ಪುತ್ತೂರು: ಕಾಂಪ್ಕೊ ಚಾಕಲೇಟ್ ಪ್ಯಾಕ್ಟರಿಯಲ್ಲಿ “ವಿಶ್ವ ಆಹಾರ ಸುರಕ್ಷತಾ″ ದಿನದ ಅಂಗವಾಗಿ ನಾಲ್ಕು ದಿನದ ತರಬೇತಿ ಕಾರ್ಯಕ್ರಮವನ್ನು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್. ಆರ್ ಸತೀಶ್ಚಂದ್ರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು,” ಕ್ಯಾಂಪ್ಕೋ ಜಾಗತಿಕ ಮಟ್ಟದಲ್ಲಿ ಗುರುತಿಸಲು ಅದರ ಗುಣಮಟ್ಟ ಮತ್ತು ಸ್ವಾದಿಷ್ಟತೆಯೇ ಕಾರಣ” ಎಂದರು.
ತರಬೇತಿ ಕಾರ್ಯಕ್ರಮವು ಆಹಾರ ಸುರಕ್ಷರತೆ, ವೈಯುಕ್ತಿಕ ನೈರ್ಮಲ್ಯ, ಔದ್ಯೋಗಿಕ ಆರೋಗ್ಯ ಮತ್ತು ಸುರಕ್ಷತೆ, ಆಹಾರ ಗುಣಮಟ್ಟ ಆಹಾರ ಶೇಖರಣೆ ಮುಂತಾದ ವಿಷಯಗಳಲ್ಲಿ ಕ್ಯಾಂಪ್ಕೋ ಹಿರಿಯ ಅಧಿಕಾರಿಗಳಿಂದ ತರಬೇತಿ ನೀಡಲಾಗುತ್ತದೆ. ಎಲ್ಲಾ ನೌಕರರು ವಿಶ್ವ ಆಹಾರ ಸುರಕ್ಷಾ ದಿನದ ಪ್ರಯುಕ್ತ ಆಹಾರ ಸುರಕ್ಷತೆಯ ಕುರಿತು ಪ್ರಮಾಣ ವಚನ ಸ್ವೀಕರಿಸಿದರು.
ಆರೋಗ್ಯಾಧಿಕಾರಿ ಬದ್ರುದ್ದೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಭಂಡಾರಿ ಎಂ., ಉಪ ಪ್ರದಾನ ವ್ಯವಸ್ಠಾಪಕರಾದ ರೇಶ್ಮ ಮಲ್ಯ, ಪ್ಯಾಕ್ಟರಿ ಡಿ.ಜಿ.ಯಂ. ಪ್ರಾಸಿಸ್ ಡಿ ಸೋಜ , ಸಹಾಯಕ ಪ್ರದಾನ ವ್ಯವಸ್ಥಾಪಕ ಶ್ಯಾಂ ಪ್ರಸಾದ್, ನೆಸ್ಲೆ ಘಟಕದ ಮುಖ್ಯಸ್ಥಾರಾದ ಪ್ರದೀಪ್ ವಲ್ಸ್’ಲಾ ಉಪಸ್ಥಿತರಿದ್ದರು.
ಮಾರ್ಚ್ 6 ರಂದು ದಕ್ಷಿಣ ಕನ್ನಡ, ಮಲೆನಾಡು, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ…
ಒಂದು ತಿಂಗಳ ಅವಧಿಯಲ್ಲಿ ಚಾರ್ಮಾಡಿ ಘಾಟ್, ಬಿದಿರುತಳ, ಮುಳ್ಳಯ್ಯನಗಿರಿ ಸೇರಿ ಹಲವು ಅರಣ್ಯ…
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಘಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಮಳೆಯ ಸಾಧ್ಯತೆಯನ್ನು…
ಮಹಾಕುಂಭ ಮೇಳದ ಪ್ರಯಾಣದ ಅನುಭವವನ್ನು ಕೃಷಿಕ ಟಿ ಆರ್ ಸುರೇಶ್ಚಂದ್ರ ಇಲ್ಲಿ ಬರೆದಿದ್ದಾರೆ..…