ಬೆಳ್ಳಾರೆ: ಬದುಕು ವೈವಿಧ್ಯಮಯವಾಗಿದ್ದು, ಅದಕ್ಕೆ ಸಾರ್ಥಕತೆ ತರಬೇಕು. ಹುಟ್ಟು ಸಾವಿನ ಮಧ್ಯೆ ಇರುವುದೇ ಜೀವನವಾಗಿದೆ. ಬದುಕೆಂಬ ಸಮುದ್ರವನ್ನು ಈಜಿ ದಡ ಸೇರುವ ಸಾಮರ್ಥ್ಯವನ್ನು ನಾವು ಹೊಂದಲು ಪ್ರಯತ್ನಿಸಬೇಕು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಹೇಳಿದರು.
ಕಳಂಜ ಗ್ರಾಮ ಪಂಚಾಯತ್‍ನಲ್ಲಿ ಬಿಲ್‍ಕಲೆಕ್ಟರ್ ಆಗಿ ಕರ್ತವ್ಯದಲ್ಲಿದ್ದು, ಪದೋನ್ನತಗೊಂಡು ವರ್ಗಾವಣೆಯಾದ ಮೋನಪ್ಪ ಕೋಡಿಯಡ್ಕ ಅವರಿಗೆ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದ ಅವರು ವೈಯಕ್ತಿಕ ಬದುಕಿನೊಂದಿಗೆ ಸಮಾಜದ ಏಳಿಗೆಗೂ ಶ್ರಮಿಸಬೇಕು. ನಾಲ್ಕು ಜನರ ಆಶಿರ್ವಾದ ನಮ್ಮ ಯಶಸ್ಸಿಗೆ ಬುನಾದಿ ಎಂದರು.
ಬಿಲ್‍ಕಲೆಕ್ಟರ್ ಆಗಿ ಸೇವೆ ಸಲ್ಲಿಸಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಭಡ್ತಿಯೊಂದಿಗೆ ಮಂಗಳೂರು ತಾಲೂಕು ಪಂಚಾಯತ್‍ಗೆ ವರ್ಗಾವಣೆಯಾದ ಮೋನಪ್ಪ ಕೋಡಿಯಡ್ಕ ಅವರನ್ನು ಅಣ್ಣಾ ವಿನಯಚಂದ್ರ ಕಳಂಜ ಗ್ರಾಮ ಪಂಚಾಯತ್ ಪರವಾಗಿ ಸನ್ಮಾನಿಸಿ ಗೌರವಿಸಿದರು. ಸನ್ಮಾನಿತರಿಂದ ಕಳಂಜ ಗ್ರಾಮ ಪಂಚಾಯತ್‍ಗೆ ನೆನಪಿನ ಕೊಡುಗೆಯನ್ನು ನೀಡಲಾಯಿತು. ಸಾರ್ವಜನಿಕರು ಸನ್ಮಾನಿತರ ಕುರಿತು ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಯಶೋದಾ ಎಂ. ವಹಿಸಿ ಸ್ವಾಗತಿಸಿದರು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಶ್ರೀಧರ್ ಕೆ.ಆರ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಸದಸ್ಯ ಲಕ್ಷ್ಮೀಶ ಕಜೆಮೂಲೆ ಪ್ರಸ್ತಾವಿಸಿ ವಂದಿಸಿದರು. ಸಿಬ್ಬಂದಿ ಗಿರಿಧರ ಕಳಂಜ ಕಾರ್ಯಕ್ರಮ ನಿರೂಪಿಸಿದರು.