Advertisement
ವಿಶೇಷ ವರದಿಗಳು

ಶಿರಾಡಿ ಘಾಟಿ ಬ್ಲಾಕ್ : ಪದೇ ಪದೇ ಉಂಟಾಗುವ ಸಮಸ್ಯೆಗೆ ಪರಿಹಾರ ಏನು ?

Share

ಶಿರಾಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಘಾಟಿಯಲ್ಲಿ  ರಸ್ತೆ ಬ್ಲಾಕ್ ಆಗಿದ್ದು ವಾಹನಗಳ ಸಾಲು ಸಾಲು ಕಂಡುಬಂದಿದೆ. ಶುಕ್ರವಾರ ಬೆಳಗ್ಗಿನವರೆಗೂ ರಸ್ತೆ ಬ್ಲಾಕ್ ಮುಂದುವರಿದಿದ್ದು , ರಸ್ತೆಯಲ್ಲಿ ಕಾರಿ ಕೆಟ್ಟು ನಿಂತು ಸಮಸ್ಯೆಯಾಗಿದೆ. ಇದೀಗ ಟ್ರಾಫಿಕ್ ಜಾಂ ಸರಿಯಾಗಿದ್ದು ಸುಗಮ ಸಂಚಾರ ಇದೆ. ಆದರೆ ಪದೇ ಪದೇ ಘಾಟಿ ರಸ್ತೆಯಲ್ಲಿ ಉಂಟಾಗುವ ಈ ಸಮಸ್ಯೆಗೆ ಪರಿಹಾರ ಏನು ?

ಕಳೆದ ಹಲವು ದಿನಗಳಿಂದ ಇದೇ ರೀತಿ ಪದೇಪದೇ ಬ್ಲಾಕ್ ಆಗುತ್ತಿದ್ದು ಪ್ರಯಾಣಿಕರು ಪರದಾಟ ನಡೆಸುವಂತಾಗಿದೆ. ಬೆಳಗಿನ ಜಾವ  ಮಂಗಳೂರು, ಸುಬ್ರಹ್ಮಣ್ಯ, ಪುತ್ತೂರು ತಲುಪಬೇಕಾದ ಬಸ್ಸುಗಳು ತಡವಾಗುತ್ತಿದೆ. ಹೀಗಾಗಿ ಪ್ರಯಾಣಿಕರು  ಸಂಕಷ್ಟ ಪಡುವಂತಾಗಿದೆ . ಇಂದು ಕೂಡಾ ಶಿರಾಡಿ ಘಾಟ್ ಬ್ಲಾಕ್ ಆಗಿ ಪ್ರಯಾಣಿಕರು ಪರದಾಟ ನಡೆಸುವಂತಾಯಿತು. ಬೆಳಗ್ಗೆ 5 ಗಂಟೆಗೆ ತಲುಪಬೇಕಾದ ಬಸ್ಸುಗಳು  ಬೆಳಗ್ಗೆ 8.30 ರ ಹೊತ್ತಿಗೆ ತಲಪಿದವು.

ಸಕಲೇಶಪುರ – ಗುಂಡ್ಯ ನಡುವೆ ಆಗಾಗ ರಸ್ತೆ ಬ್ಲಾಕ್ ಆಗುತ್ತಿದೆ. ಘನ ವಾಹನಗಳು ಕೆಟ್ಟು ನಿಲ್ಲುವುದು  ಹಾಗೂ ಸೈಡ್ ಗೆ ಹೋಗುವುರಿಂದ ಇತರ ವಾಹನಗಳ ಓಡಾಟಕ್ಕೆ ಕಷ್ಟವಾಗುತ್ತಿದೆ. ಬೆಳಗಿನ ಜಾವ ನೂರಾರು ಬಸ್ಸುಗಳು ಬೆಂಗಳೂರು ಕಡೆಯಿಂದ ಆಗಮಿಸುವ ವೇಳೆ ಒಮ್ಮೆಲೇ ರಸ್ತೆ ಬ್ಲಾಕ್ ಆಗುತ್ತಿದೆ. ಈ ರೀತಿಯಾಗಿ ಕಳೆದ ಹಲವು ದಿನಗಳಿಂದ ಸಮಸ್ಯೆಯಾಗುತ್ತಿದ್ದು ಜಿಲ್ಲಾಡಳಿತ , ಪೊಲೀಸ್ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಬೆಳಗಿನ ಜಾವ ಲಾರಿಗಳ ಓಡಾಟಕ್ಕೆ ತಡೆ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ.

