ಹರಿದಾಸ್ ಶೇಣಿ ಗೋಪಾಲಕೃಷ್ಣ ಭಟ್ಟರ ‘ಶುಕ್ರಾಚಾರ್ಯ’ ’
ಪ್ರಸಂಗ : ಮೃತಸಂಜೀವಿನಿ
(ಯಯಾತಿ ಮಹಾರಾಜನು ದೇವಯಾನಿಯನ್ನು ವಿವಾಹವಾಗಲು ಧರ್ಮಸೂಕ್ಷ್ಮದ ಪ್ರಶ್ನೆಯನ್ನು ಶುಕ್ರಾಚಾರ್ಯರ ಮುಂದಿಟ್ಟಾಗ)
“ಕುಮಾರ.. ನಾಲ್ಕು ವರ್ಣ ವಿಭಾಗ. ಇದು ಸಮಾಜದ ಸ್ವಾಸ್ಥ್ಯಕ್ಕೆ. ಕ್ಷತ್ರಿಯ ನೀನು. ನಾವು ಬ್ರಾಹ್ಮಣರು. ಸರ್ವೇಸಾಮಾನ್ಯವಾಗಿ ವೈದಿಕ ಪುತ್ರಿಯನ್ನು ಸಾಮಾನ್ಯ ಓರ್ವ ಕ್ಷತ್ರಿಯ ವಿವಾಹವಾಗಕೂಡದು. ವರ್ಣಸಂಕರ ಉಂಟಾಗುತ್ತದೆ. ರಾಜನು ಕ್ಷತ್ರಿಯನೇ ಅಂತ ಮುದ್ರೆ ಒತ್ತುವುದಕ್ಕೆ ಕಷ್ಟವಾಗುತ್ತದೆ. ಬ್ರಾಹ್ಮಣರಿಂದ ಮಂಗಳಸ್ನಾನವನ್ನು ಮಾಡಿಸಿಕೊಂಡು, ಕುಟುಂಬವನ್ನು ವಿಚ್ಛೇದಿಸಿಕೊಂಡು ಅಂತ ಹೇಳದಿದ್ರೂ ಕೇವಲ ಕೌಟುಂಬಿಕವಾದ ವ್ಯಕ್ತಿತ್ವವನ್ನು ಕಳೆದುಕೊಂಡು ರಾಜನು ಹೇಗಿರುತ್ತಾನೆ? ಆಚಾರ ಹೀಗುಂಟು. ಅಭಿಷೇಚನಗೊಂಡಂತಹ ಒಬ್ಬ ರಾಜ ಸೂತಕ ಪಾತಕಗಳಿಗಿಂತ ಹೊರಗಿರುತ್ತಾನೆ. ಪರಿಶುದ್ಧನಾಗಿರುತ್ತಾನೆ. ಆವಾಗ ಬ್ರಾಹ್ಮಣರು, ಇತರೇ ಜನಗಳು ಆ ರಾಜನಿಗೆ ನಾಲ್ಕು ವರ್ಣವನ್ನು ರಕ್ಷಿಸಿದ ಒಂದು ದಿವ್ಯತ್ವವನ್ನು ಆರೋಪಿಸುತ್ತಾರೆ.
ಅಶ್ವಮೇಧಕ್ಕೆ ಕುದುರೆಯನ್ನು ಪೂಜಿಸಿ ಕಳುಹಿಸುತ್ತೇವೆ. ಅದನ್ನು ‘ಕುದುರೆ’ ಅಂತ ಅಂಗೀಕರಿಸುವುದಕ್ಕೆ ಸಾಧ್ಯವಿಲ್ಲ ತಾನೆ? ಅಂತೆಯೇ ಅರಸುಗಳಿಗೆ ಎತ್ತಣದ ಜಾತಿ”? ಅರಸರ ಜಾತಿ ಅಂತಂದ್ರೆ ಅರಸರದ್ದೇ. ರೂಢಿಯಿದೆ, ಸಂದರ್ಭ ಬಂದಾಗ ಕ್ಷತ್ರಿಯನಾದವನು ಬ್ರಾಹ್ಮಣ ವಧುವನ್ನು ಕೈ ಹಿಡಿಯಬಹುದು. ಬ್ರಾಹ್ಮಣರಂತೂ ಕ್ಷತ್ರಿಯರಲ್ಲಿ ಅರಸು ಮಕ್ಕಳನ್ನು ಸೃಷ್ಟಿಸುವುದು ಇದ್ದೇ ಇದೆ. ಆ ಅನುಲೋಮ, ಪ್ರತಿಲೋಮ ಪದ್ಧತಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಿದೆ. ಆದರೆ ಅಪೂರ್ವ, ಅಪರೂಪ.
