ಬದಿಯಡ್ಕ: ಶಾಸ್ತ್ರಿ ಸಾಹಿತ್ಯ ಪದವಿ ಪರೀಕ್ಷೆಯಲ್ಲಿ ಸ್ವರ್ಣಪದಕವನ್ನು ಗಳಿಸುವುದರ ಮೂಲಕ ವಿಶೇಷ ಸಾಧನೆಗೈದ ನೀರ್ಚಾಲು ಪಾಂಡೇಲು ಶರಣ್ಯ ಅವರನ್ನು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಪ್ರತಿಭಾಪುರಸ್ಕಾರವನ್ನು ನೀಡಿ ಆಶೀರ್ವದಿಸಿದರು. ತನ್ನ ಸ್ವರ್ಣಪದಕವನ್ನು ಶ್ರೀಪೀಠಕ್ಕೆ ಸಮರ್ಪಿಸಿ ಧಾರಣೆಮಾಡಿಸಿಕೊಂಡ ಶರಣ್ಯ ನೀರ್ಚಾಲು ಸಮೀಪದ ಬೇಳ ವಿಷ್ಣುಮೂರ್ತಿ ನಗರದಲ್ಲಿರುವ ಪಾಂಡೇಲು ವೇದಮೂರ್ತಿ ಕುಮಾರಸ್ವಾಮಿ ಪಿ.ಎಸ್. ಮತ್ತು ನಳಿನಿ ದಂಪತಿಗಳ ಪುತ್ರ. ಶೃಂಗೇರಿ ರಾಜೀವಗಾಂ ಕ್ಯಾಂಪಸ್‍ನಲ್ಲಿ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ಅಲಂಕಾರ ಶಾಸ್ತ್ರದಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಕೈಗೊಳ್ಳುತ್ತಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel