ಶಿಕ್ಷಕಿ‌ ಪ್ರಮೀಳಾರಾಜ್‌ ಗೆ ರಾಷ್ಟ್ರಮಟ್ಟದ ‘ಸಾಹಿತ್ಯ ವಿಭೂಷಣ’ ಪ್ರಶಸ್ತಿ

July 6, 2019
9:30 AM

ಸುಳ್ಯ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ.) ಬೆಳಗಾವಿ, ಇದರ ವತಿಯಿಂದ ಕೊಡಮಾಡುವ ಈ ಬಾರಿಯ ರಾಷ್ಟ್ರಮಟ್ಟದ ‘ಸಾಹಿತ್ಯ ವಿಭೂಷಣ’ ಗೌರವ ಪುರಸ್ಕಾರಕ್ಕೆ ನಿಡುಬೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಮೀಳಾರಾಜ್ ಆಯ್ಕೆಯಾಗಿರುತ್ತಾರೆ.

Advertisement

ಸಾಹಿತ್ಯ ‌ಕ್ಷೇತ್ರದ ಹದಿನೈದು ಮಂದಿ ಸಾಧಕರ ಪ್ರಕಟಗೊಂಡ ಕೃತಿಗಳನ್ನು ಆರಿಸಿ ಈ ಗೌರವ ಪುರಸ್ಕಾರ ನೀಡಲಾಗುತ್ತಿದ್ದು, ಕವಯತ್ರಿ ಪ್ರಮಿಳಾರಾಜ್ ಅವರ ‘ಸಂಗೀತಾ – ನನ್ನೆದೆಯ ಭಾವಗಳ ಯಾನ’ ಕವನ ಸಂಕಲನವು ಈ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತದೆ. ಕಳೆದ ವರ್ಷ ಸುವಿಚಾರ ಸಾಹಿತ್ಯ ವೇದಿಕೆ ವತಿಯಿಂದ ನಡೆಸಲಾದ ಶಿಕ್ಷಕರ ಕವಿಗೋಷ್ಠಿಯ ದಿನ ಈ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಗಿದ್ದು, ಭಾವಪೂರ್ಣ ಪದಪುಂಜಗಳ ಮೂಲಕ ಬದುಕು-ಬವಣೆ, ನೋವು-ನಲಿವುಗಳ ವಾಸ್ತವ ಚಿತ್ರಣವನ್ನು ತೆರೆದಿಡುವ ಈ ಕೃತಿಯು ಸಾಹಿತ್ಯ ಪ್ರಿಯರ ಮೆಚ್ಚುಗೆ ಗಳಿಸಿತ್ತು.

ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಅರ್ಹತೆ ಗಳಿಸಿದ ತನ್ನ ಚೊಚ್ಚಲ ಕವನ ಸಂಕಲನದ ಕುರಿತಾಗಿ ಹೆಮ್ಮೆ ಪಡುತ್ತಿರುವ ಕವಯತ್ರಿ, ತನ್ನ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಿದ ಗುರುಗಳು, ಸ್ನೇಹಿತರು ಹಾಗೂ ಹಿತೈಷಿಗಳನ್ನು ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಿದ್ದಾರೆ.

ಜುಲೈ 7 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ ಮಟ್ಟದ ಗ್ರಾಮೀಣ ಸಾಹಿತ್ಯ ಸಮ್ಮೇಳನದಲ್ಲಿ ಈ ಪುರಸ್ಕಾರ ಪಡೆಯಲಿರುವ ಪ್ರಮೀಳಾರಾಜ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ರಾಜ್ ಅವರ ಧರ್ಮಪತ್ನಿ ಹಾಗೂ ಬಂಟ್ವಾಳದ ಆಲದಪದವು ದಿ‌. ಶೀನ ಮತ್ತು  ಲಲಿತ ದಂಪತಿಗಳ ಸುಪುತ್ರಿ.

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಪ್ರತಿಯೊಂದು  ಗ್ರಾಮ ಪಂಚಾಯಿತಿಯಲ್ಲಿ  ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಾಣ
July 9, 2025
9:19 PM
by: The Rural Mirror ಸುದ್ದಿಜಾಲ
ದಾವಣಗೆರೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ ಬಳಕೆ ನಿಷೇಧ
July 9, 2025
9:16 PM
by: The Rural Mirror ಸುದ್ದಿಜಾಲ
ಹೃದಯಾಘಾತದ ಬಗ್ಗೆ ಅನಗತ್ಯ ಆತಂಕ ಪಡುವ ಅಗತ್ಯ ಇಲ್ಲ
July 9, 2025
9:07 PM
by: The Rural Mirror ಸುದ್ದಿಜಾಲ
ಸುಳ್ಳು ಸುದ್ದಿ ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ – ಗೃಹಸಚಿವ ಡಾ.ಜಿ.ಪರಮೇಶ್ವರ್
July 9, 2025
8:50 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group