ಬೆಳಗ್ಗೆ ಸುಬ್ರಹ್ಮಣ್ಯ ತಲುಪಬೇಕಾದ ಬಸ್ಸು ಇನ್ನೂ ಶಿರಾಡಿ ಘಾಟಿಯಲ್ಲಿಯೇ ಇದೆ. ನಿಧಾನವಾಗಿ ಚಲಿಸುತ್ತಿದೆ. ರಸ್ತೆ ಬ್ಲಾಕ್ ಆಗಿರುವುದು  ಸದ್ಯ ಸಮಸ್ಯೆಗೆ ಕಾರಣವಾಗಿದೆ. ಪದೇ ಪದೇ ಈ ರೀತಿ ಬ್ಲಾಕ್ ಆಗುತ್ತಿದೆ ಎಂದು ಬಸ್ಸು ಚಾಲಕ ಹೇಳುತ್ತಾರೆ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಹೇಳುತ್ತಾರೆ ಪ್ರಯಾಣಿಕ ಶಂಕರ್ ಕುಮಾರ್.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ಎಲೆಚುಕ್ಕೆ ರೋಗ | ತಕ್ಷಣದ ಪರಿಹಾರಕ್ಕಿಂತ ವೈಜ್ಞಾನಿಕ ನಿರ್ವಹಣೆ ಮುಖ್ಯ | 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ ಪರಿಹಾರ

ಅಡಿಕೆ ಎಲೆಚುಕ್ಕೆ ರೋಗಕ್ಕೆ ತಕ್ಷಣದ ಪರಿಹಾರವಿಲ್ಲ, 3 ವರ್ಷದ ಅಧ್ಯಯನದ ಬಳಿಕವೇ ಅಂತಿಮ…

59 minutes ago

ಸರ್ಕಾರದ ಸೌಲಭ್ಯಕ್ಕೆ ‘ಫ್ರೂಟ್ಸ್ ಐಡಿ’ ಕಡ್ಡಾಯ | ರೈತರಿಗೆ ಸೂಚನೆ

ಸರ್ಕಾರದ ಸೌಲಭ್ಯ ಪಡೆಯಲು ರೈತರಿಗೆ ‘FRUITS ID’ ಕಡ್ಡಾಯ. ನೋಂದಣಿ ಮಾಡದಿದ್ದರೆ ಭವಿಷ್ಯದ…

5 hours ago

ಗದಗ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ತಾಪಮಾನ | ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿ

ಗದಗ ಜಿಲ್ಲೆಯಲ್ಲಿ ಮುಂದಿನ 3-6 ದಿನ ತೀವ್ರ ಬಿಸಿಗಾಳಿ ಸಾಧ್ಯತೆ. ಸಾರ್ವಜನಿಕರು ಆರೋಗ್ಯದ…

5 hours ago

ಅಡಿಕೆ ಎಲೆ ಚುಕ್ಕಿ ರೋಗ ನಿರ್ವಹಣೆ | ಗುತ್ತಿಗಾರಿನ ಪ್ರಾತ್ಯಕ್ಷಿಕೆ ತೋಟಕ್ಕೆ ಸಿಪಿಸಿಆರ್‌ಐ ನಿರ್ದೇಶಕರ ಭೇಟಿ | ವೈಜ್ಞಾನಿಕ ಕ್ರಮಗಳು ರೈತರಿಗೆ ಆಶಾಕಿರಣ

ಅಡಿಕೆ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಪ್ರಾತ್ಯಕ್ಷಿಕೆ ಮುಂದುವರಿದಿದೆ. ವೈಜ್ಞಾನಿಕ ಕ್ರಮಗಳು ಮತ್ತು…

17 hours ago

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ – ಆಲಿಕಲ್ಲು ಮಳೆಯಿಂದ ರೈತರ ಬೆಳೆ ನಷ್ಟ

ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಬೆಳೆಗಳಿಗೆ ಹಾನಿಯಾಗಿದೆ.…

1 day ago

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!

ಕರ್ನಾಟಕದಲ್ಲಿ ಏಪ್ರಿಲ್ 6ರಿಂದ ಮಳೆ ಕಡಿಮೆಯಾಗಲಿದೆ. ರಾಜ್ಯಾದ್ಯಂತ ಬಿಸಿಲು ಮತ್ತು ತಾಪಮಾನ ಏರಿಕೆ…

2 days ago