ಸುಳ್ಯ: ದೇಶದಾದ್ಯಂತ ಕೊರೊನಾ ವೈರಸ್ ಹರಡುವುದು ತಡೆಗೆ ವಿವಿಧ ಪ್ರಯತ್ನ ಮಾಡಲಾಗುತ್ತಿದೆ. ಲಾಕ್ಡೌನ್ ಮೂಲಕ ಜನರು ಮನೆಯಿಂದ ಹೊರಬರದಂತೆ ಎಚ್ಚರಿಕೆ ವಹಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಡೆಯುತ್ತಿದೆ. ಇದರ ಜೊತೆಗೆ ಆಯುರ್ವೇದ ಗಿಡಮೂಲಿಕೆಗಳ ಹವಿಸ್ಸಿನಿಂದ ಶಾಂತಿ ಹವನ ಮಾಡುವ ಮೂಲಕ ವೈರಸ್ ಪ್ರಭಾವ ತಗ್ಗಿಸುವ ಪ್ರಯತ್ನ ಮಾಡಲಾಗುತ್ತಿದೆ. ಲೋಕಹಿತಕ್ಕಾಗಿ ಈ ಕಾರ್ಯದಲ್ಲಿ ಸಾಮಾಜಿಕ ಕಾಳಜಿಯೂ ಇದೆ.
ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ವಳಲಂಬೆಯ ಹಿರಿಯ ವೈದಿಕ ವಿದ್ವಾಂಸರೂ, ಮಾರ್ಗದರ್ಶಕರೂ ಆಗಿರುವ ವೇದಗುರು ಕರುವಜೆ ಕೇಶವ ಜೋಯಿಸರ ನೇತೃತ್ವದಲ್ಲಿ ಈ ಹವನ ನಡೆಯುತ್ತಿದೆ. ಮಾ.20 ರಿಂದ ಆರಂಭವಾಗಿರುವ ಈ ಹವನ ಕಿಲೋ ಮೀಟರ್ ಗೆ ಒಂದು ಮನೆಯಂತೆ ನಿರಂತರವಾಗಿ ನಡೆಯುತ್ತಿದೆ. ಯಾವುದೇ ಫಲಾಪೇಕ್ಷೆ ಇಲ್ಲದೆ ಸ್ವಆಸಕ್ತಿಯಿಂದ ಈ ಕಾರ್ಯ ನಡೆಸುತ್ತಿರುವ ಕರುವಜೆ ಕೇಶವ ಜೋಯಿಸರು ಲೋಕವು ಸಂಕಷ್ಟದಲ್ಲಿ ಇರುವ ಸಂದರ್ಭ ಯಜ್ಞದ ಮೂಲಕ ಜನರಿಗೆ ಮಾನಸಿಕ ಧೈರ್ಯ ತುಂಬುವ ಕಾರ್ಯ ನಡೆಸುತ್ತಿದ್ದಾರೆ. ಜೊತೆಗೆ ಆಯುರ್ವೇದದ ಸಾರವನ್ನೂ ತಿಳಿಸುತ್ತಿದ್ದಾರೆ.
ಆಯುರ್ವೇದಲ್ಲಿ ವಿವಿಧ ಗಿಡ ಮೂಲಿಕೆಗಳು ಕಷಾಯಗಳು , ಲೇಹಗಳು, ಆಸವಗಳು, ಅರಿಷ್ಟಗಳು ದೇಹಕ್ಕೆ ರಕ್ಷಣೆ ನೀಡುತ್ತದೆ, ಅದರಿಂದ ದೇಹದ ಆರೋಗ್ಯ ಕಾಪಾಡುತ್ತದೆ. ವ್ಯಾಧಿಗಳು ನಿವಾರಣೆಯಾಗುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಅಂತಹದ್ದೇ ವನಸ್ಪತಿಗಳನ್ನು ಯಜ್ಞಕ್ಕೆ ಹವಿಸ್ಸಿನ ರೂಪದಲ್ಲಿ ಅರ್ಪಿಸಿ ಆ ಧೂಮವು ಪರಿಸರಕ್ಕೆ ಹರಡಿದರೆ ವೈರಾಣುಗಳ ಪ್ರಭಾವ ತಗ್ಗಿಸಬಹುದು ಎಂಬುದು ಗ್ರಂಥಗಳಲ್ಲಿ ಹೇಳಲಾಗಿದೆ. ಈಗ ಅದೇ ಮಾದರಿಯಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಹಾಗೆಂದು ಈ ಯಜ್ಞ ಮಾಡಿದ ತಕ್ಷಣವೇ ವೈರಾಣುಗಳು ಸುಳಿಯುವುದಿಲ್ಲ ಎಂಬುದಲ್ಲ , ಪರಿಸರವು ಯಜ್ಞದ ಧೂಮದ ಮೂಲಕ ಸ್ವಚ್ಛವಾಗಿ ವೈರಾಣುಗಳಿದ್ದರೆ ಅವುಗಳ ಪ್ರಭಾವ ತಗ್ಗಬಹುದು ಎಂದು ಹೇಳುತ್ತಾರೆ ಕೇಶವ ಜೋಯಿಸರು.
ಇಲ್ಲಿ ಯಜ್ಞಕ್ಕೆ ಅಮೃತಬಳ್ಳಿ, ಕಿರಾತಕಡ್ಡಿ, ನೆಕ್ಕಿ , ಹಿಪ್ಪಲಿ, ಎಕ್ಕೆ , ಅಶೋಕ, ಉತ್ತರಣೆ, ಅತ್ತಿ, ಅರಸಿನ, ಗೋಳಿ, ಗರಿಕೆ, ಲವಂಗ, ನೆಲ್ಲಿ ಹೀಗೆ ವಿವಿಧ ಬಗೆಯ ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಅರ್ಪಣೆ ಮಾಡಲಾಗುತ್ತದೆ.
ಪ್ರತೀ ಮನೆಯಲ್ಲಿ ಕೂಡಾ ಪ್ರತಿಯೊಬ್ಬರು ಆಯುರ್ವೇದ ಗುಣವುಳ್ಳ ವಸ್ತುಗಳನ್ನು ಹವಿಸ್ಸಾಗಿ ಪ್ರತೀ ದಿನವೂ ಮನೆಯವರೇ ಮಾಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದಲ್ಲದೆ ಆ ವಾತಾವರಣ ಶುದ್ಧವಾಗಬಹುದು ಎಂದು ಕೇಶವ ಜೋಯಿಸರು ಹೇಳುತ್ತಾರೆ.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…