ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ‘ವಿಶ್ವ ಆಹಾರ ಸುರಕ್ಷಾ ದಿನದ’ ಅಂಗವಾಗಿ ನಡೆದ ನಾಲ್ಕು ದಿನದ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕ್ಯಾಂಪ್ಕೋ ಅಧ್ಯಕ್ಷರಾದ ಎಸ್.ಆರ್ ಸತೀಶ್ಚಂದ್ರ ವಹಿಸಿ “ವೈಯುಕ್ತಿಕವಾಗಿ ವ್ಯಕ್ತಿ ಬೆಳೆದಾಗ ಸಮಾಜವು ಕೂಡಾ ಬೆಳೆಯುತ್ತದೆ”,” ಕೆಲವೊಂದು ವಿಶೇಷ ಕಲೆಗಳು ಅನುವಂಶೀಯವಾಗಿ ಕೊಡುಗೆಯಾಗಿ ಬಂದಿದೆ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಅಂತಹ ವಿಶೇಷ ಶಕ್ತಿಯಿದ್ದು ಅದನ್ನು ಹೊರತರುವ ಪ್ರಯತ್ನ ನಡೆಯಬೇಕು” ಎಂದು ಹೇಳಿದರು.
ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರಾದ ಸುರೇಶ್ ಭಂಡಾರಿ ಮಾತಾಡಿ ” ಹೊಸತನವನ್ನು ಅಳವಡಿಸಿಕೊಳ್ಳುವ ಮೂಲಕ ಫ್ಯಾಕ್ಟರಿಯನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಾಧ್ಯವಿದ್ದು ಎಲ್ಲರೂ ಸಮರ್ಪಣಾ ಭಾವದಿಂದ ಕೊಡುಗೆ ನೀಡಿದಾಗ ಇದು ಸಾಧ್ಯ ಎಂದರು .
ನೆಸ್ಲೆ ಘಟಕದ ಮುಖ್ಯಸ್ಥರಾದ ಪ್ರದೀಪ್ ವಲ್ಸಲಾ ,ಕ್ಯಾಂಪ್ಕೋ ಉತ್ಪದನಾ ಘಟಕದ ಎ.ಜಿ.ಮ್ ಅನೂಪ್ ,ತಾಂತ್ರಿಕ ಎ.ಜಿ.ಎಮ್ ಶ್ಯಾಮ ಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಕೇಶ್ ಕಾರ್ಯಕ್ರಮ ನಿರೂಪಿಸಿದರು. ರಾಧೇಶ್ ಕುಂದಲ್ಪಾಡಿ ಸ್ವಾಗತಿಸಿ, ಜೀವನದಾಸ್ ರೈ ವಂದಿಸಿದರು, ಶ್ರೀನಿವಾಸ ಕುಂಜತ್ತಾಯ ,ರಾಜೇಶ್ , ಪ್ರಶಾಂತ್ ಡಿ.ಎಸ್,ಪಿ.ಪಿ ಜೈನ್, ಪ್ರಮೋದ್ ಕೆ .ಯು ಗುಂಪು ಚಟುವಟಿಕೆಗಳನ್ನು ನಡೆಸಿಕೊಟ್ಟರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…