ಸುಳ್ಯ: ಸುಳ್ಯ ಶಾಸಕ ಎಸ್.ಅಂಗಾರ ಸುಳ್ಯ ತಾಲೂಕಿನ ಅಮರಚಮುಡ್ನೂರು ಗ್ರಾಮದ ದೊಡ್ಡತೋಟ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿದರು. ಗುರುವಾರ ಬೆಳಿಗ್ಗೆ ಏಳು ಗಂಟೆಗೆ ಕುಟುಂಬ ಸಮೇತರಾಗಿ ಆಗಮಿಸಿ ಸರತಿ ಸಾಲಿನಲ್ಲಿ ಬಂದು ಮತದಾನ ಮಾಡಿದರು. ಅಂಗಾರ ಅವರ ಪುತ್ರಿ ಪೂಜಾಶ್ರೀ ಪ್ರಥಮ ಮತದಾನ ಮಾಡಿದ ಸಂಭ್ರಮವನ್ನು ಹಂಚಿಕೊಂಡರು. ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್‍ಕುಮಾರ್ ಕಟೀಲ್ ಎರಡು ಲಕ್ಷಕ್ಕೂ ಹೆಚ್ಚಿನ ಬಹುಮತ ಪಡೆದು ಪ್ರಚಂಡ ಗೆಲುವು ದಾಖಲಿಸಲಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಗೆ 50 ಸಾವಿರಕ್ಕೂ ಮಿಕ್ಕಿದ ಮುನ್ನಡೆ ದೊರೆಯಲಿದೆ ಎಂದು ಅಂಗಾರ ಹೇಳಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement