ಉಪ್ಪಿನಂಗಡಿ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ರೈಲರ್ ಲಾರಿಯೊಂದು ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿಯಾಗಿದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮೃತಪಟ್ಟ ಧಾರುಣ ಘಟನೆ ಶಿರಾಡಿ ಬಳಿಯ ಉದನೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಈ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಟ್ರೈಲರ್ ಲಾರಿ ಕಬ್ಬಿಣದ ಪೈಪ್ ಗಳನ್ನು ಹೊತ್ತುಕೊಂಡು ಬರುತ್ತಿತ್ತು ಎನ್ನಲಾಗಿದೆ. ಅದು ಉದನೆ ಬಳಿ ತಲುಪುತ್ತಲೇ ಚಾಲಕನ ನಿಯಂತ್ರಣ ತಪ್ಪಿ ಕಾರಿನ ಮೇಲೆ ಮಗುಚಿಬಿದ್ದಿದೆ. ಕಾರಿನಲ್ಲಿದ್ದ ಸುಮಾರು ಮೂರು ಮಂದಿ ಮೃತಪಟ್ಟಿದ್ದು ಕಾರಿನಲ್ಲಿದ್ದವರನ್ನು ಹೊರತೆಗೆಯಲು ಹರಸಹಾಸ ಪಡಲಾಗುತ್ತಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel