ಮಡಿಕೇರಿ: ಶಿಕ್ಷಕಿಯನ್ನು ಗುಂಡು ಹೊಡೆದು ಹತ್ಯೆಗೈದ ಕೊಲೆಗಾರ ಕೊನೆಗೆ ತಾನೂ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಬಾಳೆಲೆಯಲ್ಲಿ ನಡೆದಿದ್ದು, ಈ ಕೊಲೆಗೆ ಕಾರಣ ನಿಗೂಢವಾಗಿದೆ. ಈ ಬಗ್ಗೆ ಪೊಲೀಸ್ ತನಿಖೆ ನಡೆಯುತ್ತಿದೆ.
ಕಳತ್ಮಾಡು ಲಯನ್ಸ್ ಪ್ರೌಢಶಾಲೆ ಶಿಕ್ಷಕಿ, ಬಾಳೆಲೆ ಗ್ರಾಮದ ದಿ. ಆದೇಂಗಡ ದಿನೇಶ್ ಚೆಂಗಪ್ಪ ಅವರ ಪತ್ನಿ ಆಶಾ ಕಾವೇರಮ್ಮ (53) ಕೊಲೆಯಾದ ಶಿಕ್ಷಕಿ. ಪೊನ್ನಂಪೇಟೆಯಲ್ಲಿ ವಾಸವಿದ್ದ ಬಲ್ಯಮುಂಡೂರು ಗ್ರಾಮದ ಮಾಚಿಮಾಡ ಜಗದೀಶ್ (67) ಆತ್ಮಹತ್ಯೆ ಮಾಡಿಕೊಂಡಿರುವ ಆರೋಪಿ. ಶಿಕ್ಷಕಿ ಆಶಾ ಅವರ ಮನೆ ಸಮೀಪವಿರುವ ಮುಖ್ಯ ರಸ್ತೆಯ ಪೊಲೀಸ್ ಉಪಠಾಣೆ ಎದುರಿನಲ್ಲೇ ಘಟನೆ ನಡೆದಿತ್ತು. ಘಟನೆ ಸಂದರ್ಭ ಶಿಕ್ಷಕಿಯನ್ನು ರಕ್ಷಿಸಲು ಹೋದ ಬಾಳೆಲೆ ಕಾಲೇಜು ವಿದ್ಯಾರ್ಥಿ ದಿನೇಶ್ (17) ಹಾಗೂ ಪೆಮ್ಮು (45) ಅವರಿಗೂ ಗುಂಡು ತಗಲಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕೃತ್ಯ ನಡೆದ 25 ಮೀಟರ್ ದೂರದ ತೋಟದಲ್ಲಿ ಹಂತಕ ಜಗದೀಶ್ ಅವರ ಮೃತದೇಹ ಪತ್ತೆಯಾಗಿದ್ದು, ಕೋವಿಯಿಂದ ಗುಂಡು ಹೊಡೆದುಕೊಂಡಿರುವುದು ಕಂಡು ಬಂದಿದೆ. ಸಾಲ ಪಡೆದುಕೊಂಡ ವಿಚಾರದಲ್ಲಿ ಜಗದೀಶ್ ಅವರು ಆಶಾ ಅವರಿಗೆ ಕಿರುಕುಳ ನೀಡುತ್ತಿದ್ದರು ಎಂಬ ಆರೋಪವಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಗದೀಶ್ ಜೈಲುವಾಸ ಕೂಡ ಅನುಭವಿಸಿದ್ದರು. ಇದೇ ಸೇಡು ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ . ಪೊಲೀಸ್ ತನಿಖೆ ನಡೆಯುತ್ತಿದೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…