ಸುಳ್ಯ: ಕಸ್ತೂರಿ ಸಿರಿಗನ್ನಡ ವೇದಿಕೆ (ರಿ.) ಬೆಳಗಾವಿ, ಇದರ ವತಿಯಿಂದ ಕೊಡಮಾಡುವ ಈ ಬಾರಿಯ ರಾಷ್ಟ್ರಮಟ್ಟದ ‘ಸಾಹಿತ್ಯ ವಿಭೂಷಣ’ ಗೌರವ ಪುರಸ್ಕಾರಕ್ಕೆ ನಿಡುಬೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಪ್ರಮೀಳಾರಾಜ್ ಆಯ್ಕೆಯಾಗಿರುತ್ತಾರೆ.
ಸಾಹಿತ್ಯ ಕ್ಷೇತ್ರದ ಹದಿನೈದು ಮಂದಿ ಸಾಧಕರ ಪ್ರಕಟಗೊಂಡ ಕೃತಿಗಳನ್ನು ಆರಿಸಿ ಈ ಗೌರವ ಪುರಸ್ಕಾರ ನೀಡಲಾಗುತ್ತಿದ್ದು, ಕವಯತ್ರಿ ಪ್ರಮಿಳಾರಾಜ್ ಅವರ ‘ಸಂಗೀತಾ – ನನ್ನೆದೆಯ ಭಾವಗಳ ಯಾನ’ ಕವನ ಸಂಕಲನವು ಈ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತದೆ. ಕಳೆದ ವರ್ಷ ಸುವಿಚಾರ ಸಾಹಿತ್ಯ ವೇದಿಕೆ ವತಿಯಿಂದ ನಡೆಸಲಾದ ಶಿಕ್ಷಕರ ಕವಿಗೋಷ್ಠಿಯ ದಿನ ಈ ಕವನ ಸಂಕಲನವನ್ನು ಬಿಡುಗಡೆಗೊಳಿಸಲಾಗಿದ್ದು, ಭಾವಪೂರ್ಣ ಪದಪುಂಜಗಳ ಮೂಲಕ ಬದುಕು-ಬವಣೆ, ನೋವು-ನಲಿವುಗಳ ವಾಸ್ತವ ಚಿತ್ರಣವನ್ನು ತೆರೆದಿಡುವ ಈ ಕೃತಿಯು ಸಾಹಿತ್ಯ ಪ್ರಿಯರ ಮೆಚ್ಚುಗೆ ಗಳಿಸಿತ್ತು.
ರಾಷ್ಟ್ರಮಟ್ಟದ ಪುರಸ್ಕಾರಕ್ಕೆ ಅರ್ಹತೆ ಗಳಿಸಿದ ತನ್ನ ಚೊಚ್ಚಲ ಕವನ ಸಂಕಲನದ ಕುರಿತಾಗಿ ಹೆಮ್ಮೆ ಪಡುತ್ತಿರುವ ಕವಯತ್ರಿ, ತನ್ನ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡಿದ ಗುರುಗಳು, ಸ್ನೇಹಿತರು ಹಾಗೂ ಹಿತೈಷಿಗಳನ್ನು ಅಭಿಮಾನದಿಂದ ಸ್ಮರಿಸಿಕೊಳ್ಳುತ್ತಿದ್ದಾರೆ.
ಜುಲೈ 7 ರಂದು ಬೆಳಗಾವಿಯಲ್ಲಿ ನಡೆಯಲಿರುವ ರಾಷ್ಟ ಮಟ್ಟದ ಗ್ರಾಮೀಣ ಸಾಹಿತ್ಯ ಸಮ್ಮೇಳನದಲ್ಲಿ ಈ ಪುರಸ್ಕಾರ ಪಡೆಯಲಿರುವ ಪ್ರಮೀಳಾರಾಜ್ ಅವರು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ರಾಜ್ ಅವರ ಧರ್ಮಪತ್ನಿ ಹಾಗೂ ಬಂಟ್ವಾಳದ ಆಲದಪದವು ದಿ. ಶೀನ ಮತ್ತು ಲಲಿತ ದಂಪತಿಗಳ ಸುಪುತ್ರಿ.
ಬದಲಾದ ಕಾಲದಲ್ಲಿ ನಾವು ಇಂತಹ ಪರಿಕರಕೊಳ್ಳುವ ಮೊದಲು ನಮಗೆಷ್ಟು ಇದು ಪ್ರಯೋಜನಕಾರಿ ಎಂದು…
ಐತಿಹಾಸಿಕ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ …
ರಾಸಾಯನಿಕಗಳನ್ನು ಹೊಂದಿರುವ ಗೊಬ್ಬರದ ಅತಿಯಾದ ಬಳಕೆಯಿಂದಾಗಿ ಭೂಮಿಯಲ್ಲಿ ಎರೆಹುಳು ಸೇರಿದಂತೆ ಎಲ್ಲ ಜೀವಿಗಳು…
ಕರ್ನಾಟಕದ ಹಲವೆಡೆ ಕಾಫಿ ನವೋದ್ಯಮಕ್ಕೆ ಅವಕಾಶಗಳನ್ನು ಸೃಷ್ಟಿಸಿ, ಸ್ವ ಸಹಾಯ ಗುಂಪುಗಳ ಸುಮಾರು…
ಕೃಷಿ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ. …
ಬೇಸಿಗೆಯಲ್ಲಿ ಈ ಬಾರಿ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್…