ಶಾಲೆಗಳಲ್ಲಿ “ವಾಟರ್ ಬೆಲ್” ಕಡೆಗೆ ಆಸಕ್ತರಾದ ಶಿಕ್ಷಣ ಸಚಿವರು

November 13, 2019
8:58 PM

ಬೆಂಗಳೂರು: ಶಾಲಾ ಮಕ್ಕಳ ಆರೋಗ್ಯದ ಕಡೆಗೆ ರಾಜ್ಯದ ಶಿಕ್ಷಣ ಸಚಿವರು ಕಾಳಜಿ ವಹಿಸಿದ್ದಾರೆ. ಈಗಾಗಲೇ ಕೇರಳ ಹಾಗೂ ರಾಜ್ಯದ ಕೆಲವು ಶಾಲೆಗಳಲ್ಲಿ ಅನುಷ್ಟಾನ ಮಾಡಿರುವ “ವಾಟರ್ ಬೆಲ್” ಎಲ್ಲಾ ಶಾಲೆಗಳಲ್ಲೂ ಜಾರಿ ಮಾಡುವತ್ತ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಸಕ್ತರಾಗಿದ್ದು , ಶಿಕ್ಷಣ  ಆಯುಕ್ತರಿಗೆ ಸೂಚನೆ ನೀಡಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

 

ಕೇರಳದಲ್ಲಿ  ಈ ಯೋಜನೆ ಈಗಾಗಲೇ ಜಾರಿಯಾಗಿದೆ. ಶಾಲಾ ಮಕ್ಕಳು ಕಡ್ಡಾಯವಾಗಿ ಮೂರು ಬಾರಿ ನೀರು  ಕುಡಿಯುವ ಯೋಜನೆ ಇದು. ಶಾಲೆಯಲ್ಲಿ ನೀರು ಕುಡಿಯಲೆಂದೇ ಬೆಲ್ ಕೊಡಲಾಗುತ್ತದೆ. ಈ ಸಂದರ್ಭ ಮಕ್ಕಳು ನೀರು ಕುಡಿಯಬೇಕು. ಇದು ಯೋಜನೆಯ ಸಂಕ್ಷಿಪ್ತ ರೂಪ. ಪ್ಲಾಸ್ಟಿಕ್ ರಹಿತವಾದ ಬಾಟಲಿಯಲ್ಲಿಯೇ ಮಕ್ಕಳು ಶಾಲೆಗೆ ನೀರು ತರಬೇಕು. ಕೇರಳದಲ್ಲಿ ಈ ಯೋಜನೆ ಯಶಸ್ವಿಯಾಗಿದೆ.

ಮೊದಲು ಕೇರಳದ ತಿರುವನಂತಪುರಂನ ಗ್ರೀನ್ ಡೋಮ್ ಪಬ್ಲಿಕ್ ಶಾಲೆ ಈ ವರ್ಷದ ಆರಂಭದಲ್ಲಿ ‘ವಾಟರ್ ಬೆಲ್’ ಯೋಜನೆಯಂತೆ ನೀರು ಕುಡಿಯಲು ನಿರ್ದಿಷ್ಟ ಅವಧಿಯಲ್ಲಿ ವಿಶೇಷ ವಿರಾಮದ ಸಮಯ ನೀಡುವುದು ಈ ಯೋಜನೆ ಉದ್ದೇಶ.

ರಾಜ್ಯದ ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಇಂದ್ರಪ್ರಸ್ಥ ಶಾಲೆಯಲ್ಲಿ,  ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ  ಈಗಾಗಲೇ ಈ ಯೋಜನೆ ಜಾರಿಯಲ್ಲಿದೆ. ಸುಳ್ಯ ತಾಲೂಕಿನ ಎಲಿಮಲೆ ಜ್ಞಾನದೀಪ ಶಾಲೆಯಲ್ಲಿ ಮಕ್ಕಳಿಗೆ ನೀರು ಕುಡಿಯುವಂತೆ ಸಲಹೆ ನೀಡಲಾಗಿದೆ. ಹೀಗಾಗಿ ಇಲ್ಲೂ ಮಕ್ಕಳು ಸಾಕಷ್ಟು ನೀರು ಕುಡಿಯುತ್ತಾರೆ.

ಇದೀಗ ವಾಟರ್ ಬೆಲ್ ಯೋಜನೆಯ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಸಕ್ತಿ ವಹಿಸಿ  ರಾಜ್ಯದಲ್ಲೂ ಈ ಯೋಜನೆ ಜಾರಿಯಾಗಬೇಕು ಎಂದು ಟ್ವಿಟ್ಟರ್ ಮೂಲಕ ಹೇಳಿಕೊಂಡಿದ್ದು ರಾಜ್ಯದ ಶಾಲೆಗಳಲ್ಲಿಯೂ ಇದನ್ನು ಅನುಷ್ಠಾನಗೊಳಿಸುವ ಕುರಿತು ಯೋಚಿಸಿ ಕಾರ್ಯಕ್ರಮ ರೂಪಿಸಬೇಕೆಂದು ನಮ್ಮ ಶಿಕ್ಷಣ ಆಯುಕ್ತರಿಗೆ ಸೂಚನೆ ನೀಡಿದ್ದೇನೆ ಎಂದು ಅವರು  ಟ್ವಿಟ್ಟರ್ ನಲ್ಲಿ  ಬರೆದಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror