ಯಾಹ್ನದವರೆಗಿನ ಕಲಾಪದಲ್ಲಿ ನಡೆಯಲಿಲ್ಲ. ಸದನ ಕಲಾಪವನ್ನು 3 ಗಂಟೆಗೆ ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದರು. ಬೆಳಗ್ಗಿನಿಂದಲೇ ಸದನದಲ್ಲಿ ಸುದೀರ್ಘ ಚರ್ಚೆ ಸದನದಲ್ಲಿ ನಡೆಯಿತು.
ವಿಶ್ವಾಸಮತ ಯಾಚನೆ ಬಗ್ಗೆ ಮಾತನಾಡಿದ ಮಾಜಿ ಸೀಎಂ ಸಿದ್ಧರಾಮಯ್ಯ, ವಿಶ್ವಾಸಮತ ಯಾಚನೆ ಬಗ್ಗೆ ಕ್ರಿಯಾಲೋಪ ಉಂಟಾಗಿದೆ ಎಂದು ಚರ್ಚೆ ಆರಂಭಿಸಿ ಇದು ಬಗೆಹರಿಯುವವರೆಗೆ ವಿಶ್ವಾಸಮತ ಯಾಚನೆ ಬೇಡ ಎಂದು ವಾದಿಸಿದರು. ಅತೃಪ್ತ ಶಾಸಕರ ಪ್ರಕರಣ ಪ್ರಸ್ತುತ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಸುಪ್ರೀಂ ಕೋರ್ಟ್ ಆದೇಶವು ಅವರ ವರ್ತನೆ ಮೇಲೆ ಪ್ರಭಾವ ಬೀರುತ್ತದೆ, ಈ ಸಮಯದಲ್ಲಿ ವಿಶ್ವಾಸಮತ ತೆಗೆದುಕೊಳ್ಳುವುದು ಸಂವಿಧಾನದ ವಿರೋಧಿ ನಡೆ ಆಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ಈ ಬಗ್ಗೆ ಸ್ಪಷ್ಟತೆ ಬರುವವರೆಗೆ ವಿಶ್ವಾಸಮತಯಾಚನೆ ಬೇಡ ಎಂದರು. ಈ ನಡುವೆ ಅಧಿವೇಶನದಲ್ಲಿ ಭೋಜನ ವಿರಾಮ ತೆಗೆದುಕೊಳ್ಳಲಾಯಿತು. ಮಧ್ಯಾಹ್ನ ಮೂರು ಗಂಟೆಗೆ ಕಲಾಪ ನಡೆಯಲಿದೆ.
ದಕ್ಷಿಣ ಕನ್ನಡದ ಸುಳ್ಯ, ಸುಬ್ರಹ್ಮಣ್ಯ, ಬೆಳ್ತಂಗಡಿ, ಧರ್ಮಸ್ಥಳ ಸುತ್ತಮುತ್ತ ಭಾಗಗಳ ಒಂದೆರಡು ಕಡೆ…
ಹೆಚ್ಚಿನ ಭಾಗಗಳಲ್ಲಿ ಸಂಜೆ, ರಾತ್ರಿ ಮೋಡದ ವಾತಾವರಣದ ಮುನ್ಸೂಚೆನೆ ಇದ್ದು, ಘಟ್ಟದ ಕೆಳಗಿನ…
ಕೊಡಗು ಜಿಲ್ಲೆಯ ಕಕ್ಕಬೆಯ ಕುಂಜಿಲ ಪ್ರದೇಶದಲ್ಲಿ ಮಳೆಯಾಗಿದೆ.
ಅಧಿಕ ತಾಪಮಾನದೊಂದಿಗೆ ಮೋಡದ ವಾತಾವರಣದ ಮುನ್ಸೂಚನೆ ಇದೆ. ಸಂಜೆ, ರಾತ್ರಿಯ ವೇಳೆ ಘಟ್ಟದ…
ಕಾಲ್ತುಳಿತ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಅಮಾಯಕರೇ ಸಾಯುತ್ತಾರೆ. ಅವರಿಗೆ ಯಾರು ಎಲ್ಲಿಂದ ಯಾಕೆ ತಳ್ಳುತ್ತಿದ್ದಾರೆಂದೇ…
ಅಡಿಕೆಯ ಮೈಟ್ ಬಗ್ಗೆ ಸಿಪಿಸಿಆರ್‌ಐ ನಿರ್ದೇಶಕರು ಮಾಹಿತಿ ಪ್ರಕಟಿಸಿದ್ದಾರೆ. ಈ ಬಾರಿ ಕೆಲವು…