ವೀರರಾಣಿ ಅಬ್ಬಕ್ಕ ಉತ್ಸವ ಕ್ರೀಡಾ ಪಂದ್ಯಾಟ

February 14, 2020
7:27 PM

ಮಂಗಳೂರು : 2019-20ನೇ ಸಾಲಿಗೆ ವೀರರಾಣಿ ಅಬ್ಬಕ್ಕ ಉತ್ಸವದ ಅಂಗವಾಗಿ ದ.ಕ. ಜಿಲ್ಲಾಡಳಿತ, ಅಬ್ಬಕ್ಕ ಉತ್ಸವ ಸಮಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಫೆ. 23 ರಂದು ಬೆಳಿಗ್ಗೆ 9 ಗಂಟೆಗೆ ಮಂಗಳೂರು ತಾಲೂಕಿನ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಪುರುಷರಿಗೆ ವಾಲಿಬಾಲ್ ಮತ್ತು ಹಗ್ಗ ಜಗ್ಗಾಟ, ಮಹಿಳೆಯರಿಗೆ ತ್ರೋಬಾಲ್ ಮತ್ತು ಹಗ್ಗ ಜಗ್ಗಾಟ ಪಂದ್ಯಾಟ ನಡೆಯಲಿದೆ.

Advertisement

ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಫೆ. 21ರ ಒಳಗಾಗಿ ವಿನೋದ್ ಕುಮಾರ್ ದೂರವಾಣಿ ಸಂಖ್ಯೆ 9845026869 ಅಥವಾ ಲೋಕನಾಥ ರೈ ದೂರವಾಣಿ ಸಂಖ್ಯೆ 944800007 ಇವರಲ್ಲಿ ಹೆಸರು ನೊಂದಾಯಿಸಬೇಕು.

ಪಂದ್ಯಾಟದ ವಿಜೇತರಿಗೆ ನಗದು ಬಹುಮಾನದ ವಿವಿರ ಇಂತಿವೆ : ಪುರುಷರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ 12000 ರೂ, ದ್ವಿತೀಯ 8000 ರೂ, ತೃತೀಯ 4000 ರೂ, ಚತುರ್ಥ- 2000 ರೂ ನೀಡಲಾಗುತ್ತದೆ.
ತ್ರೋಬಾಲ್ ಮಹಿಳೆಯರ ವಿಭಾಗದಲ್ಲಿ, ಪ್ರಥಮ 8000 ರೂ, ದ್ವಿತೀಯ 6000 ರೂ, ತೃತೀಯ 4000 ರೂ, ಚತುರ್ಥ- 2000 ರೂ ನೀಡಲಾಗುತ್ತದೆ.
ಹಗ್ಗ ಜಗ್ಗಾಟ ಪುರುಷರ ವಿಭಾಗದಲ್ಲಿ ಪ್ರಥಮ 10000 ರೂ, ದ್ವಿತೀಯ 7000 ರೂ, ತೃತೀಯ-4000 ರೂ, ಚತುರ್ಥ 2000 ರೂ ನೀಡಲಾಗುತ್ತದೆ.
ಹಗ್ಗ ಜಗ್ಗಾಟ ಮಹಿಳೆಯರು ವಿಭಾಗದಲ್ಲಿ ಪ್ರಥಮ 8000 ರೂ, ದ್ವಿತೀಯ 6000 ರೂ, ತೃತೀಯ-4000 ರೂ, ಚತುರ್ಥ 2000 ರೂ ನೀಡಲಾಗುತ್ತದೆ.

ಭಾಗವಹಿಸುವ ತಂಡಗಳು ಫೆಬ್ರವರಿ 23 ರಂದು ಬೆಳಿಗ್ಗೆ 9 ಗಂಟೆಯೊಳಗೆ ಅಸೈಗೋಳಿ ಕೇಂದ್ರ ಮೈದಾನದಲ್ಲಿ ಹಾಜರಿರಬೇಕೆಂದು ಯುವ ಸಬಲೀಕರಣ ಮ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೆ.ಎಸ್.ಆರ್.ಟಿ.ಸಿ ಅಪ್ರೆಂಟಿಸ್ ತರಬೇತಿ : ಅರ್ಜಿ ಆಹ್ವಾನ
August 5, 2025
10:54 PM
by: The Rural Mirror ಸುದ್ದಿಜಾಲ
ಉದ್ಯೋಗ | ಐಟಿಐ-ಡಿಪ್ಲೊಮಾ ಅಭ್ಯರ್ಥಿಗಳಿಗೆ ಇಲ್ಲಿದೆ ಅವಕಾಶ |
July 22, 2025
10:37 PM
by: The Rural Mirror ಸುದ್ದಿಜಾಲ
ಗದಗ | ಈರುಳ್ಳಿ ಮತ್ತು ಕೆಂಪುಮೆಣಸಿನಕಾಯಿ ಬೆಳೆಗಳಿಗೆ ವಿಮಾ ಸೌಲಭ್ಯ ಅಧಿಸೂಚನೆ
July 19, 2025
8:56 PM
by: ದ ರೂರಲ್ ಮಿರರ್.ಕಾಂ
ಮಂಡ್ಯದಲ್ಲಿ  ಸ್ವಸಹಾಯ ಸಂಘದ ಮಹಿಳೆಯರಿಗೆ ಮೇಕೆ, ಕುರಿ, ಕೋಳಿ ಸಾಕಾಣಿಕೆ ಅವಕಾಶ
July 17, 2025
10:01 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group