ವಿಪ್ರರಾದಂತಹ ನಮಗೆ ಹೇಗೆ ಗರ್ಭಾದಿ ಕೊನೆಯ ಹಂತದವರೆಗೆ ಸಂಸ್ಕಾರಗಳಿವೆಯೋ ಹಾಗೆ ಕ್ಷತ್ರಿಯರಾದ ನಿಮಗೂ ಇದೆ. ಉಪನೀತನಾದವನು ಗೃಹಸ್ಥಾಶ್ರಮ ಸ್ವೀಕಾರ ಮಾಡುವಾಗ ಅವನು ಔಪಾಸನೆ ಮಾಡಬೇಕಾಗುತ್ತದೆ. ಇಷ್ಟನ್ನು ಮುಂದಿಟ್ಟುಕೊಂಡು ಕ್ಷತ್ರಿಯ ಜಾತಿಯಲ್ಲಿ ಹುಟ್ಟಿದರೂ ಈಗ ಜಾತ್ಯತೀತನಾಗಿ ಇರುವುದರಿಂದ, ಒಂದು ರೀತಿಯ ದೈವೀ ಆವೇಶ ನಿನ್ನಲ್ಲಿ ಉಂಟು ಅಂತ ಕಂಡುಕೊಂಡ ಈ ಶುಕ್ರಾಚಾರ್ಯ, ವಿದ್ಯುಕ್ತವಾಗಿ ನನ್ನ ಮಗಳನ್ನು ಧಾರೆ ಎರೆದು ಕೊಡುವುದಕ್ಕೆ ಸಿದ್ಧನಾಗಿದ್ದಾನೆ. ಇದನ್ನು ಯಾರಾದರೂ ಆಕ್ಷೇಪಿಸುವ ಸಾಧಾರಣ ಬ್ರಾಹ್ಮಣರು ಇದ್ದರೆ, ಯಾರವರು? ಶಾಸ್ತ್ರದಲ್ಲಿ ಅನುಮಾನ ಬಂದರೆ, ಕರ್ಮಕಾಂಡದಲ್ಲಿ ಯಾರಿಗಾದರೂ ಜಿಜ್ಞಾಸೆ ಬಂದರೆ, ಕೊನೆಯ ತೀರ್ಮಾನ ಹೇಳುವವನು ನಾನೇ…”
ಸುಳ್ಯ ತಾಲೂಕಿನ ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗದಿಂದ ಭಾರೀ ನಷ್ಟ. ಬೆಳೆಸಾಲ ಮನ್ನಾ,…
ಜನವರಿ 11 ಮತ್ತು 12ರಂದು ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಕೆಲ…
ಅಡಿಕೆ ತೋಟಗಳಲ್ಲಿ ಹೂಗೊಂಚಲುಗಳು ಅರಳಿದರೂ ಕಾಯಿ ಕಟ್ಟದಿರುವುದಕ್ಕೆ ರೈತರು ಬಳಸುವ ಬೇವಿನ ಎಣ್ಣೆಯೇ…
ಕಳಪೆ ಗುಣಮಟ್ಟದ ಅಡಿಕೆ ಸಾಗಣೆ ಪ್ರಕರಣ ಪತ್ತೆಯಾಗಿದ್ದು, ಆಹಾರ ಸುರಕ್ಷತೆ ಮತ್ತು ಮಾನದಂಡಗಳ…
ಕಾಸರಗೋಡು CPCRI ತನ್ನ 110ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಜನರೇಷನ್ Z ಗಾಗಿ…
ಮಹಿಳಾ ಉದ್ಯಮಶೀಲತೆ, ತೆಂಗು ಮೌಲ್ಯವರ್ಧನೆ ಹಾಗೂ ರೈತರ ಆದಾಯ ವೃದ್ಧಿಯಲ್ಲಿ ತೆಂಗು ಅಭಿವೃದ್ಧಿ…