ಸುಬ್ರಹ್ಮಣ್ಯ: ಮಂಗಳೂರು – ಬೆಂಗಳೂರು ರೈಲು ಹಳಿಯಲ್ಲಿ ಸುಬ್ರಹ್ಮಣ್ಯ ರೈಲು ಸ್ಟೇಶನ್ ನಂತರದ ಮಾರ್ಗದ ಅಲ್ಲಲ್ಲಿ ಹಳಿಗೆ ಮಣ್ಣು ಕುಸಿತ ಸಂಭವಿಸುತ್ತಿದೆ.
ಈ ಬಾರಿಯೂ ಮಳೆಗೆ ಸಿರಿಬಾಗಿಲು , ಎಡಕುಮೇರಿ , ಸಕಲೇಶಪುರ ನಡುವೆ ಭೂಕುಸಿತ ಉಂಟಾಗುತ್ತಿದೆ. ಎರಡು ದಿನಗಳ ಹಿಂದೆ ಭೂಕುಸಿತ ಉಂಟಾಗಿ ರೈಲು ಸಂಚಾರ ಸ್ಥಗಿತಗೊಂಡಿತ್ತು. ಶುಕ್ರವಾರ ಮೈಸೂರು ವಿಭಾಗದ ರೈಲ್ವೇ ಅಧಿಕಾರಿಗಳು ರೈಲು ಮಾರ್ಗದಲ್ಲಿ ಸಂಚರಿಸಿ ಸುರಕ್ಷತೆಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ. ಕಳೆದ ಬಾರಿ ಭಾರೀ ಮಳೆಗೆ ಶಿರಾಡಿ ಘಾಟ್ ಕುಸಿತಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಮಳೆಯ ಆರಂಭದಲ್ಲೇ ಕುಸಿತದ ಹಿನ್ನೆಲೆಯಲ್ಲಿ ಈಗ ಪರಿಶೀಲನೆ ನಡೆಸಿದ್ದಾರೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel