ಅಂದು ಶಿಕ್ಷಕರ ದಿನಾಚರಣೆ. ನಾನು ನನ್ನ ಪುತ್ರನೊಂದಿಗೆ ಅವನು ಕಲಿತ ಪುತ್ತೂರಿನ ಅಂಬಿಕಾ ವಿದ್ಯಾಲಯದ ಸುಬ್ರಹ್ಮಣ್ಯ ನಟ್ಟೋಜರನ್ನು ಭೇಟಿ ಆಗುವ ಉದ್ದೇಶದಿಂದ ಅಂಬಿಕಾ ವಿದ್ಯಾಲಯಕ್ಕೆ ಹೋಗಿದ್ದೆವು.
ಅಲ್ಲಿ ಶಿಕ್ಷಕರ ಮತ್ತು ಮಕ್ಕಳ ಅದ್ಭುತವಾದ ,ಸಂಸ್ಕಾರಯುತ ಲೋಕ ನಮ್ಮ ಮುಂದೆ ತೆರೆದುಕೊಂಡಿತ್ತು.ಶಿಕ್ಷಕರ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದ ಮಕ್ಕಳೊಂದಿಗೆ ನಾವೂ ಸಭಾಂಗಣದಲ್ಲಿ ಹೋಗಿ ಕುಳಿತೆವು.ಮಕ್ಕಳು ಶಿಕ್ಷಕರನ್ನು ಪಕ್ಕದಲ್ಲಿ ಕೂರಿಸಿ ತಮ್ಮದೇ ಕಲ್ಪನೆಯ ಶಿಕ್ಷಕರ ದಿನಾಚರಣೆಯನ್ನು ಆಚರಿಸುತ್ತಿದ್ದರು. ಪುಟ್ಟ ಮಕ್ಕಳು ಗುರು ಹಿರಿಯರ ಚರಣಗಳಿಗೆ ಶಿರಬಾಗಿ ನಮಿಸಿ ಆಶೀರ್ವಾದ ಪಡಕೊಳ್ಳುವ ದೃಶ್ಯ ಕಂಡು ನಿಬ್ಬೆರಗಾದೆವು. ಕೆಲವು ಮಕ್ಕಳಂತೂ ನಮ್ಮೆಡೆಗೂ ಬಂದು ಹೂವನ್ನಿತ್ತು ಶಿರಬಾಗಿ ನಮಿಸಿ ಪ್ರೀತಿಯ ನುಡಿಗಳನ್ನಾಡಿದ್ದು ನಮ್ಮನ್ನು ಮಂತ್ರ ಮುಗ್ಧರನ್ನಾಗಿಸಿದ್ದೂ ನಿಜ.
ಈವತ್ತಿನ ತಳಕು ಬಳುಕಿನ ಸ್ವೇಚ್ಚಾ ಸಮಾಜದಲ್ಲಿ ಪುಟ್ಟ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಬೆಳೆಸಿದ,ಬೆಳೆಸುವ ಪರಿ ನಿಜಕ್ಕೂ ಪ್ರಶಂಸನೀಯ. ಭಾರತೀಯತೆ,ಸನಾತನತೆ ಅವಿನಾಶಿನಿ ಎಂಬುದ ಕಂಡು ಮನಸ್ಸು ಸಂತಸಗೊಂಡದ್ದೂ ಹೌದು.
ವಂದೇ ಗುರೂಣಾಂ ಚರಣಾರವಿಂದೇ
ಸಂಧರ್ಶಿತಸ್ವಾತ್ಮ ಸುಖಾವಬೋಧೇ
ಜನಸ್ಯಯೇ ಜಾಂಗಲಿಕಾಯಮಾನೇ
ಸಂಸಾರ ಹಾಲಹಲಮೋಹಶಾಂತ್ಯೈ…
ಎಂದು ಮಕ್ಕಳು ಶಿಕ್ಷಕ ಸಮಾಜವನ್ನು ಪೂಜಿಸಿದ ಆ ಕ್ಷಣಗಳಲ್ಲಿ ನಾವೂ ಅಲ್ಲಿದ್ದುದು ನಿಜಕ್ಕೂ ಅವಿಸ್ಮರಣೀಯ. ಇಂಥಹ ಧನ್ಯ ಶಿಕ್ಷಕ ವಿದ್ಯಾರ್ಥಿ ಸಮೂಹ ದೇಶದೆಲ್ಲೆಡೆ ಬೆಳೆದು ಬರಲೆಂಬ ಆಶಯ ನಮ್ಮೆಲ್ಲರದಾಗಲಿ.
ಈ ಬಾರಿ ಫೆಬ್ರವರಿ ತಿಂಗಳಲ್ಲಿ ವಾಡಿಕೆಗಿಂತ 2.5 ಡಿಗ್ರಿ ಸೆಲ್ಸಿಯಸ್ ನಷ್ಟು ಬಿಸಿಲು…
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಮತ್ತು ನಿರ್ವಾಹಕರ ಮೇಲೆ ಪ್ರಯಾಣಿಕರು…
ಕೃಷಿ ಹಾಗೂ ರೈತರ ಅಭ್ಯುದಯವೇ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಮೂಲ ಆಶಯವಾಗಿದೆ…
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?