ಬೆಳ್ಳಾರೆ:ವ್ಯಸನಗಳು ಕುಟುಂಬದ ಭವಿಷ್ಯವನ್ನೇ ಹಾಳುಗೆಡವುತ್ತದೆ. ವ್ಯಸನವು ಒಂದು ಮಾನಸಿಕ ಸಮಸ್ಯೆಯಾಗಿದ್ದು, ಶಾರೀರಿಕ ಸಮಸ್ಯೆಗಿಂತ ಮಾನಸಿಕ ಸಮಸ್ಯೆ ಹೆಚ್ಚು ನೋವುಂಟುಮಾಡುತ್ತದೆ ಎಂದು ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಡಾ|ಸುಪ್ರಿಯಾ.ಪಿ.ಆರ್ ಹೇಳಿದರು.
ಜೇಸಿಐ ಸಪ್ತಾಹ ಪ್ರಯುಕ್ತ ಬೆಳ್ಳಾರೆ ಜೇಸಿಐ ವತಿಯಿಂದ ಸಮಾಜಕಾರ್ಯ ವಿಭಾಗ ಹಾಗು ಯೂತ್‍ರೆಡ್‍ಕ್ರಾಸ್ ಘಟಕದ ಸಹಯೋಗದೊಂದಿಗೆ ಪೆರುವಾಜೆ ಡಾ| ಕೆ.ಶಿವರಾಮ ಕಾರಂತ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ವ್ಯಸನ ಮುಕ್ತ ಹಾಗು ಕ್ಷಯಮುಕ್ತ ಭಾರತ ಮಾಹಿತಿ ಕಾರ್ಯಗಾರದಲ್ಲಿ ಪ್ರಸ್ತಾವಿಸಿ ಅವರು ಮಾತನಾಡಿದರು.
ಬೆಳ್ಳಾರೆ ಜೇಸಿಐ ಅಧ್ಯಕ್ಷ ಹಾಗು ಸುಳ್ಯ ತಾಲೂಕು ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಮಾಹಿತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲ ರಾಘವ ಅವರು ಶುಭಹಾರೈಸಿದರು.
ವೇದಿಕೆಯಲ್ಲಿ ಜಿಲ್ಲಾ ಕ್ಷಯರೋಗ ಚಿಕಿತ್ಸಾ ವಿಭಾಗದ ಮನೋಜ್, ಯೂತ್‍ರೆಡ್‍ಕ್ರಾಸ್ ಅಧ್ಯಕ್ಷ ಗಿರೀಶ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪ್ರೇಮಾ ಸ್ವಾಗತಿಸಿದರು. ಚಿತ್ರಕಲಾ ಕಾರ್ಯಕ್ರಮ ನಿರೂಪಿಸಿದರು.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…